Site icon Vistara News

Poonam Pandey: ನಿಜಕ್ಕೂ ಪೂನಂ ಪಾಂಡೆ ಸತ್ತಿದ್ದು ಎಲ್ಲಿ? ಕಾನ್ಪುರದಲ್ಲೋ ಪುಣೆಯಲ್ಲೋ?

Poonam Pandey death In Pune Shivam Sharma Makes Shocking Claims

ಬೆಂಗಳೂರು: ಬಾಲಿವುಡ್‌ ನಟಿ, ರೂಪದರ್ಶಿ ಪೂನಂ ಪಾಂಡೆ (Poonam Pandey) (32) ಫೆ.2ರಂದು ಮೃತಪಟ್ಟಿದ್ದಾರೆ. ಗರ್ಭಕಂಠ ಕ್ಯಾನ್ಸರ್‌ನಿಂದ (Cervical Cancer) ಬಳಲುತ್ತಿದ್ದ ಅವರು ಉತ್ತರ ಪ್ರದೇಶದ ಕಾನ್ಪುರದಲ್ಲಿರುವ ತಮ್ಮ ನಿವಾಸದಲ್ಲಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿತ್ತು. ಆದರೀಗ ಪೂನಂ ಪಾಂಡೆ ಅವರು ಪುಣೆಯಲ್ಲಿ ಮೃತಪಟ್ಟಿದ್ದಾರೆ ಎಂದು ನಟ ಶಿವಂ ಶರ್ಮಾ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ಸಾಕಷ್ಟು ಚರ್ಚೆಗೆ ಒಳಗಾಗಿದೆ. ಇನ್ನು ಕೆಲವು ವರದಿಗಳ ಪ್ರಕಾರ ಡ್ರಗ್ಸ್ ಓವರ್​ಡೋಸ್​ನಿಂದ ನಟಿಗೆ ರೀತಿ ಆಗಿದೆ ಎನ್ನುವ ಮಾತುಗಳು ಕೇಳಿ ಬಂದಿವೆ. ಈ ಬಗ್ಗೆ ತನಿಖೆ ಕೂಡ ನಡೆಯುತ್ತಿದೆ.

ಪೂನಂ ಪಾಂಡೆ ಅವರ ಜತೆ ಚಿತ್ರವೊಂದರಲ್ಲಿ ನಟಿಸಿದ್ದ ಶಿವಂ ಶರ್ಮಾ ಅವರು ಮಾಧ್ಯಮವೊಂದಕ್ಕೆ ಈ ಬಗ್ಗೆ ಪ್ರತಿಕ್ರಿಯಿಸಿ ʻಪೂನಂ ಹಾಗೂ ನಾನು ಅನೇಕ ಬಾರಿ ಒಟ್ಟಿಗೆ ಸಾಕಷ್ಟು ಸಮಯವನ್ನು ಕಳೆದಿದ್ದೇವೆ. ಆ ಎಲ್ಲಾ ನೆನಪುಗಳು ನನ್ನ ಕಣ್ಣುಗಳ ಮುಂದೆ ಇದೆ. ಈಗ ಪೂನಂ ಇಲ್ಲವೆಂದರೆ ನಂಬಲಾಗುತ್ತಿಲ್ಲ. ಏಕೆಂದರೆ ಸಾವಿಗೆ ಕ್ಯಾನ್ಸರ್ ಕಾರಣ. ಆದರೆ ಪೂನಂಗೆ ಯಾವುದೇ ರೋಗಲಕ್ಷಣಗಳಿರಲಿಲ್ಲ. ಎಲ್ಲಿಯೂ ಈ ಬಗ್ಗೆ ಈ ಮುಂಚೆ ಹೇಳಿಕೊಂಡಿಲ್ಲ. ಪೂನಂ ಪಾರ್ಥಿವ ಶರೀರವು ಪುಣೆಯಲ್ಲಿದೆ. ಆದರೆ ಅವರ ಕುಟುಂಬ ಕಾನ್ಪುರದಲ್ಲಿದೆ ಎಂದು ಸ್ನೇಹಿತರೊಬ್ಬರು ನನಗೆ ತಿಳಿಸಿದರು. ಪೂನಂ ಕುಟುಂಬದವರು ಅಂತಿಮ ವಿಧಿವಿಧಾನಗಳನ್ನು ಹೇಗೆ ಮಾಡುತ್ತಾರೆಂಬುದು ನನಗೆ ತಿಳಿದಿಲ್ಲ. ಅವರ ಕುಟುಂಬಕ್ಕೆ ನೋವು ಸಹಿಸಿಕೊಳ್ಳುವ ಶಕ್ತಿ ದೇವರು ನೀಡಲಿ ಎಂದೆಷ್ಟೇ ನಾನು ಹೇಳಬಲ್ಲೆʼ ʼಎಂದಿದ್ದಾರೆ. ಪಾಂಡೆ ನಿಧನಕ್ಕೆ ಹಲವಾರು ಗಣ್ಯರು ಸಂತಾಪ ಸೂಚಿಸಿದ್ದಾರೆ.

ಇದನ್ನೂ ಓದಿ: Poonam Pandey: ʻಪೂನಂ ಪಾಂಡೆʼ ಅಂತ್ಯ ಸಂಸ್ಕಾರ ನಡೆದಿದ್ದು ಎಲ್ಲಿ? ಸಾವಿಗೆ ಮಾದಕ ವಸ್ತು ಕಾರಣ?

ಮ್ಯಾನೇಜರ್‌ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದ್ದೇನು?

“ಇಂದಿನ ಬೆಳಗ್ಗೆಯು ನಮಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಪೂನಂ ಪಾಂಡೆ ಅವರು ಗರ್ಭಕಂಠ ಕ್ಯಾನ್ಸರ್‌ನಿಂದ ಅಗಲಿದರು ಎಂದು ಹೇಳಲು ಭಾರಿ ದುಃಖವಾಗುತ್ತಿದೆ. ಜೀವನದಲ್ಲಿ ಅವರು ಯಾರನ್ನೇ ಭೇಟಿಯಾದರೂ, ಪ್ರೀತಿ ಹಾಗೂ ವಿನಯದಿಂದ ವರ್ತಿಸಿದ್ದರು. ಅವರ ಖಾಸಗಿ ಹಾಗೂ ವ್ಯಯಕ್ತಿಕ ಬದುಕಿನ ಬಗ್ಗೆ ಯಾರೂ ಮಾತನಾಡಬಾರದು ಎಂಬುದಾಗಿ ಮನವಿ ಮಾಡುತ್ತೇವೆ” ಎಂದು ಅವರ ಮ್ಯಾನೇಜರ್‌ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದ್ದರು.

ಇದನ್ನೂ ಓದಿ: Poonam Pandey: ʻಪೂನಂ ಪಾಂಡೆʼ ಅಂತ್ಯ ಸಂಸ್ಕಾರ ನಡೆದಿದ್ದು ಎಲ್ಲಿ? ಸಾವಿಗೆ ಮಾದಕ ವಸ್ತು ಕಾರಣ?

ಬೋಲ್ಡ್‌ ಫೋಟೊಗಳು, ಬೋಲ್ಡ್‌ ನಟನೆ ಹಾಗೂ ವಿವಾದಾತ್ಮಕ ಹೇಳಿಕೆಗಳಿಂದ ಪ್ರಸಿದ್ಧರಾಗಿದ್ದ ಪೂನಂ ಪಾಂಡೆ ಅವರು ಬಿಹಾರದವರು. ಬಿಹಾರದಲ್ಲಿ ಜನಿಸಿ, ಮುಂಬೈನಲ್ಲಿ ಬೆಳೆದ ಇವರು ಮೊದಲು ಮಾಡೆಲಿಂಗ್‌ ಕ್ಷೇತ್ರ ಪ್ರವೇಶಿಸಿದರು. 2013ರಲ್ಲಿ ʻನಶಾʼ ಎಂಬ ಸಿನಿಮಾ ಮೂಲಕ ಬಾಲಿವುಡ್‌ ಪ್ರವೇಶಿಸಿದ ಪೂನಂ ಪಾಂಡೆ, ʻಭೋಜ್‌ಪುರಿಯ ಅದಾಲತ್‌, ತೆಲುಗಿನಲ್ಲಿ ʻಮಾಲಿನಿ & ಕೊʼ., ಹಿಂದಿಯ ʻಜಿಎಸ್‌ಟಿ-ಗಲ್ತಿ ಸಿರ್ಫ್‌ ತುಮ್ಹಾರಿʼ ಹಾಗೂ ʻದಿ ಜರ್ನಿ ಆಫ್‌ ಕರ್ಮʼ ಸೇರಿ ಹಲವು ಸಿನಿಮಾಗಳಲ್ಲಿ ನಟಿಸಿದ್ದರು.

ಕನ್ನಡ ಸಿನಿಮಾದಲ್ಲೂ ಪೂನಂ ಪಾಂಡೆ ಛಾಪು ಇದೆ. ಅವರು 2014ರಲ್ಲಿ ಬಿಡುಗಡೆಯಾದ ʻಲವ್‌ ಈಸ್‌ ಪಾಯ್ಸನ್‌ʼ ಕನ್ನಡ ಸಿನಿಮಾದಲ್ಲಿ ಹಾಡೊಂದಿಗೆ ಹೆಜ್ಜೆ ಹಾಕಿದ್ದರು. 2011ರಲ್ಲಿ ಭಾರತ ಕ್ರಿಕೆಟ್‌ ತಂಡವು ವಿಶ್ವಕಪ್‌ ಗೆದ್ದರೆ ತಂಡ ಎದುರು ನಾನು ಸಂಪೂರ್ಣವಾಗಿ ಬೆತ್ತಲಾಗುವೆ ಎಂದು ಹೇಳುವ ಮೂಲಕ ದೇಶಾದ್ಯಂತ ಸುದ್ದಿಯಾಗಿದ್ದರು. ಇದಾದ ಬಳಿಕವೂ ಅವರು ಹಲವು ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದರು.

Exit mobile version