ಬೆಂಗಳೂರು: ನಿಕ್ ಜೋನಾಸ್ ಮತ್ತು ಪ್ರಿಯಾಂಕಾ ಚೋಪ್ರಾ (Priyanka Chopra) ತಮ್ಮ ಇತ್ತೀಚಿನ ಪೋಸ್ಟ್‌ಗಳೊಂದಿಗೆ ಇಂಟರ್‌ನೆಟ್‌ಗೆ ಬೆಂಕಿ ಹಚ್ಚಿದ್ದಾರೆ. ನಿಕ್‌ನ ಚಲನಚಿತ್ರ ʻದಿ ಗುಡ್ ಹಾಫ್ʼನ ಪ್ರಥಮ ಪ್ರದರ್ಶನದ ಮೊದಲು ತಮ್ಮ ಲಾಸ್ ಏಂಜಲೀಸ್ ಮನೆಯಲ್ಲಿ ಹಾಟ್ ಪೋಟೋಶೂಟ್ ಮಾಡಿಸಿಕೊಂಡಿದೆ ಜೋಡಿ. ಒಂದು ಫೋಟೊದಲ್ಲಿ ಇಬ್ಬರು ಲಿಪ್ ಲಾಕ್ ಮಾಡಿಕೊಂಡರೆ, ಇನ್ನೊಂದರಲ್ಲಿ ಹಾಟ್ ಆಗಿ ಪೋಸ್ ಕೊಟ್ಟಿದ್ದಾರೆ.
ವೀಡಿಯೊವನ್ನು ಹಂಚಿಕೊಂಡ ನಿಕ್, “ನನ್ನ ಶಾಶ್ವತ ಲವ್” ಎಂದು ಬರೆದಿದ್ದಾರೆ. ಪ್ರಿಯಾಂಕಾ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಗಳಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ “ಡೇಟ್ ನೈಟ್ ಫಾರ್ ದಿ ಗುಡ್ ಹಾಫ್ ಪ್ರೀಮಿಯರ್ ವಿತ್ ಮೈ ಲವ್” ಎಂದು ಬರೆದುಕೊಂಡಿದ್ದಾರೆ ನಿಕ್. ಪ್ರಥಮ ಪ್ರದರ್ಶನದಲ್ಲಿ, ನಿಕ್ ಜೋನಾಸ್ ತನ್ನ ಮಗಳು ಮಾಲತಿ ಮೇರಿ ಚೋಪ್ರಾ ಜೋನಾಸ್ ಬಗ್ಗೆ ಮಾತನಾಡಿದ್ದಾರೆ.
ಇದನ್ನೂ ಓದಿ: Priyanka Chopra: ಮಾಲತಿ ಮೇರಿ ಅಪ್ಪನ ಮಗಳು ಎಂದ ನೆಟ್ಟಿಗರು; ಪ್ರಿಯಾಂಕಾ ಚೋಪ್ರಾ ಶೇರ್ ಮಾಡಿದ ವಿಡಿಯೊದಲ್ಲಿ ಏನಿದೆ?
ಪ್ರಿಯಾಂಕಾ ಚೋಪ್ರಾ (Priyanka Chopra) ಬಾಲಿವುಡ್ ಮಾತ್ರವಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಟನೆಯ ಮೂಲಕ ತಮ್ಮನ್ನು ತಾವು ಸಾಬೀತುಪಡಿಸಿದ್ದಾರೆ. ನಟನೆ ಜತೆಗೆ ನಟಿ ಹೆಚ್ಚು ಸಮಯ ಕಳೆಯುವುದು ಕುಟುಂಬದ ಜತೆ. ಪತಿ ಮತ್ತು ಗಾಯಕ ನಿಕ್ ಜೋನಾಸ್ ಮತ್ತು ಮಗಳು ಮಾಲತಿ ಮೇರಿ ಚೋಪ್ರಾ ಜೋನಾಸ್ ಜತೆಗೆ ಸಾಕಷ್ಟು ಸಮಯ ಕಳಯುತ್ತಾರೆ. ಆಗಾಗ ಫೋಟೊ ಹಾಗೂ ವಿಡಿಯೊಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ನಿಕ್ ಒಳ್ಳೆಯ ಗಾಯಕ ಎನ್ನುವುದು ಗೊತ್ತೇ ಇದೆ. ಸದ್ಯ ನಟಿ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. . ʻದಿ ಬ್ಲಫ್ʼಸಿನಿಮಾದಲ್ಲಿ ನಟಿ ಮುಂದೆ ವಿಭಿನ್ನವಾಗಿ ಕಾಣಿಸಿಕೊಳ್ಳುತ್ತಿದ್ದಾರೆ.ದಿ ಬ್ಲಫ್ʼನಲ್ಲಿ ಕಡಲುಗಳ್ಳರ ಪಾತ್ರವನ್ನು ನಿರ್ವಹಿಸಲಿದ್ದಾರೆ ಎನ್ನಲಾಗಿದೆ. ಸೋರಿಕೆಯಾದ ಚಿತ್ರಗಳಲ್ಲಿ ಕಪ್ಪು ಉಡುಪನ್ನು ಧರಿಸಿದ್ದಾರೆ. ಯುದ್ಧದ ಮೋಡ್‌ನಲ್ಲಿದ್ದಾರೆ. ಆದರೆ ನಯ ಫ್ಯಾನ್ಸ್‌ಗೆ ಗಮನ ಸೆಳೆದಿದ್ದು ಮಾತ್ರ ಹೇರ್ ಸ್ಟೈಲ್. ಲೀಕ್ ಆದ ಫೋಟೊದಲ್ಲಿ ಪ್ರಿಯಾಂಕ ವಿಭಿನ್ನವಾದ ಕೇಶವಿನ್ಯಾಸವನ್ನು ಹೊಂದಿದ್ದಾರೆ. , ಇದು 19 ನೇ ಶತಮಾನದ ಕೆರಿಬಿಯನ್ ಕಡಲುಗಳ್ಳರ ಲುಕ್ ಎನ್ನಲಾಗಿದೆ.ದಿ ಬ್ಲಫ್’ 19 ನೇ ಶತಮಾನದ ಕೆರಿಬಿಯನ್‌ನ ಕಥೆ. ರುಸ್ಸೋ ಬ್ರದರ್ಸ್ ಬ್ಯಾನರ್ AGBO ಸ್ಟುಡಿಯೋಸ್ ಮತ್ತು ಅಮೆಜಾನ್ MGM ಸ್ಟುಡಿಯೋಸ್ ನಿರ್ಮಿಸಿದ ಈ ಚಿತ್ರದಲ್ಲಿ ಕಾರ್ಲ್ ಅರ್ಬನ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಒಂದೆರಡು ತಿಂಗಳಿನಿಂದ ಪ್ರಿಯಾಂಕಾ ಆಸ್ಟ್ರೇಲಿಯದಲ್ಲಿ ಚಿತ್ರದ ಶೂಟಿಂಗ್ ನಡೆಸುತ್ತಿದ್ದಾರೆ.