ಬೆಂಗಳೂರು: ಜನವರಿಯಲ್ಲಿ ಅಯೋಧ್ಯೆಯಲ್ಲಿ ನಡೆದ ರಾಮಮಂದಿರದ (Ram Mandir) ಉದ್ಘಾಟನೆ ವೇಳೆ ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಭಾರತದಲ್ಲಿ ಇರಲಿಲ್ಲ. ಹೀಗಾಗಿ ಈಗ ಕುಟುಂಬ ಸಮೇತರಾಗಿ ರಾಮನ ದರ್ಶನ ಮಾಡಿದ್ದಾರೆ. ನಟಿ ಕೆಲವು ದಿನಗಳ ಹಿಂದೆ ಭಾರತಕ್ಕೆ ಭೇಟಿ ನೀಡಿದ್ದು, ಪತಿ, ನಟ-ಗಾಯಕ ನಿಕ್ ಜೋನಾಸ್, ಮಗಳು ಮಾಲತಿ ಮೇರಿ ಮತ್ತು ತಾಯಿ ಮಧು ಅವರೊಂದಿಗೆ ದೇವಸ್ಥಾನಕ್ಕೆ ಬಂದಿದ್ದಾರೆ. ಈ ವೇಳೆ ಮಾಲತಿ ಕ್ಯೂಟ್ ಆಗಿ ʻಅಯೋಧ್ಯಾʼ (Ayodhya) ಎಂದು ಹೇಳಿದ್ದಾಳೆ . ಈ ವಿಡಿಯೊ ವೈರಲ್ ಆಗಿದೆ.
ರಾಮಮಂದಿರಕ್ಕೆ ಪ್ರಿಯಾಂಕಾ ಭೇಟಿ!
ಪ್ರಿಯಾಂಕಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ರಾಮ್ ಮಂದಿರಕ್ಕೆ ಭೇಟಿ ನೀಡಿದ ಹಲವು ಫೋಟೊ ಹಾಗೂ ವಿಡಿಯೊಗಳನ್ನು ಹಂಚಿಕೊಂಡಿದ್ದಾರೆ. ʻʻಜೈ ಶ್ರೀ ರಾಮ್” ಎಂದು ಶೀರ್ಷಿಕೆ ನೀಡಿದ್ದಾರೆ. ಶೇರ್ ಮಾಡಿಕೊಂಡ ಫೋಟೊಗಳಲ್ಲಿ ಮಾಲತಿಯೊಂದಿಗೆ ದೇವಸ್ಥಾನದಲ್ಲಿ ಪ್ರಾರ್ಥಿಸುತ್ತಿರುವುದು, ದೇವಾಲಯದ ಒಳಗೆ ನಿಕ್ ಹಾಗೂ ಮಗಳ ಹಣೆಗೆ ಕುಂಕುಮ ಇಟ್ಟುಕೊಂಡಿರುವುದು, ವಿಡಿಯೊದಲ್ಲಿ ಮಾಲತಿ ‘ಅಯೋಧ್ಯಾ’ ಎಂದು ಹೇಳುವುದು ಹೀಗೆ ಅನೇಕ ಫೋಟೊಗಳನ್ನು ಶೇರ್ ಮಾಡಿಕೊಂಡಿದ್ದಾರೆ.
ಪ್ರಿಯಾಂಕ ಹಳದಿ ಸೀರೆಯನ್ನುಟ್ಟು ಬಂದಿದ್ದರು. ನಿಕ್ ಬಿಳಿ ಕುರ್ತಾವನ್ನು ಧರಿಸಿದ್ದರೆ, ಮಾಲತಿ ಮೇರಿ ಗುಲಾಬಿ ಬಣ್ಣದ ಬಟ್ಟೆಯನ್ನು ಧರಿಸಿದ್ದರು.
ಇದನ್ನೂ ಓದಿ: Padarayanapura Riots : ಪಾದರಾಯನಪುರ ಗಲಭೆ; ಪ್ರಕರಣ ರದ್ದತಿಗೆ ಹೈಕೋರ್ಟ್ ಕೊಟ್ಟ ಕಾರಣಗಳೇನು
ಪ್ರಿಯಾಂಕಾ ಅವರು ನಿಕ್ ಜೋನಾಸ್ ಅವರ ಪುತ್ರಿ ಮಾಲತಿ ಮೇರಿ ಚೋಪ್ರಾ ಜೋನಾಸ್ ಅವರೊಂದಿಗೆ ಗುರುವಾರ ಮುಂಬೈಗೆ ಬಂದಿಳಿದರು. ಒಂದು ದಿನದ ನಂತರ ನಿಕ್ ಕೂಡ ಮುಂಬೈ ತಲುಪಿದ್ದರು. ಇಶಾ ಅಂಬಾನಿ ಆಯೋಜಿಸಿದ್ದ ಹೋಳಿ ಪಾರ್ಟಿ ಸೇರಿದಂತೆ ಮುಂಬೈನಲ್ಲಿ ನಡೆದ ಹಲವು ಕಾರ್ಯಕ್ರಮಗಳಲ್ಲಿ ಪ್ರಿಯಾಂಕಾ ಭಾಗವಹಿಸಿದ್ದರು. ಇತ್ತೀಚೆಗೆ, ಪ್ರಿಯಾಂಕಾ ಆಸ್ಕರ್ ನಾಮನಿರ್ದೇಶನಗೊಂಡ ಸಾಕ್ಷ್ಯಚಿತ್ರ ʻಟು ಕಿಲ್ ಎ ಟೈಗರ್ʼಗೆ ಕಾರ್ಯಕಾರಿ ನಿರ್ಮಾಪಕಿಯಾದರು.
ʻಫ್ರಾಂಕ್ ಇ ಫ್ಲವರ್ಸ್ʼ ನಿರ್ದೇಶಿಸಲಿರುವ ʻದಿ ಬ್ಲಫ್ʼನಲ್ಲಿ ಪ್ರಿಯಾಂಕಾ ನಟಿಸಲಿದ್ದಾರೆ. ಕಾರ್ಲ್ ಅರ್ಬನ್ ಕೂಡ ಇದ್ದಾರೆ.