ಬೆಂಗಳೂರು: ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) , ‘ಟು ಕಿಲ್ ಎ ಟೈಗರ್’ ಡಾಕ್ಯುಮೆಂಟರಿಗೆ ಬೆಂಬಲವಾಗಿ ನಿಂತಿದ್ದಾರೆ. ಡಾಕ್ಯುಮೆಂಟರಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಪ್ರಿಯಾಂಕಾ, ‘ಆಸ್ಕರ್ ನಾಮಿನೇಷನ್ ಗಳಿಸಿರುವ ‘ಟು ಕಿಲ್ ಎ ಟೈಗರ್’ ಡಾಕ್ಯುಮೆಂಟರಿ ತಂಡವನ್ನು ನಾನು ಸೇರಿಕೊಳ್ಳುತ್ತಿರುವುದು ಬಹಳ ಹೆಮ್ಮೆ ಎನಿಸಿದೆ ಎಂದು ಹೇಳಿಕೊಂಡಿದ್ದಾರೆ. ಕಾರ್ಯನಿರ್ವಾಹಕ ನಿರ್ಮಾಪಕಿಯಾಗಿ ಆಸ್ಕರ್-ನಾಮನಿರ್ದೇಶಿತ ಸಾಕ್ಷ್ಯಚಿತ್ರ ‘ಟು ಕಿಲ್ ಎ ಟೈಗರ್’ ತಂಡವನ್ನು ಸೇರಿಕೊಂಡಿದ್ದಾರೆ.ನೆಟ್ಫ್ಲಿಕ್ಸ್, ‘ಟು ಕಿಲ್ ಎ ಟೈಗರ್’ ಡಾಕ್ಯುಮೆಂಟರಿಯ ಸ್ಟ್ರೀಮಿಂಗ್ ಹಕ್ಕು ಖರೀದಿ ಮಾಡಿದೆ.
ಪ್ರಾಜೆಕ್ಟ್‌ನ ಭಾಗವಾಗಿರುವ ಬಗ್ಗೆ ನಟಿ ಇನ್‌ಸ್ಟಾಗ್ರಾಮ್‌ನಲ್ಲಿ ಖುಷಿಯನ್ನು ಹಂಚಿಕೊಂಡಿದ್ದಾರೆ. ʻʻಅಕಾಡೆಮಿ ಪ್ರಶಸ್ತಿ-ನಾಮನಿರ್ದೇಶಿತ ಡಾಕ್ಯುಮೆಂಟರಿ ʻಟು ಕಿಲ್ ಎ ಟೈಗರ್ʼ ತಂಡವನ್ನು ಸೇರಿದ್ದಕ್ಕೆ ಖುಷಿ ಇದೆ. ಮತ್ತು ವಿತರಣಾ ಹಕ್ಕುಗಳನ್ನು ನೆಟ್ಫ್ಲಿಕ್ಸ್ ಪಡೆದುಕೊಂಡಿದೆ ಎಂದು ಘೋಷಿಸಲು ನನಗೆ ತುಂಬಾ ಹೆಮ್ಮೆಯಾಗುತ್ತಿದೆ. 2022 ರಲ್ಲಿ ನಾನು ಈ ಚಲನಚಿತ್ರವನ್ನು ಮೊದಲ ಬಾರಿಗೆ ವೀಕ್ಷಿಸಿದಾಗ,ನೇರ ನಿರೂಪಣೆ ನನಗೆ ಬಹಳ ಇಷ್ಟವಾಗಿತ್ತು. ಅತ್ಯಾಚಾರಕ್ಕೆ ಒಳಗಾದ ಮಗಳಿಗೆ ನ್ಯಾಯ ಕೊಡಿಸಲು ಹೋರಾಡುವ ತಂದೆಯ ನಿಜ ಘಟನೆಗೆ ಆಕರ್ಷಿತನಾದೆʼʼಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Priyanka Chopra: ಕೇಸ್ ದಾಖಲಿಸಿ ʻಲಾಸ್ ಏಂಜಲೀಸ್ʼ ಮನೆ ಖಾಲಿ ಮಾಡಿದ ಪ್ರಿಯಾಂಕಾ-ನಿಕ್; ಏನಿದಕ್ಕೆ ಕಾರಣ?
ನಿಶಾ ಪಹುಜಾ ನಿರ್ದೇಶಿಸಿದ ‘ಟು ಕಿಲ್ ಎ ಟೈಗರ್’, ಪಾಮ್ ಸ್ಪ್ರಿಂಗ್ಸ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ಸಾಕ್ಷ್ಯಚಿತ್ರ ಪ್ರಶಸ್ತಿ, TIFF ನಲ್ಲಿ ʻಆಂಪ್ಲಿಫೈ ವಾಯ್ಸ್ ಪ್ರಶಸ್ತಿʼ ಮತ್ತು ಕೆನಡಿಯನ್ ಸ್ಕ್ರೀನ್ ಅವಾರ್ಡ್ಸ್‌ನಲ್ಲಿ ʻಅತ್ಯುತ್ತಮ ಫೀಚರ್ ಡಾಕ್ಯುಮೆಂಟರಿʼ ಸೇರಿದಂತೆ ಪ್ರಪಂಚದಾದ್ಯಂತ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿದೆ.
ಕಳೆದ ವರ್ಷ ಆಸ್ಕರ್ಗೆ ನಾಮಿನೇಟ್ ಆಗಿದ್ದ ‘ಚೆಲ್ಲಾ ಶೋ’ ಸಿನಿಮಾಕ್ಕೆ ಪ್ರಿಯಾಂಕಾ ಚೋಪ್ರಾ ಬೆಂಬಲ ನೀಡಿದ್ದರು. ʻಟು ಕಿಲ್ ಎ ಟೈಗರ್’ ಡಾಕ್ಯುಮೆಂಟರಿಯು ಅತ್ಯಾಚಾರಕ್ಕೆ ಒಳಗಾದ ಯುವತಿ ಹಾಗೂ ಆಕೆಗೆ ನ್ಯಾಯ ಕೊಡಿಸಲು ಆಕೆಯ ತಂದೆ ಹೇಗೆ ಹೋರಾಡುತ್ತಾರೆ ಎಂಬುದರ ಬಗ್ಗೆ ಇದೆ.