Site icon Vistara News

Poonam Pandey: ಪೂನಂ ಪಾಂಡೆ ಸತ್ತಿರುವುದು ಸುಳ್ಳು?ಪೋಸ್ಟ್‌ನಲ್ಲಿ ಏನಿದೆ?

Poonam Pandey Death News Questions

ಬಾಲಿವುಡ್ ನಟಿ, ವಿವಾದಾತ್ಮಕ ಸೆಲೆಬ್ರಿಟಿ (Poonam Pandey) ಎಂದೇ ಗುರುತಿಸಿಕೊಂಡಿದ್ದ ಪೂನಂ ಪಾಂಡೆ ಅವರು 32 ನೇ ವಯಸ್ಸಿನಲ್ಲಿ ಗರ್ಭಕಂಠದ ಕ್ಯಾನ್ಸರ್‌ನಿಂದ ಮೃತಪಟ್ಟಿದ್ದಾರೆ. ಬಿಹಾರದಲ್ಲಿ ಜನಸಿ ಮುಂಬೈನಲ್ಲಿ ಬೆಳೆದ ಇವರು ಪಿಯುಸಿವರೆಗೆ ವಿಧ್ಯಾಭ್ಯಾಸ ಮುಗಿಸಿ ನಂತರ ಮಾಡೆಲಿಂಗ್ ಕ್ಷೇತ್ರಕ್ಕೆ ಬಂದರು.

2010 ರ ಗ್ಲಾಡ್ರಾಗ್ಸ್ (Gladrags) ಸ್ಪರ್ಧೆಯಲ್ಲಿ ಟಾಪ್ 8 ಸ್ಪರ್ಧಿಯಾಗಿ ಫ್ಯಾಷನ್ ಮ್ಯಾಗಜಿನ್ ಕವರ್ ಪೇಜನಲ್ಲಿ ಕಾಣಿಸಿಕೊಂಡರು. 2011 ರಲ್ಲಿ ಸುಮಾರು 29 ಕ್ಯಾಲೆಂಡರಗಳಿಗೆ ಪೋಟೋಶೂಟ್ ನೀಡಿದರು.

ಕನ್ನಡದಲ್ಲಿ ಹಳ್ಳಿ ಹೈದ ಪ್ಯಾಟೆಗೆ ಬಂದ ಖ್ಯಾತಿಯ ರಾಜೇಶ್ ಅವರ `ಲವ್ ಇಸ್ ಪಾಯ್‌ಸನ್‌’ ಎಂಬ ಚಿತ್ರದ ಒಂದು ಹಾಡಿನಲ್ಲಿ ನೃತ್ಯ ಮಾಡಿದ್ದಾರೆ. ʻನಶಾʼ ಚಿತ್ರದ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದರು.

ವಿವಾದಾತ್ಮಕ ಸೆಲೆಬ್ರಿಟಿ ಎಂತಲೇ ಖ್ಯಾತಿ ಪಡೆದಿರುವ ಪೂನಂ ಪಾಂಡೆ ಏಕಾಏಕಿ ನಿಧನರಾಗಿರುವ ಸುದ್ದಿಯನ್ನು ಕೇಳಿ ಪ್ರಚಾರದ ಗಿಮಿಕ್​ ಇರಬಹುದೇ ಎಂದು ಕೂಡ ನೆಟ್ಟಿಗರು ಕಮೆಂಟ್‌ ಮಾಡುತ್ತಿದ್ದರು.

ಪೂನಂ ಪಾಂಡೆ ಇನ್‌ಸ್ಟಾದಲ್ಲಿ ನಿಧನದ ಸುದ್ದಿಯಲ್ಲಿ ಪೂರ್ತಿಯಾಗಿ ಪೂನಂ ಪಾಂಡೆ ಎಂಬ ಹೆಸರು ಪ್ರಸ್ತಾಪ ಆಗಿಲ್ಲ. ಕೇವಲ ಪೂನಂ ಎಂದು ಬರೆಯಲಾಗಿದೆ. ಹೀಗಾಗಿ ಅವರು ಸತ್ತಿರುವುದು ಸುಳ್ಳು ಎಂದು ಹಲವರ ವಾದ.

Exit mobile version