ಬೆಂಗಳೂರು: ಬಾಲಿವುಡ್ ನಟಿಯರ ಜತೆ (Orry Reveals Getting Paid) ಓರಿ ಎನ್ನುವ ಯುವಕ ಆಗಾಗ ಕಾಣಿಸಿಕೊಳ್ಳುತ್ತಾರೆ. ಪಾರ್ಟಿಗಳಂತೂ ಓರಿ ಇಲ್ಲದೆ ಅಪೂರ್ಣ ಎಂದೇ ಹೇಳಬೇಕು. ಜಾನ್ವಿ ಕಪೂರ್, ನೀಸಾ ದೇವಗನ್, ಸಾರಾ ಅಲಿ ಖಾನ್ ಮತ್ತು ಅನನ್ಯಾ ಪಾಂಡೆ (bollywood celebrities) ಅವರೊಂದಿಗೆ ಉತ್ತಮ ಸ್ನೇಹಿತರಾಗಿದ್ದಾರೆ ಈ ಓರಿ. ಇತ್ತೀಚೆಗೆ ಜಾಮ್‌ನಗರದಲ್ಲಿ ಅನಂತ್ ಅಂಬಾನಿ ವಿವಾಹ ಪೂರ್ವ ಸಮಾರಂಭದಲ್ಲಿ (anant ambani pre wedding) ರಿಹಾನ್ನಾ ಅವರೊಂದಿಗೆ ಕಾಣಿಸಿಕೊಂಡು ಓರಿ ಸಖತ್ ಸುದ್ದಿಯಾಗಿದ್ದರು. ಈ ರೀತಿ ಹಲವು ಸಮಾರಂಭಗಳಲ್ಲಿ ಹಾಜಾರಾಗಲು ಓರಿ ಪಡೆಯುವ ಸಂಭಾವನೆ ಕೇಳಿದರೆ ಶಾಕ್ ಆಗೋದು ಗ್ಯಾರಂಟಿ.
ಓರಿಯನ್ನು ಬಾಲಿವುಡ್ ʻಬೆಸ್ಫ್ರೆಂಡ್ ಫಾರೆವರ್ʼ ಎಂದೇ ಹೇಳುತ್ತಾರೆ. ಓರಿ ತನ್ನ ಫ್ಯಾಷನ್ನಿಂದಾಗಿಯೂ ಸುದ್ದಿಯಾಗುತ್ತಾರೆ. ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ನ ಚೇರ್ ಪರ್ಸನ್ ಆಫೀಸ್ನಲ್ಲಿ ಸ್ಪೆಷಲ್ ಪ್ರಾಜೆಕ್ಟ್ ಮ್ಯಾನೇಜರ್ ಆಗಿದ್ದಾರೆ.
ಇದನ್ನೂ ಓದಿ: Arbbie Movie: ಅಣ್ಣಾಮಲೈ ನಟಿಸಿದ ಮೊದಲ ಕನ್ನಡದ ಸಿನಿಮಾ ಟ್ರೈಲರ್ ಔಟ್!
ಇದೀಗ ಮಾಧ್ಯಮವೊಂದರ ಸಂದರ್ಶನದಲ್ಲಿ ಹಲವು ಸಮಾರಂಭಗಳಲ್ಲಿ ಹಾಜಾರಾಗಲು ಪಡೆಯುವ ಸಂಭಾವನೆ ಕುರಿತು ಮಾತನಾಡಿದ್ದಾರೆ. ʻʻಕಾರ್ಯಕ್ರಮಗಳಿಗೆ ಹಾಜರಾಗಲು ಮುಖ್ಯ ಕಾರಣ ಎಲ್ಲಿರಿಗೂ ಸಂತೋಷ ನೀಡಬೇಕು ಎಂದು. ಸೆಲೆಬ್ರಿಟಿಗಳು ನನ್ನನ್ನು ಮದುವೆಗೆ ಕರೆಯುತ್ತಾರೆ. 15ರಿಂದ 30 ಲಕ್ಷದವರೆಗೆ ಸಂಭಾವನೆ ನೀಡಿ ಸಂತೋಷಪಡುತ್ತಾರೆ. ನಾನು ಅತಿಥಿಯಾಗಿ ಅಲ್ಲಿ ಭಾಗಿಯಾಗಲ್ಲ. ಒಳ್ಳೆಯ ಸ್ನೇಹಿತನಾಗಿ ಹೋಗುತ್ತೇನೆʼʼಎಂದರು.
ʻʻಅಷ್ಟೇ ಅಲ್ಲದೇ ಸಿನಿಮಾ ಇಂಡಸ್ಟ್ರಿಯಲ್ಲಿ ಬಹುತೇಕ ಎಲ್ಲರೂ ಪರಿಚಯ ಇದ್ದಾರೆ. ನಾನು ಹಾಗೂ ಹಲವಾರು ಸೆಲೆಬ್ರಿಟಿಗಳು ಒಂದೇ ಸಮಯದಲ್ಲಿ ಓದಿದವರು. ಅವರಲ್ಲಿ ಕೆಲವರನ್ನು ಮಾತ್ರ ಫ್ರೆಂಡ್ಸ್ ಆಗಿ ನೋಡುತ್ತೇನೆ. ಅವರಲ್ಲಿ ಭೂಮಿ ಪಡ್ನೆಕರ್ ಕೂಡಾ ಒಬ್ಬರು. ನಮಗೆ ಹಲವಾರು ವರ್ಷಗಳ ಪರಿಚಯವಿಲ್ಲ. ಆದರೆ ನಾವು ಈಗ ಒಳ್ಳೆಯ ಸ್ನೇಹಿತರು ಎಂದಿದ್ದಾರೆʼʼ ಎಂದಿದ್ದಾರೆ.
ಓರಿ ಶಾರುಖ್ ಖಾನ್ ಮಗಳು ಸುಹಾನಾ ಖಾನ್ಗೂ ಬೆಸ್ಟ್ ಫ್ರೆಂಡ್. ಸುಹಾನಾ ಖಾನ್ ಜತೆ ಓರಿ ಹಲವಾರು ಸಲ ಪಾರ್ಟಿಗಳಲ್ಲಿ ಕಾಣಿಸಿಕೊಂಡಿದ್ದಾರೆ.