ಬೆಂಗಳೂರು: ರಾಖಿ ಸಾವಂತ್ (Rakhi Sawant) ಅವರ ಮಾಜಿ ಪತಿ ಆದಿಲ್ ಖಾನ್ ದುರಾನಿ (Adil Khan Durrani ) ಇದೀಗ ಬಿಗ್ ಬಾಸ್ 12ರ ಖ್ಯಾತಿಯ ಸೋಮಿ ಖಾನ್ ಅವರನ್ನು ವಿವಾಹವಾಗಿದ್ದಾರೆ. ಗುರುವಾರ ರಾತ್ರಿ (ಮಾ.7) ಆದಿಲ್ ಮತ್ತು ಸೋಮಿ ಈ ಸುದ್ದಿಯನ್ನು ಇನ್ಸ್ಟಾದಲ್ಲಿ ಪೋಸ್ಟ್ ಮಾಡುವ ಮೂಲಕ ಅಧಿಕೃತವಾಗಿ ಸುದ್ದಿ ಹಂಚಿಕೊಂಡಿದ್ದಾರೆ. ವಿವಾಹದ ಫೋಟೊಗಳನ್ನು ಶೇರ್ ಮಾಡಿಕೊಂಡಿದೆ ಜೋಡಿ.
ಮೊದಲ ಫೋಟೊದಲ್ಲಿ, ಆದಿಲ್ ಮತ್ತು ಸೋಮಿ ಖಾನ್ ಮದುವೆಯಾಗಿರುವ ಪ್ರಮಾಣಪತ್ರವನ್ನು ಹಿಡಿದುಕೊಂಡಿದ್ದಾರೆ. ಇನ್ನೊಂದು ಫೋಟೊದಲ್ಲಿ ಆದಿಲ್ ಅವರು ಸೋಮಿಯ ಹಣೆಯ ಮೇಲೆ ಮುತ್ತು ನೀಡುತ್ತಿರುವುದನ್ನು ಕಾಣಬಹುದು.
ಮದುವೆ ಸಮಾರಂಭದಲ್ಲಿ ಸೋಮಿ ಕೆಂಪು ಲೆಹೆಂಗಾವನ್ನು ಧರಿಸಿದ್ದರು. ಆದಿಲ್ ಗೋಲ್ಡನ್ ಶೆರ್ವಾನಿ ಮತ್ತು ಮೆರೂನ್ ಪೇಟವನ್ನು ಧರಿಸಿದ್ದರು. ಮಾರ್ಚ್ 3ರಂದು ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ. ಫೋಟೊಗಳನ್ನು ಹಂಚಿಕೊಂಡ ಅವರು ಪೋಸ್ಟ್ಗೆ “ಬಿಸ್ಮಿಲ್ಲಾಹಿರ್ ರಹಮಾನಿರ್ ರಹೀಮ್. ಅಲ್ಲಾಹನ ಕೃಪೆಯಿಂದ ನಾವು ನಮ್ಮ ಸರಳ ಮತ್ತು ಸುಂದರ ಸಮಾರಂಭ ಆಚರಿಸಿದ್ದೇವೆ ಎಂದು ಘೋಷಿಸಲು ನಾವು ತುಂಬಾ ಸಂತೋಷಪಡುತ್ತೇವೆ. ಅಲ್ಹಮ್ದುಲ್ಲಿಲಾಹ್, ಆಶೀರ್ವಾದಕ್ಕಾಗಿ ನಾವು ಕೃತಜ್ಞರಾಗಿರುತ್ತೇವೆ. ನಮ್ಮ ಕುಟುಂಬಗಳು ಮತ್ತು ಸ್ನೇಹಿತರ ಪ್ರೀತಿ ಮತ್ತು ಬೆಂಬಲಕ್ಕಾಗಿ ಚಿರಋಣಿ. ಗಂಡ ಮತ್ತು ಹೆಂಡತಿಯಾಗಿ ನಮ್ಮ ಹೊಸ ಪ್ರಯಾಣವನ್ನು ಪ್ರಾರಂಭಿಸುತ್ತಿದ್ದೇವೆ. ಆದಿಲ್ ಖಾನ್ ದುರಾನಿ, ಸೋಮಿ ಆದಿಲ್ ಖಾನ್ 03.03.2024ʼʼಎಂದು ಬರೆದುಕೊಂಡಿದ್ದಾರೆ.
ಅರ್ಚನಾ ಗೌತಮ್ ಪೋಸ್ಟ್ಗೆ, “ವಾವ್, ಅಭಿನಂದನೆಗಳು” ಎಂದು ಬರೆದಿದ್ದಾರೆ. ಸೋಮಿಯ ಸಹೋದರಿ ಸಬಾ ಖಾನ್, “ನನ್ನ ಕುಟುಂಬ” ಎಂದು ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: Rakhi Sawant: ಬಿಗ್ ಬಾಸ್ ಮಾಜಿ ಸ್ಪರ್ಧಿಯನ್ನು ವಿವಾಹವಾದ ʻರಾಖಿ ಸಾವಂತ್ʼ ಮಾಜಿ ಪತಿ!
ಆದಿಲ್ ಖಾನ್ ದುರಾನಿ ಪೋಸ್ಟ್
ಆದಿಲ್ ರಾಖಿಯನ್ನು ಮದುವೆಯಾಗಿದ್ದರು
ಕಳೆದ ವರ್ಷ ರಾಖಿ ಅವರು ಆದಿಲ್ ಜತೆ ಮದುವೆಯಾಗುವುದಾಗಿ ಘೋಷಿಸಿದ್ದರು. ಕೆಲವು ವಾರಗಳ ನಂತರ, ಆದಿಲ್ ವಿರುದ್ಧ ಎಫ್ಐಆರ್ ದಾಖಲಿಸಿದ್ದರು. ಕಳೆದ ವರ್ಷ ಫೆಬ್ರವರಿಯಲ್ಲಿ ಆದಿಲ್ ಅವರನ್ನು ಬಂಧಿಸಲಾಗಿತ್ತು. ಜಾಮೀನು ಪಡೆದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಆದಿಲ್ ಅವರು ರಾಖಿ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದರು.
ಆ ಬಳಿಕ 2023ರ ಜೂನ್ನಲ್ಲಿ ರಾಖಿ ಸಾವಂತ್ ತಮ್ಮ ಮನೆಯ ಹೊರಗೆ ಕೆಂಪು ಲೆಹೆಂಗಾದಲ್ಲಿ ಡ್ಯಾನ್ಸ್ ಮಾಡಿದ್ದರು. ʻನಾನು ಅಂತಿಮವಾಗಿ ವಿಚ್ಛೇದನ ಪಡೆಯುತ್ತಿದ್ದೇನೆ ಮತ್ತು ಇದು ನನ್ನ ಬ್ರೇಕಪ್ ಪಾರ್ಟಿʼಎಂದು ಹೇಳಿಕೊಂಡಿದ್ದರು.