ಬೆಂಗಳೂರು: `ದಿ ಬ್ಲಫ್’ ಚಿತ್ರದ ಶೂಟಿಂಗ್‌ಗಾಗಿ ಪ್ರಸ್ತುತ ಆಸ್ಟ್ರೇಲಿಯಾದಲ್ಲಿರುವ ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಹೊಸ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಪ್ರಿಯಾಂಕಾ ಅವರು ಮಗಳು ಮಾಲತಿ ಮೇರಿ ಚೋಪ್ರಾ ಜೊನಾಸ್ ಮತ್ತು ಚಿತ್ರತಂಡದ ಜತೆ ಎಂಜಾಯ್ ಮಾಡಿರುವ ಫೋಟೊವನ್ನು ಹಂಚಿಕೊಂಡಿದ್ದಾರೆ.
ಮಾಲತಿ ಅಮ್ಮನ ಜತೆ ಸಖತ್ ಚಿಲ್ ಮಾಡಿದ್ದಾಳೆ. ವಿಡಿಯೊದಲ್ಲಿ ಮಾಲತಿ ಟೀಂ ಜತೆ ಆಟವಾಡಿರುವ, ಹಣ್ಣುಗಳನ್ನು ತಿನ್ನುವುದು , ಬಳಿಕ ಪ್ರಿಯಾಂಕ ಕೈ ಹಿಡಿದು ನಡೆದುಕೊಂಡು ಹೋಗುತ್ತಿರುವುದು ಕ್ಯಾಮೆರಾದಲ್ಲಿ ಸೆರೆ ಆಗಿವೆ. ಕ್ಲಿಪ್ ಉದ್ದಕ್ಕೂ, ಪ್ರಿಯಾಂಕಾ ಬಿಳಿ ಉಡುಪಿನಲ್ಲಿ ಕಾಣಿಸಿಕೊಂಡರು. ಕ್ಲಿಪ್‌ನಲ್ಲಿ ಮಾಲತಿ ನೀಲಿ ಮತ್ತು ಗುಲಾಬಿ ಬಣ್ಣದ ಬಟ್ಟೆಗಳಲ್ಲಿ ಕಾಣಿಸಿಕೊಂಡಿದ್ದಾರೆ.
ವಿಡಿಯೊವನ್ನು ಹಂಚಿಕೊಂಡಿರುವ ಪ್ರಿಯಾಂಕಾ, “ನಾವು ಹೊಸ ಯೋಜನೆಯನ್ನು ಶುರು ಮಾಡಿದ್ದೇವೆ. ನಮ್ಮ ಕುಟುಂಬಗಳು ಮತ್ತು ಮನೆಗಳಿಂದ ದೂರವಿರುತ್ತೇವೆ. ಆದರೆ ನಮ್ಮ ಸುತ್ತ ಮುತ್ತ ಸುತ್ತುವರೆದಿರುವ ಪ್ರತಿಯೊಬ್ಬರೂ ಸಂತೋಷವನ್ನು ನೀಡುವಾಗ ಕಾಲ ಕಳೆಯುವುದು ಸುಲಭವಾಗುತ್ತದೆʼʼಎಂದು ಬರೆದುಕೊಂಡಿದ್ದಾರೆ,
ಕಾರ್ಲ್ ಅರ್ಬನ್ ಕೂಡ ಈ ಸಿನಿಮಾ ಭಾಗವಾಗಿದ್ದಾರೆ. ರುಸ್ಸೋ ಬ್ರದರ್ಸ್ ಬ್ಯಾನರ್ ಎಜಿಬಿಒ ಸ್ಟುಡಿಯೋಸ್ ಮತ್ತು ಅಮೆಜಾನ್ ಎಂಜಿಎಂ ಸ್ಟುಡಿಯೋಸ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರದ ನಿರ್ಮಾಪಕಿಯಾಗಿಯೂ ಪ್ರಿಯಾಂಕಾ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಿಯಾಂಕಾ ಅವರು ತಮ್ಮ ಅಮೆಜಾನ್ ಒರಿಜಿನಲ್ ಸರಣಿ ಸಿಟಾಡೆಲ್‌ನಲ್ಲಿ ನಟಿಸಿದ ನಂತರ ದಿ ರುಸ್ಸೋ ಬ್ರದರ್ಸ್‌ನೊಂದಿಗೆ ಇದು ಎರಡನೇ ಯೋಜನೆಯಾಗಿದೆ.
ಇದನ್ನೂ ಓದಿ: Dolly Dhananjay: ದಾವಣಗೆರೆಯಲ್ಲಿ ‘ಕೋಟಿ’ ಅಬ್ಬರ; ಜೂನ್ 14ರಂದು ಸಿನಿಮಾ ತೆರೆಗೆ!
2018ರಲ್ಲಿ ಮದುವೆಯಾದ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಸ್ 2022ರ ಜನವರಿಯಲ್ಲಿ ತಮಗೆ ಹೆಣ್ಣುಮಗು ಹುಟ್ಟಿದ್ದಾಗಿ ತಿಳಿಸಿದ್ದರು. ಹಾಗೇ, ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆದಿದ್ದಾಗಿಯೂ ಹೇಳಿದ್ದರು. ಪ್ರಿಯಾಂಕಾ ಚೋಪ್ರಾ ಆಗಾಗ ಮಗಳು ಮಾಲತಿ ಮೇರಿಯ ಕುರಿತಾದ ಫೋಟೊಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಲೇ ಇರುತ್ತಾರೆ. ಅಮ್ಮನ ಜತೆ ಶಾಪಿಂಗ್ ಮಾಡುವುದರಿಂದ ಹಿಡಿದು ತಂದೆ ನಿಕ್ ಜೋನಾಸ್ ಜತೆ ಹಲವಾರು ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ತನಕ ಫ್ಯಾನ್ಸ್ ಹೃದಯ ಗೆಲ್ಲುತ್ತಲೇ ಇರುತ್ತಾಳೆ ಮಾಲತಿ.