ಬೆಂಗಳೂರು: ಪ್ರಿಯಾಂಕಾ ಚೋಪ್ರಾ (Priyanka Chopra), ಅವರ ಪತಿ-ಗಾಯಕ ನಿಕ್ ಜೋನಾಸ್ ಮತ್ತು ಅವರ ಪುತ್ರಿ ಮಾಲತಿ ಮೇರಿ ಚೋಪ್ರಾ ಜೋನಾಸ್ ಬುಧವಾರ (ಮಾ.20) ಅಯೋಧ್ಯೆಯ ರಾಮಮಂದಿರಕ್ಕೆ ಹೋಗಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಇದೀಗ ಪ್ರಿಯಾಂಕಾ ಕುಟುಂಬದ ಫೋಟೊ ಮತ್ತು ವಿಡಿಯೊಗಳು ವೈರಲ್ ಆಗಿವೆ.
ಅಯೋಧ್ಯೆ ವಿಮಾನ ನಿಲ್ದಾಣದ ಹೊರಗೆ ಬಿಗಿ ಭದ್ರತೆಯ ನಡುವೆ ಪ್ರಿಯಾಂಕಾ ಚೋಪ್ರಾ ಮತ್ತು ಅವರ ಕುಟುಂಬ ಹೋಗುತ್ತಿರುವುದು ವೈರಲ್ ಆಗಿದೆ. ಪ್ರಿಯಾಂಕಾ ಹಳದಿ ಸೀರೆಯನ್ನು ಧರಿಸಿದ್ದರು. ನಿಕ್ ಜೋನಾಸ್ ಕುರ್ತಾದಲ್ಲಿದ್ದರು. ಇನ್ನು ಮಗಳು ಮಾಲತಿ ಕೂಡ ಟ್ರೆಡಿಷನಲ್ ಲುಕ್‌ನಲ್ಲಿ ಕಂಡು ಬಂದಳು.
ಜನವರಿ 2024ರಲ್ಲಿ, ರಾಮಲಲ್ಲಾ ಪ್ರಾಣ ಪ್ರತಿಷ್ಠೆ ಸಮಾರಂಭಕ್ಕಾಗಿ ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಅಯೋಧ್ಯೆಯಲ್ಲಿದ್ದರು. ಕತ್ರಿನಾ ಕೈಫ್, ವಿಕ್ಕಿ ಕೌಶಲ್, ರಣಬೀರ್ ಕಪೂರ್, ಆಲಿಯಾ ಭಟ್ ಆಕಾಶ್ ಅಂಬಾನಿ, ಪತ್ನಿ ಶ್ಲೋಕಾ ಅಂಬಾನಿ ಕಾಣಿಸಿಕೊಂಡಿದ್ದರು.
ಕಂಗನಾ ರಣಾವತ್ ಮತ್ತು ಅಮಿತಾಭ್ ಬಚ್ಚನ್ ಕೂಡ ಹಾಜರಿದ್ದರು. ಪ್ರಾಣ ಪ್ರತಿಷ್ಠಾ ಸಮಾರಂಭಕ್ಕಾಗಿ ರಜನಿಕಾಂತ್, ಚಿರಂಜೀವಿ, ರಾಮ್ ಚರಣ್ ಕೂಡ ಅಯೋಧ್ಯೆ ರಾಮಮಂದಿರದಲ್ಲಿ ಕಾಣಿಸಿಕೊಂಡರು.
ಇದನ್ನೂ ಓದಿ: Priyanka Chopra: ಪ್ರಿಯಾಂಕಾ ಚೋಪ್ರಾ ಬಂದ 2 ದಿನಗಳ ಬಳಿಕ ಭಾರತಕ್ಕೆ ಬಂದಿಳಿದ ನಿಕ್!
Actor Priyanka Chopra Jonas, husband and singer Nick Jonas and their daughter Maltie Marie Jonas offered prayers at Ram Janmabhoomi Temple in Ayodhya, Uttar Pradesh.
— ANI (@ANI) March 20, 2024
(Source: Temple priest Pradeep Das) pic.twitter.com/WdWmcrXkwg
ಪ್ರಿಯಾಂಕಾ ಅವರು ನಿಕ್ ಜೋನಾಸ್ ಅವರ ಪುತ್ರಿ ಮಾಲತಿ ಮೇರಿ ಚೋಪ್ರಾ ಜೋನಾಸ್ ಅವರೊಂದಿಗೆ ಗುರುವಾರ ಮುಂಬೈಗೆ ಬಂದಿಳಿದರು. ಒಂದು ದಿನದ ನಂತರ ನಿಕ್ ಕೂಡ ಮುಂಬೈ ತಲುಪಿದ್ದರು. ಇಶಾ ಅಂಬಾನಿ ಆಯೋಜಿಸಿದ್ದ ಹೋಳಿ ಪಾರ್ಟಿ ಸೇರಿದಂತೆ ಮುಂಬೈನಲ್ಲಿ ನಡೆದ ಹಲವು ಕಾರ್ಯಕ್ರಮಗಳಲ್ಲಿ ಪ್ರಿಯಾಂಕಾ ಭಾಗವಹಿಸಿದ್ದರು. ಇತ್ತೀಚೆಗೆ, ಪ್ರಿಯಾಂಕಾ ಆಸ್ಕರ್ ನಾಮನಿರ್ದೇಶನಗೊಂಡ ಸಾಕ್ಷ್ಯಚಿತ್ರ ʻಟು ಕಿಲ್ ಎ ಟೈಗರ್ʼಗೆ ಕಾರ್ಯಕಾರಿ ನಿರ್ಮಾಪಕಿಯಾದರು.
ʻಫ್ರಾಂಕ್ ಇ ಫ್ಲವರ್ಸ್ʼ ನಿರ್ದೇಶಿಸಲಿರುವ ʻದಿ ಬ್ಲಫ್ʼನಲ್ಲಿ ಪ್ರಿಯಾಂಕಾ ನಟಿಸಲಿದ್ದಾರೆ. ಕಾರ್ಲ್ ಅರ್ಬನ್ ಕೂಡ ಇದ್ದಾರೆ.