ಬೆಂಗಳೂರು: ರಾಧಿಕಾ ಮರ್ಚಂಟ್ ಮತ್ತು ರಣವೀರ್ ಸಿಂಗ್ (Ranveer Singh) ಇತ್ತೀಚೆಗೆ ಜಾಮ್ನಗರ ಪಾರ್ಟಿಯಲ್ಲಿ ಸಿಹಿ ಕ್ಷಣವನ್ನು ಹಂಚಿಕೊಂಡಿದ್ದಾರೆ. ಇದೀಗ ಆ ಸುಂದರ ಕ್ಷಣಗಳ ವಿಡಿಯೊಗಳನ್ನು ರಣವೀರ್ ಫ್ಯಾನ್ಸ್ ಪೇಜ್ ಶೇರ್ ಮಾಡಿಕೊಂಡಿದೆ. ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ರಣವೀರ್ ಅವರನ್ನು ವೇದಿಕೆಯಲ್ಲಿ ರಾಧಿಕಾ ಅಭಿನಂದಿಸಿದರು. ವಿಡಿಯೊ ಕಂಡು ರಣವೀರ್ ಹಾಗೂ ದೀಪಿಕಾ ಫ್ಯಾನ್ಸ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಜಾಮ್ನಗರದಲ್ಲಿ ನಡೆದ ವಿವಾಹ ಪೂರ್ವ ಸಮಾರಂಭದ ದಿನದಂದು ರಾಧಿಕಾ ಸಾಂಪ್ರದಾಯಿಕ ಗುಜರಾತಿ ಉಡುಗೆಯಲ್ಲಿ ಪ್ರೇಕ್ಷಕರನ್ನು ಉದ್ದೇಶಿಸಿ ಮಾತನಾಡಿದ್ದರು. ರಣವೀರ್ ಅವರ ಕೆಲವು ಹಿಟ್ ಹಾಡುಗಳಿಗೆ ಪ್ರದರ್ಶನವನ್ನು ನೀಡಿದ್ದರು. ರಾಧಿಕಾ ವೇದಿಕೆಯಲ್ಲಿ ನಿಂತು ಮಾತನಾಡಿ, “ತುಂಬಾ ಧನ್ಯವಾದಗಳು, ರಣವೀರ್. ಈಗ ರಣವೀರ್ ಮತ್ತು ದೀಪಿಕಾ ಕುಟುಂಬ ಬೆಳೆಯಲಿದೆ. ನಿಮ್ಮ ಕುಟುಂಬಕ್ಕೆ ನಮ್ಮ ಕುಟುಂಬದಿಂದ ಅಭಿನಂದನೆಗಳು’ ಎಂದರು. ರಣವೀರ್ ಈ ಮಾತುಗಳಿಗೆ ನಾಚಿಕೆ ಪಟ್ಟು ಸಂತೋಷ ವ್ಯಕ್ತಪಡಿಸಿದರು.
ರಣವೀರ್ ಮತ್ತು ದೀಪಿಕಾ ಮೂರು ದಿನಗಳ ಕಾಲ ಅಂಬಾನಿ ಫ್ಯಾಮಿಲಿ ಪಾರ್ಟಿಯಲ್ಲಿ ಭಾಗಿಯಾಗಿದ್ದರು. ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ ಪೂರ್ವ ಸಮಾರಂಭದಲ್ಲಿ ದಂಪತಿ ʻಗಲ್ಲಾ ಗುಡಿಯನ್ʼ (Galla Goodiyan) ಸಾಂಗ್ಗೆ ನೃತ್ಯ ಮಾಡಿದ್ದರು. ಈ ಜೋಡಿ ಮಾತ್ರವಲ್ಲದೇ ಹಲವು ಬಾಲಿವುಡ್ ಸೆಲೆಬ್ರಿಟಿಗಳು ವೇದಿಕೆಯಲ್ಲಿ ರಂಜಿಸಿದರು. ಶಾರುಖ್ ಅವರು 2023ರ ಹಿಟ್ ಚಿತ್ರ ʻಪಠಾಣ್ʼ ಸಿನಿಮಾದ ʻಜೂಮ್ ಜೋ ಪಠಾಣ್ʼ ಹಾಡಿಗೆ ನೃತ್ಯ ಮಾಡುತ್ತಿರುವುದು ಕಂಡುಬಂದಿತ್ತು. ಶಾರುಖ್ ಜತೆ ಅವರ ಪುತ್ರಿ ಸುಹಾನಾ ಖಾನ್, ಅಮಿತಾಭ್ ಬಚ್ಚನ್ ಅವರ ಮೊಮ್ಮಗಳು ನವ್ಯಾ ನವೇಲಿ ನಂದಾ, ಅನನ್ಯಾ ಪಾಂಡೆ ಮತ್ತು ಶನಯಾ ಕಪೂರ್ ಕೂಡ ಕುಣಿದು ಕುಪ್ಪಳಿಸಿದ್ದರು.
ಇದನ್ನೂ ಒದಿ: Ranveer Singh: ನೀಲಿ ಚಿತ್ರತಾರೆ ಜತೆಗಿನ ರಣವೀರ್ ಸಿಂಗ್ ಜಾಹೀರಾತಿಗೆ ವಿರೋಧ ಏಕೆ? ವಿಡಿಯೊ ನೋಡಿ!
Radhika : Thank you Ranveer 😊
— Versatile Fan ( Team Rocky) (@versatilefan) March 8, 2024
Now Ranveer and Deepika's family is gonna grow from 2. So congratulations for that from our Jamnagar family to your family. #DeepikaPadukone #RanveerSingh #RadhikaMerchant pic.twitter.com/sy0SXaaR4m
ದೀಪಿಕಾ ಪಡುಕೋಣೆ ಈಗ 2 ತಿಂಗಳ ಗರ್ಭಿಣಿ. ಈ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಅವರು ಮಗುವಿಗೆ ಜನ್ಮ ನೀಡಲಿದ್ದಾರೆ. ಫೆ. 29ರ ಗುರುವಾರ ನಟಿ ತನ್ನ ಇನ್ಸ್ಟಾಗ್ರಾಮ್ನಲ್ಲಿ ಈ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಜೋಡಿ ಪರಸ್ಪರ ಪ್ರೀತಿ ಮಾಡಿ ಮದುವೆಯಾಗಿತ್ತು. ಯಾವುದೇ ಕ್ಯಾಪ್ಷನ್ ಇಲ್ಲ. ಮಗುವಿಗೆ ಸಂಬಂಧಿಸಿದ ಬಟ್ಟೆ, ಶೂ, ಮುಂತಾದ ವಸ್ತುಗಳಿರುವ ಚಿತ್ರವನ್ನು ಅವರು ಇನ್ಸ್ಟಾದಲ್ಲಿ ಪೋಸ್ಟ್ ಮಾಡಿದ್ದರು. ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅವರು ಪರಸ್ಪರ ಪ್ರೀತಿ ಮದುವೆ ಆಗಿದ್ದು 2018ರಲ್ಲಿ. ಆರು ವರ್ಷಗಳ ಬಳಿಕ ಅವರು ಮಗು ಹೊಂದುವ ನಿರ್ಧಾರಕ್ಕೆ ಬಂದಿದ್ದಾರೆ. ಫೈಟರ್ನಲ್ಲಿ ಹೃತಿಕ್ ರೋಷನ್ ಜತೆಗೆ ಕೊನೆಯದಾಗಿ ಕಾಣಿಸಿಕೊಂಡ ದೀಪಿಕಾ, ಸದ್ಯ ಸಿನಿಮಾದಿಂದ ಬ್ರೇಕ್ ಪಡೆದುಕೊಂಡಿದ್ದಾರೆ.