Site icon Vistara News

Priyanka Chopra: ʻಅಮರ್ ಸಿಂಗ್ ಚಮ್ಕಿಲಾʼ ಸಿನಿಮಾವನ್ನು ಹೊಗಳಿದ ಪ್ರಿಯಾಂಕಾ ಚೋಪ್ರಾ!

Priyanka Chopra praises cousin Parineeti film

ಬೆಂಗಳೂರು: ಇಮ್ತಿಯಾಜ್ ಅಲಿ ( Imtiaz Ali) ನಿರ್ದೇಶನದ ʻಅಮರ್ ಸಿಂಗ್ ಚಮ್ಕಿಲಾʼ ( Amar Singh Chamkila) ಏಪ್ರಿಲ್ 12ರಂದು ನೆಟ್‌ ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿದೆ. ನಟಿ ಪರಿಣಿತಿ ಚೋಪ್ರಾ (parineeti chopra) ಅವರು ಈ ಸಿನಿಮಾದಲ್ಲಿ ಅಮರ್ ಜೋತ್ ಪಾತ್ರ ಮಾಡಿದ್ದಾರೆ. ದಿವಂಗತ ಗಾಯಕ ಅಮರ್ ಸಿಂಗ್ ಚಮ್ಕಿಲಾ ಮತ್ತು ಅವರ ಪತ್ನಿ ಅಮರಜೋತ್ ಕೌರ್ ಅವರ ಜೀವನಾಧಾರಿತ ಬಯೋಪಿಕ್ ಸಿನಿಮಾ ಇದು. ದಿಲ್ಜಿತ್ ದೋಸಾಂಜ್ (Diljit Dosanjh) ಅವರು ಈ ಸಿನಿಮಾದಲ್ಲಿ ನಟಿಸಿದ್ದಾರೆ ( Diljit Dosanjh and Parineeti Chopra ). ಈ ಸಿನಿಮಾ ಬಗ್ಗೆ ಪ್ರೇಕ್ಷಕರು ಸೇರಿದಂತೆ ಸೆಲೆಬ್ರಿಟಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪ್ರಿಯಾಂಕಾ ಚೋಪ್ರಾ, ತೃಪ್ತಿ ಡಿಮ್ರಿ ಮತ್ತು ಇತರ ಸೆಲೆಬ್ರಿಟಿಗಳು ‘ಅಮರ್ ಸಿಂಗ್ ಚಮ್ಕಿಲಾ’ ಸಿನಿಮಾ ನೋಡಿ ಹೊಗಳಿದ್ದಾರೆ.

ಪ್ರಿಯಾಂಕಾ ಚೋಪ್ರಾ ತಮ್ಮ ಇನ್‌ಸ್ಟಾ ಸ್ಟೋರಿಯಲ್ಲಿ ಪರಿಣಿತಿ ಚೋಪ್ರಾ ಪಾತ್ರವನ್ನು ಶ್ಲಾಘಿಸಿದ್ದಾರೆ. IMDB ರೇಟಿಂಗ್ ಒಳಗೊಂಡಿರುವ ಸಿನಿಮಾ ಪೋಸ್ಟರ್ ಹಂಚಿಕೊಂಡಿದ್ದಾರೆ. ಇಮ್ತಿಯಾಜ್ ಅಲಿ, ದಿಲ್ಜಿತ್, ಪರಿಣಿತಿ ಅವರನ್ನು ಅಭಿನಂದಿಸಿದ್ದಾರೆ. “ಅಭಿನಂದನೆಗಳು ಇಮ್ತಿಯಾಜ್ ಸರ್, ದಿಲ್ಜಿತ್, ತಮತ್ತು ತಂಡ. ಸಿನಿಮಾ ತುಂಬಾ ಚೆನ್ನಾಗಿದೆ” ಎಂದು ಬರೆದಿದ್ದಾರೆ.

ಇದನ್ನೂ ಓದಿ: Diljit Dosanjh: 11ನೇ ವಯಸ್ಸಿಗೆ ಪೋಷಕರು ಮನೆಯಿಂದ ಓಡಿಸಿದರು ಎಂದು ಅತ್ತ ಪಂಜಾಬಿ ಖ್ಯಾತ ಗಾಯಕ!

ಸಿನಿಮಾ ನೋಡಿ ʻಅನಿಮಲ್‌ʼ ಸಿನಿಮಾ ನಟಿ ತೃಪ್ತಿ ಡಿಮ್ರಿ ಅವರು ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. “ನಾನು ಹಲವು ದಿನಗಳ ಬಳಿಕ ನೋಡಿದ ಅತ್ಯುತ್ತಮ ಚಲನಚಿತ್ರಗಳಲ್ಲಿ ಇದು ಒಂದಾಗಿದೆ. ಚಮ್ಕಿಲಾ ತುಂಬ ಪ್ರಾಮಾಣಿಕ.. ಸುಂದರ ಮತ್ತು ಕಲಾವಿದನ ಬಗ್ಗೆ ಇರುವ ಸಿನಿಮಾ. ಇಡೀ ಪಾತ್ರವರ್ಗ ಮತ್ತು ಸಿಬ್ಬಂದಿಗೆ ಅಭಿನಂದನೆಗಳುʼʼಎಂದು ಬರೆದುಕೊಂಡಿದ್ದಾರೆ.

ಏನಿದು ಕಥೆ?

ತನ್ನ ಹಾಡುಗಳಿಂದಲೇ ಜನಪ್ರಿಯರಾದ ಗಾಯಕ, ಸಂಗೀತಗಾರ ಅಮರ್‌ ಸಿಂಗ್‌ ಚಮ್ಕಿಲಾ ಅವರ ಜೀವನಗಾಥೆಯನ್ನು ಆಧರಿಸಿ ಈ ಸಿನಿಮಾ ನಿರ್ಮಿಸಲಾಗಿದೆ. 1980 ರ ದಶಕದಲ್ಲಿ ಜನಪ್ರಿಯತೆ ಪಡೆದ ʻಪಂಜಾಬ್‌ ಎಲ್ವಿಸ್‌ʼ ಎಂದೇ ಖ್ಯಾತಿ ಪಡೆದ ಚಮ್ಕಿಲಾರ ಬದುಕಿನ ಕಥೆಯಿದು .ಈ ಗಾಯಕ ತನ್ನ 27ನೇ ವಯಸ್ಸಿನಲ್ಲಿಯೇ ಕೊಲೆಯಾದರು. ಕಾಂಟ್ರಾವರ್ಸಿಯಲ್‌ ಹಾಡುಗಳು ಅಮರ್‌ ಸಿಂಗ್‌ ಚಮ್ಕಿಲಾ ಸಾವಿಗೆ ಕಾರಣವಾಗಿರಬಹುದು ಎಂದು ವರದಿಯಾಗಿದೆ.

Exit mobile version