Site icon Vistara News

OM Puri: ಹೊಟ್ಟೆಪಾಡಿಗಾಗಿ ಚಹಾ ಅಂಗಡಿಯಲ್ಲಿ ಲೋಟ ತೊಳೆಯುತ್ತಿದ್ದರು ಈ ಹೆಸರಾಂತ ನಟ!

OM Puri

ಎಷ್ಟೇ ದೊಡ್ಡ ಮನೆತನದಿಂದ ಬಂದಿರಲಿ ಚಿತ್ರರಂಗದಲ್ಲಿ (film industry) ತನ್ನ ಸ್ವಂತ ಪರಿಶ್ರಮವಿಲ್ಲದೆ ಸ್ಟಾರ್ (star) ಆಗಲು ಸಾಧ್ಯವೇ ಇಲ್ಲ. ಇವತ್ತಿನ ಹಲವಾರು ಸೂಪರ್ ಸ್ಟಾರ್ ಗಳು (super star) ಒಂದು ಕಾಲದಲ್ಲಿ ಬೀದಿ ಬದಿಯಲ್ಲಿ ಮಲಗಿದ್ದರು, ಸಣ್ಣಪುಟ್ಟ ಕೆಲಸಗಳನ್ನು ಮಾಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು.

ಬಾಲಿವುಡ್ ನ (bollywood) ಶಾರುಖ್ ಖಾನ್ (Shah Rukh Khan) , ಅಮಿತಾಬ್ ಬಚ್ಚನ್ (Amitabh Bachchan) ಕೂಡ ಒಂದು ಕಾಲದಲ್ಲಿ ಸಾಕಷ್ಟು ಕಷ್ಟಗಳನ್ನು ಸಹಿಸಿಯೇ ಮೇಲಕ್ಕೆ ಏರಿದವರು. ಹೀಗೆಯೇ ಕಷ್ಟಪಟ್ಟು ಮನೆ ಮಾತಾಗಿರುವವರಲ್ಲಿ ಬಾಲಿವುಡ್ ನಲ್ಲಿ ವಿವಿಧ ಪಾತ್ರಗಳಿಂದ ಪ್ರಸಿದ್ದಿ ಪಡೆದ ನಟ ಓಂ ಪುರಿ (OM Puri) ಕೂಡ ಒಬ್ಬರು.

ಜನನ ದಾಖಲೆಯೇ ಇಲ್ಲ

ಹರಿಯಾಣದ ಅಂಬಾಲದಲ್ಲಿ ಜನಿಸಿದ್ದ ಓಂ ಪುರಿ ಅವರ ತಂದೆ ಟೆಕ್ ಚಂದ್ ಪುರಿ ಭಾರತೀಯ ಸೇನೆಯಲ್ಲಿದ್ದರು ಮತ್ತು ರೈಲ್ವೇಯಲ್ಲಿಯೂ ಕೆಲಸ ಮಾಡಿದ್ದರು. ಆದರೂ ಓಂ ಪುರಿ ಅವರು ಯಾವುದೇ ಜನನ ಪ್ರಮಾಣಪತ್ರವನ್ನು ಹೊಂದಿಲ್ಲ. ಹೀಗಾಗಿ ಅವರ ಜನ್ಮ ದಿನಾಂಕದ ಬಗ್ಗೆ ಅವರ ಕುಟುಂಬಕ್ಕೆ ಖಚಿತವಾಗಿ ತಿಳಿದಿಲ್ಲ.

ದಸರಾ ಆರಂಭವಾದ ಎರಡು ದಿನಗಳ ಅನಂತರ ತಾನು ಜನಿಸಿರುವುದಾಗಿ ತಾಯಿ ಹೇಳುತ್ತಿದ್ದರು ಎನ್ನುತ್ತಾರೆ ಓಂ ಪುರಿ.

ಇದನ್ನೂ ಓದಿ: Riteish Deshmukh: ರಾಮಮಂದಿರಕ್ಕೆ ಭೇಟಿ ಕೊಟ್ಟ ರಿತೇಶ್ ದೇಶಮುಖ್ ದಂಪತಿ!

ಸ್ವಂತ ಪರಿಶ್ರಮದಿಂದ ಖ್ಯಾತಿ

ಓಂಪುರಿ ಅವರ ಬಾಲ್ಯವು ತುಂಬಾ ಸುಲಭವಾಗಿರಲಿಲ್ಲ. ಇಂದು ನಾವು ಅವರ ಕುಟುಂಬದ ಬಗ್ಗೆ ಮಾತನಾಡುತ್ತೇವೆ. ಆದರೆ ಅವರು ಹಿಂದುಳಿದ ಹಿನ್ನೆಲೆಯಿಂದ ಬಂದು ದೊಡ್ಡ ಹೆಸರನ್ನು ತಮ್ಮ ಸ್ವಂತ ಪರಿಶ್ರಮದಿಂದಲೇ ಗಳಿಸಿದರು.
ಎಂಟು ಮಂದಿಯಲ್ಲಿ ಇಬ್ಬರು ಮಾತ್ರ ಬದುಕಿ ಉಳಿದರು.

ಓಂ ಪುರಿ ಅವರ ಎಂಟು ಸಹೋದರರು ಮತ್ತು ಸಹೋದರಿಯರಲ್ಲಿ ಕಿರಿಯರಾಗಿದ್ದರು. ದುರದೃಷ್ಟವಶಾತ್ ಅವರ ಎಲ್ಲಾ ಸಹೋದರರು ಮತ್ತು ಸಹೋದರಿಯರು ಬಾಲ್ಯದಲ್ಲೇ ಸರಿಯಾದ ವೈದ್ಯಕೀಯ ಸೌಲಭ್ಯಗಳ ಕೊರತೆಯಿಂದಾಗಿ ನಿಧನರಾದರು. ಅವರ ಹಿರಿಯ ಸಹೋದರ ವೇದ್ ಮತ್ತು ಪುರಿ ಮಾತ್ರ ಬದುಕುಳಿದರು.


ಕಷ್ಟದ ಜೀವನ

ತಂದೆ ರೈಲ್ವೇ ಉದ್ಯೋಗಿಯಾಗಿದ್ದಾಗ ಸಿಮೆಂಟ್ ಕಳ್ಳತನದ ಆರೋಪದಿಂದ ಜೈಲು ಸೇರಿದ್ದರು. ಇದರ ಬಳಿಕ ಅವರ ಕುಟುಂಬವು ನಿರಾಶ್ರಿತವಾಯಿತು. ಈ ಸಮಯದಲ್ಲಿ ಓಂ ಪುರಿ ಅವರ ಸಹೋದರ ವೇದ್ ಪ್ರಕಾಶ್ ಪುರಿ ರೈಲು ನಿಲ್ದಾಣಗಳಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಓಂ ಪುರಿ ಅವರು ಸ್ಥಳೀಯ ಚಹಾ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಕಷ್ಟದ ದಿನಗಳಲ್ಲಿ ತಮ್ಮ ಕುಟುಂಬವನ್ನು ಬೆಂಬಲಿಸಲು ಇವರು ರೈಲು ಹಳಿಗಳಿಂದ ಕಲ್ಲಿದ್ದಲು ಸಂಗ್ರಹಿಸುತ್ತಿದ್ದರು.

ಕಷ್ಟವಿದ್ದರೂ ಓದು ಮುಂದುವರಿಸಿದರು

ಎಷ್ಟೇ ಕಷ್ಟವಿದ್ದರೂ ಪುರಿ ಅವರ ಅಧ್ಯಯನವನ್ನು ಬಿಡಲಿಲ್ಲ. ದೆಹಲಿಯ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾಗೆ ಸೇರಿ, ಅಲ್ಲಿ ಅವರು ನಾಸಿರುದ್ದೀನ್ ಷಾ ಅವರನ್ನು ಭೇಟಿಯಾದರು. ಷಾ ಅವರು ಪುರಿ ಅವರನ್ನು ಪುಣೆಯ ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾಕ್ಕೆ ಕರೆ ತಂದರು.

ಷಾ ಅವರೊಂದಿಗೆ ಕೆಲಸ

ಓಂ ಪುರಿ ಮತ್ತು ನಾಸಿರುದ್ದೀನ್ ಷಾ ಅವರೊಂದಿಗೆ ಒಟ್ಟಿಗೆ 26 ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಅವರ ಮೊದಲ ಚಿತ್ರ 1977ರಲ್ಲಿ ಭೂಮಿಕಾ ಮತ್ತು ಅವರ ಕೊನೆಯ ಚಿತ್ರ 2009 ರಲ್ಲಿ ಬೋಲೋ ರಾಮ್.


ಹೃದಯಾಘಾತದಿಂದ ನಿಧನ

ಓಂ ಪುರಿ ಅವರು ಮುಂಬಯಿ ನ ಅಂಧೇರಿಯಲ್ಲಿರುವ ಅವರ ನಿವಾಸದಲ್ಲಿ ಹೃದಯಾಘಾತದಿಂದ 2017ರ ಜನವರಿ 6 ರಂದು ನಿಧನರಾದರು. ಚಾಚಿ 420 (1997), ಹೇರಾ ಫೆರಿ (2000), ಚೋರ್ ಮಚಾಯೆ ಶೋರ್ (2002), ದೀವಾನೆ ಹ್ಯೂ ಪಾಗಲ್, ಚುಪ್ ಚುಪ್ ಕೆ, ಕಿಸ್ಮೆತ್ ಕನೆಕ್ಷನ್ ಮತ್ತು ಮಲಾಮಾಲ್ ವೀಕ್ಲಿ (2006) ಮತ್ತು ಓಹ್ ಮೈ ಗಾಡ್, ಧೋಲ್ ಸೇರಿದಂತೆ ಹಲವಾರು ಚಿತ್ರಗಳಲ್ಲಿ ಅವರು ನಟಿಸಿದ್ದರು.

ಭಾರತೀಯ, ಬ್ರಿಟಿಷ್ ಮತ್ತು ಅಮೆರಿಕನ್ ಚಲನಚಿತ್ರಗಳಲ್ಲಿ ನಟಿಸಿರುವ ಅವರಿಗೆ ನ್ಯಾಷನಲ್ ಫಿಲಂ ಅವಾರ್ಡ್, ಅತ್ಯತ್ತಮ ನಟ ಪ್ರಶಸ್ತಿ ಸೇರಿದಂತೆ ಹಲವಾರು ಪುರಸ್ಕಾರಗಳು ಲಭಿಸಿದೆ.

Exit mobile version