Site icon Vistara News

Rakhi Sawant: ಬಿಗ್ ಬಾಸ್ ಮಾಜಿ ಸ್ಪರ್ಧಿಯನ್ನು ವಿವಾಹವಾದ ʻರಾಖಿ ಸಾವಂತ್‌ʼ ಮಾಜಿ ಪತಿ!

Rakhi Sawant's Ex-Husband Adil Khan Gets married Again

ರಾಖಿ ಸಾವಂತ್ ಅವರ ಮಾಜಿ ಪತಿ ಆದಿಲ್ ಖಾನ್ ದುರಾನಿ ( Adil Khan Durrani) ಮತ್ತೊಮ್ಮೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಆದಿಲ್ ಖಾನ್ ಇತ್ತೀಚೆಗೆ ಜೈಪುರದಲ್ಲಿ ಹಿಂದಿ ಬಿಗ್ ಬಾಸ್ 12ರ ಖ್ಯಾತಿಯ ಸೋಮಿ ಖಾನ್ ( Somi Khan) ಅವರನ್ನು ವಿವಾಹವಾಗಿದ್ದಾರೆ. ಈ ಮದುವೆಯಲ್ಲಿ ಆಪ್ತರು ಮಾತ್ರ ಹಾಜರಿದ್ದರು. ಸೋಮಿ ಅವರು ಸಬಾ ಖಾನ್ ಅವರ ಸಹೋದರಿ. ಕಳೆದ ಕೆಲವು ತಿಂಗಳುಗಳಿಂದ ಆದಿಲ್ ಹಾಗೂ ಸೋಮಿ ಇಬ್ಬರೂ ತಮ್ಮ ಸಂಬಂಧವನ್ನು ರಹಸ್ಯವಾಗಿ ಇಟ್ಟಿದ್ದರು ಎನ್ನಲಾಗಿದೆ. ಸಲ್ಮಾನ್ ಖಾನ್ ನಡೆಸಿಕೊಡುವ ‘ಬಿಗ್ ಬಾಸ್ ಹಿಂದಿ ಸೀಸನ್ 12’ರಲ್ಲಿ ಸೋಮಿ ಮತ್ತು ಸಬಾ ಖಾನ್ ಇಬ್ಬರೂ ಸ್ಪರ್ಧಿಗಳಾಗಿ ಭಾಗವಹಿಸಿದ್ದರು.

ಸದ್ಯಕ್ಕೆ ಆದಿಲ್ ಹಾಗೂ ಸೋಮಿ ವಿವಾಹದ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ. ಬಿಗ್ ಬಾಸ್ 12ರಲ್ಲಿ ದೀಪಿಕಾ ಕಕ್ಕರ್ ವಿಜೇತರಾಗಿ ಹೊರಹೊಮ್ಮಿದ್ದರು. ಆದಿಲ್ ಖಾನ್ ದುರಾನಿ ಈ ಹಿಂದೆ ರಾಖಿ ಸಾವಂತ್ ಅವರನ್ನು ಮದುವೆಯಾಗಿದ್ದರು. ರಾಖಿ ಸಾವಂತ್‌ ಅವರು ಆದಿಲ್ ವಿರುದ್ಧ ಹಲವಾರು ಆರೋಪಗಳನ್ನು ಮಾಡಿದ ನಂತರ ಬೇರೆಯಾದರು.

ಸೋಮಿ ಮತ್ತು ಆದಿಲ್ ಹೇಗೆ ಭೇಟಿಯಾದರು, ಎಂಬ ಮಾಹಿತಿ ಇನ್ನಷ್ಟೇ ಹೊರಬೀಳಬೇಕಿದೆ. ರಾಖಿ ನೀಡಿದ ದೂರಿನ ಮೇರೆಗೆ ಆದಿಲ್ ಅವರನ್ನು ಪೊಲೀಸರು ಬಂಧಿಸಿದ್ದರು.

ಇದನ್ನೂ ಓದಿ: Rakhi Sawant: ರಾಖಿ ಸಾವಂತ್‌ ಬಯೋಪಿಕ್‌ಗೆ ರಿಷಬ್‌ ಶೆಟ್ಟಿ ನಿರ್ದೇಶನ; ನಟಿಯ ಹೊಸ ಆಸೆ ಪೂರೈಸ್ತಾರಾ ಶೆಟ್ರು?

ಆದಿಲ್‌ಗೂ ಮುನ್ನ ರಾಖಿ ಅವರು ರಿತೇಶ್‌ ಅವರನ್ನು ಮದುವೆಯಾಗಿದ್ದರು. ಇಬ್ಬರೂ ಒಟ್ಟಿಗೆ ಬಿಗ್ ಬಾಸ್ 15 ಮನೆಗೆ ಪ್ರವೇಶಿಸಿದ್ದರು. ಆದರೆ ಕಾರ್ಯಕ್ರಮದ ಗ್ರ್ಯಾಂಡ್ ಫಿನಾಲೆಯ ನಂತರ ಶೀಘ್ರದಲ್ಲೇ ಬೇರ್ಪಟ್ಟರು. ಫೆಬ್ರವರಿ 2022ರಲ್ಲಿ, ರಾಖಿ ರಿತೇಶ್‌ನಿಂದ ಬೇರ್ಪಡುವುದಾಗಿ ಘೋಷಿಸಿದರು.

ಇನ್ನು ಆದಿಲ್‌ ಕೂಡ ರಾಖಿ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದರು. ರಿತೇಶ್ ಜತೆ ಮದುವೆಯಾಗಿರುವಾಗಲೇ ರಾಖಿ ತನ್ನನ್ನು ಮದುವೆಯಾಗಿದ್ದಾಳೆ ಎಂದು ಆದಿಲ್ ಆರೋಪಿಸಿದ್ದರು. ಅಷ್ಟೇ ಅಲ್ಲದೇ ಮದುವೆಯಾದ ಮೇಲೂ ಆಕೆ ಮೊದಲ ಪತಿ ರಿತೇಶ್​ (Ritesh) ಜತೆ ಸಂಬಂಧವನ್ನೂ ಇಟ್ಟುಕೊಂಡಿದ್ದಳು ಎಂದಿದ್ದರು. ನನ್ನದಲ್ಲದ ತಪ್ಪಿಗೆ ನಾನು ಜೈಲು ಅನುಭವಿಸುವಂತಾಯಿತು. ರಾಖಿ ನನ್ನನ್ನು ಟ್ರ್ಯಾಪ್​ ಮಾಡಿದಳು ಎಂದೆಲ್ಲಾ ಹೇಳಿದ್ದರು.

Exit mobile version