Site icon Vistara News

Priyanka Chopra : ಮಗಳ ಜತೆ ಆಟ ಆಡುವ ಮೂಡ್‌ನಲ್ಲಿ ನಟಿ ಪ್ರಿಯಾಂಕಾ ಚೋಪ್ರಾ

#image_title

ನ್ಯೂಯಾರ್ಕ್‌: ನಟಿ ಪ್ರಿಯಾಂಕಾ (Priyanka Chopra) ಮತ್ತು ನಿಕ್‌ ಜೋನಸ್‌ ಅವರಿಬ್ಬರೂ ಸಿನಿಮಾ ರಂಗದಲ್ಲಿ ಬಿಜಿ ಇರುವವರು. ಈ ಮಧ್ಯೆ ಅವರಿಗೆ ಮಗಳು ಮಾಲತಿ ಜತೆ ಕಳೆಯುವುದಕ್ಕೆ ಸಮಯವೇ ಸಿಗುತ್ತಿಲ್ಲ. ಎಲ್ಲ ಕಾರ್ಯಕ್ರಮಗಳು, ಕೆಲಸಗಳ ನಡುವೆ ಬಿಡುವು ಮಾಡಿಕೊಂಡಿರುವ ನಟಿ ಪ್ರಿಯಾಂಕಾ ಇದೀಗ ನ್ಯೂಯಾರ್ಕ್‌ ತೆರಳಿದ್ದು, ಮಗಳೊಂದಿಗೆ ಸಮಯ ಕಳೆಯುತ್ತಿದ್ದಾರೆ.

ನಟಿ ಮಗಳೊಂದಿಗೆ ಆಟವಾಡುತ್ತಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿಯೂ ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ಪ್ರಿಯಾಂಕಾ ಮಗಳೊಂದಿಗೆ ಪ್ಲೇಪೆನ್‌ನಲ್ಲಿ ಕುಳಿತುಕೊಂಡಿದ್ದಾರೆ. ಸುತ್ತಲೂ ಆಟದ ಸಾಮಾನುಗಳು ಇವೆಯಾದರೂ, ಪ್ರಿಯಾಂಕಾ ಹಿಡಿದಿರುವ ಕಾರ್ಡ್‌ಬೋರ್ಡ್‌ ಬಾಕ್ಸ್‌ ಅನ್ನೇ ಮಾಲತಿ ಕುತೂಹಲದಿಂದ ಹಿಡಿದುಕೊಂಡು ನೋಡುತ್ತಿದ್ದಾಳೆ.

ಇದನ್ನೂ ಓದಿ: Priyanka Gandhi Vadra: ಪ್ರಿಯಾಂಕಾ ಗಾಂಧಿಯ ‘ನ್ಯೂ ಫ್ರೆಂಡ್ಸ್’ ಫೋಟೋ ವೈರಲ್!
ಈ ಫೋಟೋವನ್ನು ಸ್ಟೋರಿಯಲ್ಲಿ ಹಂಚಿಕೊಂಡಿರುವ ನಟಿ “ಮತ್ತೆ ಸೇರಿಕೊಂಡೆವು… ಇಲ್ಲಿ ಏನಿದೆ ಮಾಲತಿ?” ಎಂದು ಬರೆದುಕೊಂಡಿದ್ದಾರೆ. ನಟಿಯ ಸ್ಟೋರಿಗೆ ಅನೇಕರು ಹಾರ್ಟ್‌ ರಿಯಾಕ್ಷನ್‌ ಕೊಟ್ಟಿದ್ದಾರೆ.

ಅಂದ ಹಾಗೆ ಪ್ರಿಯಾಂಕಾ ವೆನಿಸ್‌ಗೆ ಕೆಲಸದ ಮೇಲೆ ಹೋಗಿದ್ದಾಗಿ ಮಗಳು ಮಾಲತಿಯನ್ನು ನ್ಯೂಯಾರ್ಕ್‌ನಲ್ಲಿ ತನ್ನ ತಾಯಿ ಡಾ.ಮಧು ಚೋಪ್ರಾ ಅವರ ಬಳಿ ಬಿಟ್ಟು ಹೋಗಿದ್ದರು. ಈ ಬಗ್ಗೆ ಮಾಧ್ಯಮದವರೆದುರು ಮಾತನಾಡಿದ್ದ ಪ್ರಿಯಾಂಕಾ, “ಬಹುಶಃ ಈಗ ನನ್ನ ಮಗಳು ಐಸ್‌ ಕ್ರೀಂ ತಿನ್ನುತ್ತಾ ಕುಳಿತಿರಬಹುದು. ಅವಳು ಅವಳ ಬದುಕನ್ನು ಬದುಕುತ್ತಿದ್ದಾಳೆ” ಎಂದು ಹೇಳಿದ್ದರು.

ಇತ್ತೀಚೆಗೆ ನಡೆದ ತಾಯಂದಿರ ದಿನದಂದು ಪ್ರಿಯಾಂಕಾ ತನ್ನ ಮಗಳು ಮಾಲತಿ, ತಾಯಿ ಮಧು ಮತ್ತು ನಿಕ್‌ ಅವರ ತಾಯಿಯ ಕುರಿತಾಗಿ ಪೋಸ್ಟ್‌ ಹಾಕಿದ್ದರು. ಆ ಮೂಲಕ ತನಗೆ ತಾನೇ ತಾಯಂದಿರ ದಿನದ ವಿಷ್‌ ಮಾಡಿಕೊಂಡಿದ್ದ ಅವರು ಅಮ್ಮ ಮತ್ತು ಅತ್ತೆಗೂ ವಿಷ್‌ ತಿಳಿಸಿದ್ದರು.

Exit mobile version