Site icon Vistara News

Sushant Singh Rajput: ಪುಸ್ತಕದ ಮೂಲಕ ಸುಶಾಂತ್‌ ನೆನಪುಗಳನ್ನು ತೆರೆದಿಟ್ಟ ಸಹೋದರಿ!

Pain A Portal to Enlightenment bokk release by Sushant Singh Rajput's Sister

ಬೆಂಗಳೂರು: ಸುಶಾಂತ್‌ ಸಿಂಗ್‌ (Sushant Singh Rajput) ಅವರು 2020ರ ಜೂನ್‌ 14ರಂದು ಆತ್ಮಹತ್ಯೆಗೆ ಶರಣಾಗಿದ್ದರು. ಸುಶಾಂತ್ ಸಿಂಗ್ ರಜಪೂತ್ ಅವರ ಕುರಿತಾಗಿ ಅವರ ಸಹೋದರಿಯರು ಯಾವಾಗಲೂ ಮಾಧ್ಯಮಗಳ ಸಂದರ್ಶನದಲ್ಲಿ ಅನೇಕ ವಿಚಾರಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಸುಶಾಂತ್‌ ಸಿಂಗ್‌ ಅವರ ಪರವಾಗಿ ನಿಲ್ಲುತ್ತಾರೆ. ಅಮೆರಿಕದಲ್ಲಿರುವ ಅವರ ಸಹೋದರಿ ಶ್ವೇತಾ ಸಿಂಗ್ ಕೀರ್ತಿ ಅವರು ತಮ್ಮ ಹೊಸ ಪುಸ್ತಕ “ಪೇನ್: ಎ ಪೋರ್ಟಲ್ ಟು ಎನ್‌ಲೈಟ್‌ಮೆಂಟ್” (Pain: A Portal to Enlightenment) ನಲ್ಲಿ ಸುಶಾಂತ್ ಅವರ ಬಗ್ಗೆ ಬರೆದಿದ್ದಾರೆ. ಪುಸ್ತಕ ಬಿಡುಗಡೆ ಕೂಡ ಆಗಿದೆ.

ಈ ವೇಳೆ ಶ್ವೇತಾ ಸಿಂಗ್ ಅವರು ಸುಶಾಂತ್‌ ಸಿಂಗ್‌ ನಿಧನದ ಬಗ್ಗೆ ನ್ಯಾಯಯುತ ತನಿಖೆ ನಡೆಸಿ ಸತ್ಯವನ್ನು ಬಹಿರಂಗ ಪಡಿಸಬೇಕು ಎಂದು ಆಗ್ರಹಿಸಿದ್ದಾರೆ. ಸುಶಾಂತ್ ಸಿಂಗ್ ರಜಪೂತ್ ಅವರ ಗರ್ಲ್​ಫ್ರೆಂಡ್ ಆಗಿದ್ದ ರಿಯಾ ಚಕ್ರವರ್ತಿ ಈ ಪ್ರಕರಣದ ಪ್ರಮುಖ ಆರೋಪಿ. ಅವರು ಈ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದರು. ಸದ್ಯ ಜಾಮೀನು ಪಡೆದು ಅವರು ಹೊರಗಿದ್ದಾರೆ.

ಪುಸ್ತಕದಲ್ಲಿ ಏನಿದೆ?

ಶ್ವೇತಾ ಸಿಂಗ್ ಕೀರ್ತಿ ಮಾಧ್ಯಮವೊಂದಕ್ಕೆ ಈ ಬಗ್ಗೆ ಮಾತನಾಡಿ ʻʻನ್ಯಾಯಕ್ಕಾಗಿ ಇಂದಿಗೂ ಹೋರಾಡುತ್ತಲೇ ಇದ್ದೇವೆ. ಸಿಬಿಐಗೆ ತನಿಖೆಯನ್ನು ಮಾಡುವಂತೆ ಹೇಳುತ್ತಲೇ ಇದ್ದೇವೆ. ಆದಷ್ಟು ಬೇಗ ಈ ಬಗ್ಗೆ ತಿಳಿಯಲಿದೆʼʼಎಂದರು. ಇದೇ ವೇಳೆ ಶ್ವೇತಾ ತನ್ನ ಅಕ್ಕ ರಾಣಿ ಅವರ ಜತೆ ಕನ್ಯಾಕುಮಾರಿ ದೇವಸ್ಥಾನ, ಶಿವ ದೇವಾಲಯಕ್ಕೆ ಭೇಟಿ ನೀಡಿದರು. ಇದಲ್ಲದೆ, ಅವರು ಮೌಂಟ್ ಬ್ಲಾಂಕ್‌ನಲ್ಲಿರುವ ಸುಶಾಂತ್ ಅವರ ಅಪಾರ್ಟ್ಮೆಂಟ್ ಹೊರಗೆ ಪೋಸ್ ನೀಡಿದ್ದಾರೆ.

ಇದನ್ನೂ ಓದಿ: Sushant Singh Rajput case: ನಟಿ ರಿಯಾ ಚಕ್ರವರ್ತಿಗೆ ಬಿಗ್ ರಿಲೀಫ್! ಬೇಲ್ ಪ್ರಶ್ನಿಸಲ್ಲ ಎಂದ ಕೇಂದ್ರ ಸರ್ಕಾರ

ಶ್ವೇತಾ ಸಿಂಗ್ ಕೀರ್ತಿ ಅವರು ತಮ್ಮ ಪುಸ್ತಕಲ್ಲಿ ಸುಶಾಂತ್‌ ಅವರ ವೃತ್ತಿ ಜೀವನ, ವೈಯಕ್ತಿಕ ಜೀವನ ಬಗ್ಗೆ ಬರೆದುಕೊಂಡಿದ್ದಾರೆ. ʻಸುಶಾಂತ್ ಬಾಲಿವುಡ್‌ನಲ್ಲಿ ಬ್ಯುಸಿಯಾಗಿಬಿಟ್ಟಿದ್ದ. ನನಗೆ ಅವನನ್ನು ಭೇಟಿ ಮಾಡಲು ಸಾಧ್ಯವಾಗುತ್ತಿರಲ್ಲಿಲ್ಲ. 2014 ರಿಂದ 2017 ರವರೆಗೆ ನಾನು ಪ್ರತಿ ವರ್ಷ ಭಾರತಕ್ಕೆ ತೆರಳಿ ಅವನನ್ನು ಭೇಟಿಯಾಗುತ್ತಿದ್ದೆ. ದುರದೃಷ್ಟವಶಾತ್, 2018 ಮತ್ತು 2019ರಲ್ಲಿ ಭೇಟಿ ನೀಡಲು ಸಾಧ್ಯವಾಗಲಿಲ್ಲ. ಜನವರಿ 2020ರಲ್ಲಿ ಪ್ಲ್ಯಾನ್‌ ಕೂಡ ಮಾಡಿಕೊಂಡಿದ್ದೆ. ಕೊನೆಗೂ ಅವನನ್ನು ಮೀಟ್‌ ಆಗಲು ಆಗಲೇ ಇಲ್ಲ. 2020 ರ ಜೂನ್‌ 14ರಂದು ಅವನು ಬಾರದ ಲೋಕಕ್ಕೆ ಹೋಗೆ ಬಿಟ್ಟಿದ್ದ. ಸಾವಿಗೂ ಮುಂಚೆ ನಾಲ್ಕು ದಿನಗಳ ಮೊದಲು ನಾನು ಕಾಲ್‌ ಮಾಡಿದ್ದೆ, ಅಮೆರಿಕಾಗೆ ಬರುವಂತೆ ಹೇಳಿದ್ದೆ. ಜೂನ್‌ 13ರ ರಾತ್ರಿ ನನಗೆ ಸುಶಾಂತ್‌ ಮೃತಪಟ್ಟ ಸುದ್ದಿ ತಿಳಿಯಿತು. ನಾನು ಕೂಗಾಡಲಿಲ್ಲ. ಅಳಲಿಲ್ಲ. ಅಲ್ಲಿಯೇ ಆಘಾತದಲ್ಲಿ ಕುಸಿದು ಬಿದ್ದೆʼʼಎಂದು ಪುಸ್ತದೇಶಾದ್ಯಂತ ಭಾರಿ ಆಘಾತಕದಲ್ಲಿ ಉಲ್ಲೇಖಿಸಿದ್ದಾರೆ.

ದೇಶಾದ್ಯಂತ ಭಾರಿ ಆಘಾತ

ಸುಶಾಂತ್‌ ಸಿಂಗ್‌ ಅವರು ʻಕಾಯ್‌ ಪೋ ಚೆʼ, ʻಎಂಎಸ್ ಧೋನಿʼ, ʻದಿ ಅನ್‌ ಟೋಲ್ಡ್ ಟೇಲ್ʼ, ʻಕೇದಾರನಾಥ್ʼ ಮತ್ತು ʻಚಿಚೋರೆʼಯಂತಹ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದರು. ಸುಶಾಂತ್ ಅವರ ವೈವಿಧ್ಯಮಯ ಸಿನಿಮಾ ಜೀವನ 2020 ರಲ್ಲಿ ಕೊನೆಗೊಂಡಿತು. 2020ರ ಜೂನ್ 14ರಂದು ಬಾಂದ್ರಾದ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಾಗ ಅವರ ವಯಸ್ಸು 34 ಅಷ್ಟೇ. ಈ ಸಾವು ದೇಶಾದ್ಯಂತ ಭಾರಿ ಆಘಾತವನ್ನುಂಟು ಮಾಡಿತ್ತು.

ಇದನ್ನೂ ಓದಿ: Rhea Chakraborty: ಒಟ್ಟಿಗೆ ಕಾಣಿಸಿಕೊಂಡ ರಿಯಾ-ನಿಖಿಲ್‌; ಪಾರ್ಟಿಗೆ ತೆರಳಿದ್ರಂತೆ ಸುಶಾಂತ್‌ ಸಿಂಗ್‌ ಗರ್ಲ್‌ಫ್ರೆಂಡ್‌!

ಸುಶಾಂತ್‌ ಸಿಂಗ್‌ ರಜಪೂತ್‌ ಸಾವಿನ ಬಗ್ಗೆ ಹಲವಾರು ಅನುಮಾನಗಳು ಇದ್ದವು. ಚಿತ್ರರಂಗದಲ್ಲಿ ನಡೆಯುತ್ತಿರುವ ಸ್ವಜನ ಪಕ್ಷಪಾತದಿಂದ ಅವರಿಗೆ ಅನ್ಯಾಯವಾಗುತ್ತಿದೆ. ಆ ಕಾರಣಕ್ಕೆ ಪ್ರಾಣವನ್ನೇ ಕಳೆದುಕೊಂಡಿದ್ದಾರೆ ಎನ್ನುವುದು ಒಂದು ಅನುಮಾನವಾದರೆ, ಯಾರೋ ಆತ್ಮೀಯರೇ ಕೊಲೆ ಮಾಡಿದ್ದಾರೆ ಎಂಬ ವಾದವೂ ಇತ್ತು. ಸಾವಿನ ಸುತ್ತ ಮಾದಕ ವ್ಯಸನ, ಡ್ರಗ್ಸ್‌ ಜಾಲ ಮತ್ತು ಅಕ್ರಮ ಹಣ ವರ್ಗಾವಣೆ ಹೀಗೆ ಹಲವು ಸಂಶಯದ ಹುತ್ತಗಳು ಬೆಳೆದಿದ್ದವು. ಸಿಬಿಐ, ಇ.ಡಿ, ಎನ್‌ಸಿಬಿ ಸೇರಿದಂತೆ ಹಲವು ತನಿಖಾ ತಂಡಗಳು ನಾನಾ ಆಯಾಮಗಳಲ್ಲಿ ತನಿಖೆಯನ್ನು ನಡೆಸುತ್ತಿವೆ. ಪೋಸ್ಟ್‌ ಮಾರ್ಟಂ ವರದಿಗಳ ಪ್ರಕಾರ ಸುಶಾಂತ್‌ ಆತ್ಮಹತ್ಯೆಯೇ ಹೌದಾಗಿದ್ದರೂ ಅದರ ಹಿಂದಿನ ಶಕ್ತಿಗಳು, ಸಿನಿಮಾ ರಾಜಕಾರಣ ಹೊರಬರಬೇಕು ಎನ್ನುವುದು ಅಭಿಮಾನಿಗಳ ಆಗ್ರಹವಾಗಿತ್ತು.

Exit mobile version