ಬೆಂಗಳೂರು: ಬಾಲಿವುಡ್ ನಟಿ ಪರಿಣಿತಿ ಚೋಪ್ರಾ (Parineeti Chopra) ಅವರು ತಮ್ಮ ವೃತ್ತೀ ಜೀವನದ ಆರಂಭಿಕ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಹೋರಾಟ ಜೀವನ ನಡೆಸಿರುವುದಾಗಿ ಪಾಡ್‌ಕಾಸ್ಟ್‌ನ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ತಮ್ಮ ಐದನೇ ಚಿತ್ರದ ಬಳಿಕ ನಟಿ ವ್ಯಾಪಾರ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವುದಾಗಿ ಹೇಳಿಕೊಂಡಿದ್ದಾರೆ. ರಾಜ್ ಶಾಮಾನಿ ಅವರೊಂದಿಗಿನ ಪಾಡ್‌ಕಾಸ್ಟ್ ಚರ್ಚೆಯಲ್ಲಿ ನಟಿ ತನ್ನ ವೃತ್ತಿಜೀವನದ ಆರಂಭಿಕ ದಿನಗಳ ಬಗ್ಗೆ ಮಾತನಾಡಿದ್ದಾರೆ. ಆರಂಭದಲ್ಲಿ ಅಷ್ಟಾಗಿ ಹಣ ಗಳಿಸಿರಲಿಲ್ಲ ಎಂದು ಬಹಿರಂಗಪಡಿಸಿದರು.
ಪರಿಣಿತಿ ಮಾತನಾಡಿ, “ನಾನು ತುಂಬಾ ಶ್ರೀಮಂತ ಹಿನ್ನೆಲೆಯಿಂದ ಬಂದವಳಲ್ಲ. ನಾನು ತುಂಬಾ ಸರಳ, ಮಧ್ಯಮ ವರ್ಗದ ಹುಡುಗಿ. ಆಗ ನನಗೆ ಬಾಲಿವುಡ್ ಹೇಗೆ ಎಂಬುದು ಅರ್ಥವಾಗುತ್ತಿರಲಿಲ್ಲ. ಮುಂಬೈನಲ್ಲಿ ಜನರು ಹೇಗೆ ಕಾರ್ಯನಿರ್ವಹಿಸುತ್ತಾರೆ ಎಂಬುದು ನನಗೆ ನಿಜವಾಗಿ ತಿಳಿದಿರಲಿಲ್ಲ. ದೊಡ್ಡ ವರ್ಗದ ಸ್ನೇಹಿತರು ನನಗೆ ಗೊತ್ತಿರಲಿಲ್ಲ. ನನಗೆ ನನ್ನಲ್ಲಿ ತರಬೇತುದಾರರಾಗಲಿ, ಸ್ಟೈಲಿಸ್ಟ್‌ಗಳಾಗಲಿ ಆಗ ಇರಲಿಲ್ಲ. ಆಗ ತಿಂಗಳಿಗೆ ಸುಮಾರು 2 ಲಕ್ಷ ರೂ, ಕೊಟ್ಟು ತರಬೇತುದಾರರನ್ನು ನೇಮಿಸಿಕೊಳ್ಳುವಂತೆ ಯಾರೋ ಒಬ್ಬರು ಶಿಫಾರಸು ಮಾಡಿದ್ದರು. ಆದರೆ ಆಗ ನನ್ನ ಬಳಿ ಅಷ್ಟಾಗಿ ಹಣ ಇರುತ್ತಿರರಿಲ್ಲ. ಮೂರನೇ ಚಿತ್ರ ಮಾಡುವಾಗ ನನ್ನ ಸಂಭಾವನೆ 4 ಲಕ್ಷ ರೂ. ಆಗಿತ್ತು. ಆ ಸಮಯದಲ್ಲಿ ನನಗೆ ಕೆಲವರು ಯಾಕೆ ಫಿಟ್‌ನೆಸ್ ಟ್ರೈನರ್‌ಗಳನ್ನು ನೀವು ನೇಮಿಸಿಕೊಳ್ಳುತ್ತಿಲ್ಲ? ಎಂದು ಕೇಳುತ್ತಿದ್ದರು. ಆಗ ನನಗೆ ಕೇವಲ 5 ಲಕ್ಷ ರೂ. ಸಂಭಾವನೆ ಆಗಿತ್ತು ಎಂದು ಹೇಳಿದ್ದೆ. ಆ ಬಳಿಕ ಅವರು ನನ್ನ ಸ್ಥಿತಿ ಗತಿ ತಿಳಿದುಕೊಂಡ ನಂತರ ಇವೆಲ್ಲವನ್ನು ನಿಭಾಯಿಸಲು ಸಾಧ್ಯವಾಗುತ್ತಿಲ್ಲ ಎಂದರೆ ನೀವು ವೃತ್ತಿಯಲ್ಲಿ ಇರಬಾರದು ಎಂದು ಹೇಳಿದರುʼʼಎಂದು ನಟಿ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: Lok Sabha Election 2024: ರಾಮಕೃಷ್ಣ ಹೆಗಡೆಯಂತೆ ಲಿಂಗಾಯತರ ಪರ ಗಟ್ಟಿಯಾಗಿ ನಿಂತ ನಾಯಕ ಪ್ರಲ್ಹಾದ್ ಜೋಶಿ ಎಂದ ಯತ್ನಾಳ್
ಸಿನಿಮಾ ವಿಚಾರಕ್ಕೆ ಬಂದರೆ, ಪರಿಣಿತಿ ಪ್ರಸ್ತುತ ದಿಲ್ಜಿತ್ ದೋಸಾಂಜ್ ಅವರೊಂದಿಗೆ ʻಅಮರ್ ಸಿಂಗ್ ಚಮ್ಕಿಲಾʼ ಚಿತ್ರದಲ್ಲಿ ನಟಿಸಿದ್ದಾರೆ. ಈಗಾಗಲೇ ಸಿನಿಮಾ ಇದು ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್‌ಗೆ ಆಗುತ್ತಿದೆ. ಸಿನಿಮಾ ಭಾರಿ ಮೆಚ್ಚುಗೆ ಪಡೆದುಕೊಂಡಿದೆ.
ನಟಿ ಪರಿಣಿತಿ ಚೋಪ್ರಾ (parineeti chopra) ಅವರು ಈ ಸಿನಿಮಾದಲ್ಲಿ ಅಮರ್ ಜೋತ್ ಪಾತ್ರ ಮಾಡಿದ್ದಾರೆ. ದಿವಂಗತ ಗಾಯಕ ಅಮರ್ ಸಿಂಗ್ ಚಮ್ಕಿಲಾ ಮತ್ತು ಅವರ ಪತ್ನಿ ಅಮರಜೋತ್ ಕೌರ್ ಅವರ ಜೀವನಾಧಾರಿತ ಬಯೋಪಿಕ್ ಸಿನಿಮಾ ಇದು.
ಏನಿದು ಕಥೆ?
ತನ್ನ ಹಾಡುಗಳಿಂದಲೇ ಜನಪ್ರಿಯರಾದ ಗಾಯಕ, ಸಂಗೀತಗಾರ ಅಮರ್ ಸಿಂಗ್ ಚಮ್ಕಿಲಾ ಅವರ ಜೀವನಗಾಥೆಯನ್ನು ಆಧರಿಸಿ ಈ ಸಿನಿಮಾ ನಿರ್ಮಿಸಲಾಗಿದೆ. 1980 ರ ದಶಕದಲ್ಲಿ ಜನಪ್ರಿಯತೆ ಪಡೆದ ʻಪಂಜಾಬ್ ಎಲ್ವಿಸ್ʼ ಎಂದೇ ಖ್ಯಾತಿ ಪಡೆದ ಚಮ್ಕಿಲಾರ ಬದುಕಿನ ಕಥೆಯಿದು . ಈ ಗಾಯಕ ತನ್ನ 27ನೇ ವಯಸ್ಸಿನಲ್ಲಿಯೇ ಕೊಲೆಯಾದರು. ಕಾಂಟ್ರವರ್ಸಿಯಲ್ ಹಾಡುಗಳು ಅಮರ್ ಸಿಂಗ್ ಚಮ್ಕಿಲಾ ಸಾವಿಗೆ ಕಾರಣವಾಗಿರಬಹುದು ಎಂದು ವರದಿಯಾಗಿದೆ.