ಮುಂಬೈ: ಬಾಲಿವುಡ್ ನಟಿ, ವಿವಾದಾತ್ಮಕ ಸೆಲೆಬ್ರಿಟಿ (Poonam Pandey) ಎಂದೇ ಗುರುತಿಸಿಕೊಂಡಿದ್ದ ಪೂನಂ ಪಾಂಡೆ ಅವರು 32 ನೇ ವಯಸ್ಸಿನಲ್ಲಿ ಗರ್ಭಕಂಠದ ಕ್ಯಾನ್ಸರ್‌ನಿಂದ ಮೃತಪಟ್ಟಿದ್ದಾರೆ. ನಟಿ ತಮ್ಮ ವಿವಾದಿತ ಮಾತುಗಳಿಂದ ಸಾಕಷ್ಟು ಚರ್ಚೆಗೆ ಒಳಗಾಗುತ್ತಿದ್ದರು. ಇಷ್ಟಾದರೂ ಪೂನಂ ಪಾಂಡೆ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ಫಾಲೋವರ್ಸ್‌ಗಳನ್ನು ಹೊಂದಿದ್ದರು. 2013ರಲ್ಲಿ ʻನಶಾʼ ಚಿತ್ರದ ಮೂಲಕ ಬಾಲಿವುಡ್‌ಗೆ ಲಗ್ಗೆ ಇಟ್ಟಿದ್ದ ಪೂನಂ ಪಾಂಡೆ ಅವರ ನಿಧನ ಅಭಿಮಾನಿಗಳಲ್ಲಿ ಆಘಾತಕ್ಕೆ ಕಾರಣವಾಗಿದೆ.
ವಿವಾದಾತ್ಮಕ ಸೆಲೆಬ್ರಿಟಿ ಎಂತಲೇ ಖ್ಯಾತಿ ಪಡೆದಿರುವ ಪೂನಂ ಪಾಂಡೆ ಕೊನೆಯದಾಗಿ ಕಂಗನಾ ರಣಾವತ್ ಅವರ ರಿಯಾಲಿಟಿ ಶೋ ಲಾಕ್ ಅಪ್ ಸೀಸನ್ 1 ರಲ್ಲಿ ಕಾಣಿಸಿಕೊಂಡರು. ಶೋನಲ್ಲಿದ್ದಾಗ, ಅವರು ಒಮ್ಮೆ ಕೌಟುಂಬಿಕ ಹಿಂಸೆಯನ್ನು ಎದುರಿಸುತ್ತಿರುವುದನ್ನು ಪ್ರಸ್ತಾಪಿಸಿದ್ದರು.
ಗಂಡನ ವಿರುದ್ಧ ದೂರು ದಾಖಲಿಸಿದ್ದ ನಟಿ ಪೂನಂ ಪಾಂಡೆ!
ಪೂನಂ ಪಾಂಡೆ ಬಹುಕಾಲದ ಗೆಳೆಯ ಸ್ಯಾಮ್ ಬೊಂಬೆ ಜತೆ ಮದುವೆಯಾಗಿದ್ದರು. ಮದುವೆಯಾಗಿ 10 ದಿನಕ್ಕೆ ಗಂಡನ ವಿರುದ್ಧ ಪೊಲೀಸ್ ಸ್ಟೇಶನ್ ಮೆಟ್ಟಿಲೇರಿದ್ದರು. ಪೊಲೀಸರು ಸ್ಯಾಮ್‌ರನ್ನು ಅರೆಸ್ಟ್ ಮಾಡಿದ್ದರು. ಇದು ಸಾಕಷ್ಡು ಚರ್ಚೆಗೆ ಕಾರಣವಾಗಿತ್ತು.
ಕಂಗನಾ ರಣಾವತ್ ಅವರ ರಿಯಾಲಿಟಿ ಶೋ ಲಾಕ್ ಅಪ್ ಸೀಸನ್ 1ರ ವೇಳೆ ಪೂನಂ ತನ್ನ ಪತಿ ಸ್ಯಾಮ್ ಬಾಂಬೆ ಮೇಲೆ ಕೌಟುಂಬಿಕ ದೌರ್ಜನ್ಯದ ಆರೋಪ ಮಾಡಿದ್ದರು. ಕಾರ್ಯಕ್ರಮದಲ್ಲಿ ಮಾತಾಡಿದ ಪೂನಂ ಪಾಂಡೆ ತನ್ನ ಜೀವನದ ಕರಾಳ ರಹಸ್ಯಗಳನ್ನು ಹಂಚಿಕೊಂಡಿದ್ದರು. ʻ ಸ್ಯಾಮ್ ನನ್ನನ್ನು ತುಂಬಾ ಹೊಡೆದಿದ್ದರು. ಅದು ಮೆದುಳಿನಲ್ಲಿ ರಕ್ತಸ್ರಾವವಾಗಿತ್ತು. 4 ಮಹಡಿಗಳ ಮನೆ ಇತ್ತು, ಆದರೆ ನನ್ನ ಇಷ್ಟದಂತೆ ಉಳಿಯಲು ಅಥವಾ ಯಾವುದೇ ಕೋಣೆಗೆ ಹೋಗಲು ನನಗೆ ಅವಕಾಶವಿರಲಿಲ್ಲʼʼ ಎಂದು ಹೇಳಿದ್ದರು.
ಪೂನಂ ಪಾಂಡೆ ತನ್ನ ಪ್ರೇಮಿ ಸ್ಯಾಮ್ ಬಾಂಬೆಯನ್ನು 2020ರಲ್ಲಿ ವಿವಾಹ ಆಗಿದ್ದರು. ಮದುವೆಯಾದ ಕೇವಲ 12 ದಿನಗಳ ನಂತರ, ಪೂನಂ ಅವರ ಪತಿಯನ್ನು ಗೋವಾ ಪೊಲೀಸರು ಹಲ್ಲೆ ಮತ್ತು ಕಿರುಕುಳದ ಆರೋಪದ ಮೇಲೆ ಬಂಧಿಸಿದ್ದರು. ಈ ಘಟನೆ ದಕ್ಷಿಣ ಗೋವಾದ ಕಾನಕೋನ ಗ್ರಾಮದಲ್ಲಿ ನಡೆದಿದೆ ಎಂದು ವರದಿಯಾಗಿತ್ತು. ‘Love Is Poison’ ಎಂಬ ಕನ್ನಡದ ಸಿನಿಮಾವೊಂದರಲ್ಲಿ ಪೂನಂ ಐಟಂ ಡಾನ್ಸ್ ಮಾಡಿದ್ದರು.
ಇದನ್ನೂ ಓದಿ: Poonam Pandey: ಬಾಲಿವುಡ್ ನಟಿ, ಮಾಡೆಲ್ ಪೂನಂ ಪಾಂಡೆ ಇನ್ನಿಲ್ಲ; ಗರ್ಭಕಂಠ ಕ್ಯಾನ್ಸರ್‌ಗೆ ಬಲಿ
ವಿಶ್ವಕಪ್ ಬಂದರೆ ಸಾಕು ಬಟ್ಟೆ ಬಿಚ್ಚುತ್ತೇನೆ ಎನ್ನುತ್ತಿದ್ದ ನಟಿ
ಕ್ರಿಕೆಟ್ ವಿಶ್ವಕಪ್ ಬಂದಾಗ್ಲೆಲ್ಲ ಬಟ್ಟೆ ಬಿಚ್ಚುತ್ತೇನೆ ಎಂದು ಹೇಳುತ್ತಲೇ ಇರುತ್ತಿದ್ದರು. ಬಾಲಿವುಡ್‌ನಲ್ಲಿ ಮೇಲೇರಲು ಇಂತಹ ಹೇಳಿಕೆ ನೀಡಿತ್ತಿರುವುದಾಗಿಯೂ ಸಂದರ್ಶನದಲ್ಲಿ ಹೇಳಿಕೊಳ್ಳುತ್ತಿದ್ದರು. ‘ನನ್ನ ಕುಟುಂಬದಲ್ಲಿ ಯಾರೂ ಸಿನಿಮಾ ಹಿನ್ನೆಲೆಯವರಲ್ಲ. ಚಿತ್ರರಂಗದಲ್ಲಿ ಮೇಲೆ ಬರಲು ನನ್ನಿಂದ ಸಾಧ್ಯವಾಗುತ್ತಿರಲಿಲ್ಲ. ಇಲ್ಲಿ ಮುಂದೆ ಬರಲು ಗಾಡ್‌ಫಾದರ್ ಇರಬೇಕು, ಇಲ್ಲವೇ ದೊಡ್ಡ ದೊಡ್ಡ ನಿರ್ಮಾಪಕರ ಸಂಪರ್ಕ ಇಟ್ಟುಕೊಂಡಿರಬೇಕು. ಇವ್ಯಾವುದೂ ನನ್ನ ಬಳಿ ಇರಲಿಲ್ಲ. ಇದೇ ವೇಳೆ ಇಡೀ ಭಾರತ ವಿಶ್ವಕಪ್‌ನ ಗುಂಗಿನಲ್ಲಿತ್ತು. ಈ ಕಾರಣದಿಂದಾಗಿ 2011ರಲ್ಲಿ ಭಾರತ ಗೆದ್ದರೆ ಬೆತ್ತಲೆಯಾಗಿ ಓಡುವೆ ಎಂಬ ಹೇಳಿಕೆ ಕೊಟ್ಟೆಯಷ್ಟೇ’ ಎಂದ್ದಿದ್ದರು ಪೂನಂ.
ಪೂನಂ ಪಾಂಡೆ ತನ್ನ ವಿಭಿನ್ನ ಸ್ಟೈಲ್‌ನಿಂದಲೇ ಜನಪ್ರಿಯರಾಗಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿರುವ ಪೂನಂ ತನ್ನ ಫೋಟೊಗಳು ಮತ್ತು ವಿಡಿಯೊಗಳನ್ನು ಹಂಚಿಕೊಳ್ಳುವ ಅಭಿಮಾನಿಗಳ ಜತೆ ಟಚ್ನಲ್ಲಿ ಇರುತ್ತಿದ್ದರು. ತನ್ನ ಫ್ಯಾಷನ್ ಸ್ಟೇಟ್‌ಮೆಂಟ್‌ಗಳಿಂದ ಪ್ರೇಕ್ಷಕರನ್ನು ಮೆಚ್ಚಿಸಿದ ಪೂನಂ ಸಾರ್ವಜನಿಕವಾಗಿ ಹಾಟ್ ಅವತಾರದಲ್ಲಿ ಪೋಸ್ ನೀಡಿ ಟ್ರೋಲಿಗೆ ಗುರಿಯಾಗುತ್ತಿದ್ದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ