ಬೆಂಗಳೂರು: ನಟಿ ರಕುಲ್ ಪ್ರೀತ್ ಸಿಂಗ್ (Rakul Preet Singh) ಮತ್ತು ನಟ, ನಿರ್ಮಾಪಕ ಜಾಕಿ ಭಗ್ನಾನಿ (Jackky Bhagnani) ಬುಧವಾರ (ಫೆಬ್ರವರಿ 21) ಗೋವಾದಲ್ಲಿ ನಡೆದ ಸಮಾರಂಭದಲ್ಲಿ ಸತಿ-ಪತಿಗಳಾದರು. ಮೊದಲು ಸಿಖ್ ಸಂಪ್ರದಾಯವಾದ ಆನಂದ್ ಕರಜ್ (Anand Karaj)ನಂತೆ ಈ ಜೋಡಿ ವಿವಾಹವಾದರು. ದಕ್ಷಿಣ ಗೋವಾದ ಐಟಿಸಿ ಗ್ರ್ಯಾಂಡ್ ಹೋಟೆಲ್‌ನಲ್ಲಿ ನಡೆದ ಈ ವಿವಾಹ ಸಮಾರಂಭಕ್ಕೆ ಕುಟುಂಬಸ್ಥರು ಮತ್ತು ಆಪ್ತ ಗೆಳೆಯರಿಗಷ್ಟೇ ಆಹ್ವಾನವಿತ್ತು. ರಕುಲ್ ಪ್ರೀತ್ ಸಿಂಗ್ ಮತ್ತು ಜಾಕಿ ಭಗ್ನಾನಿ ಮದುವೆಯ ಫೋಟೊಗಳು ಇದೀಗ ವೈರಲ್ ಆಗಿದ್ದು, ಗಮನ ಸೆಳೆದಿವೆ.
ತರುಣ್ ತಹಿಲಿಯಾನಿ ಲೆಹೆಂಗಾದಲ್ಲಿ ರಕುಲ್ ಪ್ರೀತ್ ಸಿಂಗ್ ಮಿಂಚಿದರೆ, ಜಾಕಿ ಭಗ್ನಾನಿ ಅವರ ಗೋಲ್ಡನ್ ಶೇರ್ವಾನಿಯಲ್ಲಿ ಮಸ್ತಾಗಿ ಕಂಡರು. ಮದುವೆ ಸಂಭ್ರಮಾಚರಣೆಯ ನಡುವೆ, ಜಾಕಿ ಅವರು ರಕುಲ್ ಪ್ರೀತ್‌ಗಾಗಿ ವಿಶೇಷ ಉಡುಗೊರೆಯನ್ನು ಸಹ ನೀಡಿದರು. ʻಬಿನ್ ತೇರೆʼ ಎಂಬ ಗೀತೆಯನ್ನು, ಸ್ವತಃ ಅವರೇ ಬರೆದು, ಸಂಯೋಜಿಸಿ ಹಾಡಿದ್ದಾರೆ.
ಎರಡು ಸಂಪ್ರದಾಯದಂತೆ ವಿವಾಹ
ಇದಕ್ಕೂ ಮೊದಲು ಜೋಡಿಯ ಆಪ್ತ ಮೂಲಗಳು ಮಾಹಿತಿ ನೀಡಿ, ಎರಡು ಸಂಪ್ರದಾಯದಂತೆ ವಿವಾಹ ನಡೆಯಲಿದೆ ಎಂಬ ಮಾಹಿತಿ ನೀಡಿದ್ದರು. ಆನಂದ್ ಕರಜ್ (ಸಿಖ್) ಮತ್ತು ಸಿಂಧಿ ಶೈಲಿಯಲ್ಲಿ ಸಮಾರಂಭ ಆಯೋಜಿಸಲಾಗಿದೆ. 2021ರ ಅಕ್ಟೋಬರ್‌ನಲ್ಲಿ ರಕುಲ್ ಪ್ರೀತ್ ಸಿಂಗ್ ಮತ್ತು ಜಾಕಿ ಭಗ್ನಾನಿ ತಮ್ಮ ಸಂಬಂಧವನ್ನು ಅಧಿಕೃತವಾಗಿ ಘೋಷಿಸಿಕೊಂಡಿದ್ದರು.
ಇದನ್ನೂ ಓದಿ: Rakul Preet Singh: ರಕುಲ್ ಪ್ರೀತ್ ಸಿಂಗ್-ಜಾಕಿ ಭಗ್ನಾನಿ ಜೋಡಿಗೆ ಮೋದಿ ಅಭಿನಂದನೆ
ಸ್ಯಾಂಡಲ್‌ವುಡ್ ಮೂಲಕ ಚಿತ್ರರಂಗ ಪ್ರವೇಶಿಸಿದ್ದ ರಕುಲ್ ಪ್ರೀತ್
ವಿಶೇಷ ಎಂದರೆ ರಕುಲ್ ಪ್ರೀತ್ ಸಿಂಗ್ ಸ್ಯಾಂಡಲ್‌ವುಡ್ ಮೂಲಕ ಬಣ್ಣದ ಲೋಕ ಪ್ರವೇಶಿಸಿದ್ದರು. 2009ರಲ್ಲಿ ತೆರೆಕಂಡ ʼಗಿಲ್ಲಿʼ ಚಿತ್ರದಲ್ಲಿ ಅವರು ಗುರುರಾಜ್ ಜಗ್ಗೇಶ್‌ಗೆ ನಾಯಕಿಯಾಗಿದ್ದರು. ತಮಿಳಿನ ʼ7ಜಿ ರೈನ್‌ಬೋ ಕಾಲನಿʼ ಚಿತ್ರದ ರಿಮೇಕ್ ಆಗಿದ್ದ ʼಗಿಲ್ಲಿʼಯಲ್ಲಿ ಅನಿತಾ ಪಾತ್ರದ ಮೂಲಕ ಮೋಡಿ ಮಾಡಿದ್ದರು. ಬಳಿಕ 3 ವರ್ಷ ಬ್ರೇಕ್ ಪಡೆದುಕೊಂಡಿದ್ದ ರಕುಲ್ ಪ್ರೀತ್ 2011ರಲ್ಲಿ ʼಕೆರಾಟನ್ʼ, ʼಯುವನ್ʼ ದ್ವಿಭಾಷಾ ಸಿನಿಮಾ ಮೂಲಕ ತೆಲುಗು ಮತ್ತು ತಮಿಳು ಚಿತ್ರರಂಗ ಪ್ರವೇಶಿಸಿದ್ದರು. ಇನ್ನು 2014ರಲ್ಲಿ ಬಿಡುಗಡೆಯಾದ ʼಯಾರಿಯಾನ್ʼ ಸಿನಿಮಾ ಮೂಲಕ ಬಾಲಿವುಡ್‌ಗೆ ಕಾಲಿಟ್ಟಿದ್ದರು. ಬಳಿಕ ತಮಿಳು, ತೆಲುಗು ಮತ್ತು ಹಿಂದಿಯ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಸದ್ಯ ʼಮೇರಿ ಪತ್ನಿ ಕʼ ರಿಮೇಕ್ ಚಿತ್ರದಲ್ಲಿ ಮತ್ತು ʼಇಂಡಿಯನ್ 2ʼ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಎಸ್.ಶಂಕರ್ ನಿರ್ದೇಶನದ ʼಇಂಡಿಯನ್ 2ʼ ಚಿತ್ರದಲ್ಲಿ ಕಮಲ್ ಹಾಸನ್ ನಾಯಕರಾಗಿ ಕಾಣಿಸಿಕೊಳ್ಳುತ್ತಿದ್ದು, ನಿರೀಕ್ಷೆ ಮೂಡಿಸಿದೆ.