Site icon Vistara News

Radhika Merchant: ಶಾರುಖ್ ಖಾನ್ ಜತೆ ‘ಚಮ್ಮಕ್ ಚಲ್ಲೋ’ ಹಾಡಿಗೆ ಸಖತ್‌ ಸ್ಟೆಪ್ಸ್‌ ಹಾಕಿದ ಅಂಬಾನಿ ಭಾವಿ ಸೊಸೆ!

Radhika Merchant Chammak Challo with Akon at Ambani bash

ಬೆಂಗಳೂರು: ಶಾರುಖ್ ಖಾನ್ ಮತ್ತು ರಾಧಿಕಾ ಮರ್ಚಂಟ್‌ (Radhika Merchant) ಜಾಮ್‌ನಗರ್‌ದಲ್ಲಿ ನಡೆದ ವಿವಾಹ ಪೂರ್ವ ಆಚರಣೆಯ ಕೊನೆಯ ದಿನದಂದು ‘ಚಮ್ಮಕ್ ಚಲ್ಲೋ’ ಹಾಡಿಗೆ ಸಖತ್‌ ಸ್ಟೆಪ್ಸ್‌ ಹಾಕಿದ್ದಾರೆ. ಕಿಂಗ್ ಖಾನ್ ಮತ್ತು ರಾಧಿಕಾ ವೇದಿಕೆಯಲ್ಲಿ ಒಟ್ಟಿಗೆ ಡ್ಯಾನ್ಸ್‌ ಮಾಡಿರುವ ವಿಡಿಯೊ ವೈರಲ್ ಆಗುತ್ತಿದೆ. ಕ್ಲಿಪ್‌ನಲ್ಲಿ, ಶಾರುಖ್‌ ಮತ್ತು ರಾಧಿಕಾ ಅವರು ‘ಚಮ್ಮಕ್ ಚಲ್ಲೋ’ ಹುಕ್ ಸ್ಟೆಪ್ಸ್‌ ಹಾಕಿರುವ ಬಗ್ಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

ಮತ್ತೊಂದು ವಿಡಿಯೊದಲ್ಲಿ ಶಾರುಖ್ ಖಾನ್, ಸುಹಾನಾ ಖಾನ್ ಮತ್ತು ಸಲ್ಮಾನ್ ಖಾನ್ ಅವರು ‘ಚಮ್ಮಕ್ ಚಲ್ಲೋ’ ಹಾಡಿಗೆ ಡ್ಯಾನ್ಸ್‌ ಮಾಡಿದ್ದಾರೆ. ಎಕಾನ್‌ (Akon ) ಹಾಡಿಗೆ ಎಲ್ಲರೂ ಹುಚ್ಚೆದ್ದು ಕುಣಿದಿದ್ದಾರೆ.

ಗುಜರಾತ್‌ನ ಜಾಮ್‌ನಗರದಲ್ಲಿ ಅನಂತ್ ಅಂಬಾನಿ ಮತ್ತು ರಾಧಿಕಾ ರಾಧಿಕಾ ಮರ್ಚಂಟ್‌ ಅವರ ವಿವಾಹಪೂರ್ವ ಆಚರಣೆಗಳು ಮೂರು ದಿನಗಳ ಕಾಲ ನಡೆದವು. ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರು ಕಾರ್ಯಕ್ರಮವನ್ನು ಆಯೋಜಿಸಿದ್ದು, ಸೆಲೆಬ್ರಿಟಿಗಳು, ಗಣ್ಯರು ಮತ್ತು ಕ್ರೀಡಾಪಟುಗಳು ಭಾಗವಹಿಸಿದ್ದರು.

ಇದನ್ನೂ ಓದಿ: Radhika Merchant: ಅನಂತ್‌ ಅಂಬಾನಿ ಪ್ರಿ- ವೆಡ್ಡಿಂಗ್‌ನಲ್ಲಿ ಭಾಗಿಯಾಗಿದ್ರಂತೆ ರಾಧಿಕಾ ಮಾಜಿ ಬಾಯ್‌ಫ್ರೆಂಡ್‌! ಯಾರದು?

ಮುಕೇಶ್‌ ಅಂಬಾನಿ ಅವರು ಮಗನ ಪ್ರಿ ವೆಡ್ಡಿಂಗ್‌ ಕಾರ್ಯಕ್ರಮಕ್ಕೆ ಸುಮಾರು 1 ಸಾವಿರ ಕೋಟಿ ರೂ. ವ್ಯಯಿಸಿದ್ದಾರೆ ಎಂದು ತಿಳಿದು ಬಂದಿದೆ. ಖ್ಯಾತ ಪಾಪ್‌ ಗಾಯಕಿ ರಿಹಾನಾ, ಸಚಿನ್‌ ತೆಂಡೂಲ್ಕರ್‌, ಮಹೇಂದ್ರ ಸಿಂಗ್‌ ಧೋನಿ ಕುಟುಂಬಸ್ಥರು, ಸಲ್ಮಾನ್‌ ಖಾನ್‌, ಶಾರುಖ್‌ ಖಾನ್‌, ಆಮೀರ್‌ ಖಾನ್‌, ರಣವೀರ್‌ ಸಿಂಗ್‌, ದೀಪಿಕಾ ಪಡುಕೋಣೆ, ಗೌತಮ್‌ ಅದಾನಿ, ಆಲಿಯಾ ಭಟ್‌, ರಣಬೀರ್‌ ಕಪೂರ್‌, ಬಿಲ್‌ ಗೇಟ್ಸ್‌ ಸೇರಿ ದೇಶ-ವಿದೇಶಗಳ ನೂರಾರು ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಜುಲೈ 12ರಂದು ಮುಂಬೈನಲ್ಲಿ ಅನಂತ್‌ ಅಂಬಾನಿ ಹಾಗೂ ರಾಧಿಕಾ ಮರ್ಚಂಟ್‌ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ.

Exit mobile version