ಬೆಂಗಳೂರು: ಗರ್ಭಕಂಠ ಕ್ಯಾನ್ಸರ್ (Cervical cancer) ಕುರಿತಂತೆ ಜಾಗೃತಿ ಮೂಡಿಸುವುದಕ್ಕಾಗಿ ಪೂನಂ ಪಾಂಡೆ (Poonam Pandey) ಸುಳ್ಳು ಸುದ್ದಿ ಹಬ್ಬಿಸಿರುವ ಬಗ್ಗೆ ನಟಿಯನ್ನು ಅರೆಸ್ಟ್ ಮಾಡಬೇಕು ಎಂದು ಅಭಿಮಾನಿಗಳು ಮತ್ತು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದರ ಬೆನ್ನಲ್ಲೆ ನಟಿಯ ಈ ಸಾಹಸವನ್ನು ಚಲನಚಿತ್ರ ನಿರ್ದೇಶಕ, ನಿರ್ಮಾಪಕ ರಾಮ್‌ಗೋಪಾಲ್ ವರ್ಮಾ ಶ್ಲಾಘಿಸಿದ್ದಾರೆ. ʻಗರ್ಭಕಂಠದ ಕ್ಯಾನ್ಸರ್ ಕುರಿತು ಚರ್ಚೆಯು ಈಗ ಎಲ್ಲೆಡೆ ಟ್ರೆಂಡಿಂಗ್ ಆಗಿದೆ. ನಿಮಗೆ ಖುಷಿಯ ಜತೆ ದೀರ್ಘ ಆಯಸ್ಸು ಸಿಗಲಿ’ಎಂದು ಟ್ವೀಟ್ ಮಾಡಿದ್ದಾರೆ ರಾಮ್‌ಗೋಪಾಲ್ ವರ್ಮಾ.
ರಾಮ್‌ಗೋಪಾಲ್ ವರ್ಮಾ ಈ ಬಗ್ಗೆ ಟ್ವೀಟ್ ಮಾಡಿ ʻʻಹೇ..ಪೂನಂ ಪಾಂಡೆ! ಈ ವಿಷಯದ ಬಗ್ಗೆ ನೀವು ಇಟ್ಟ ಹೆಜ್ಜೆಗೆ ಟೀಕೆಗಳು ಬರಬಹುದು. ಸಾವಿನ ಸುಳ್ಳು ಸುದ್ದಿ ಮೂಲಕ ನೀವು ಮೂಡಿಸಿದ ಜಾಗೃತಿ ಮತ್ತು ಮಾಡಿದ ಸಾಧನೆ, ನಿಮ್ಮ ಉದ್ದೇಶವನ್ನು ಪ್ರಶ್ನಿಸಲು ಯಾರಿಗೂ ಸಾಧ್ಯವಿಲ್ಲ . ಗರ್ಭಕಂಠದ ಕ್ಯಾನ್ಸರ್ ಕುರಿತು ಚರ್ಚೆಯು ಈಗ ಎಲ್ಲೆಡೆ ಟ್ರೆಂಡಿಂಗ್ ಆಗಿದೆ .ನಿಮ್ಮಂತೆಯೇ ನಿಮ್ಮ ಆತ್ಮ ಕೂಡ ಸುಂದರವಾಗಿದೆ. ನಿಮಗೆ ಖುಷಿಯ ಜತೆ ದೀರ್ಘ ಆಯಸ್ಸು ಸಿಗಲಿ’ ಎಂದು ರಾಮ್ ಗೋಪಾಲ್ ವರ್ಮಾ ಹಾರೈಸಿದ್ದಾರೆ.
ಪೂನಂ ಪಾಂಡೆಯ ಬಗ್ಗೆ ರಾಮ್ ಗೋಪಾಲ್ ವರ್ಮಾ ಅವರ ಮೆಚ್ಚುಗೆಯ ಮಾತುಗಳಿಗೆ ನೆಟ್ಟಿಗರು ಪ್ರತಿಕ್ರಿಯಿಸಿ ಟ್ರೋಲ್ ಮಾಡುತ್ತಿದ್ದಾರೆ. “ಜಾಗೃತಿ ಮೂಡಿಸಲು ಹಲವು ಮಾರ್ಗಗಳಿವೆ. ಆದರೆ ಪೂನಂಪಾಂಡೆ ಮಾಡಿದ್ದು ಸರಿ ಅಲ್ಲʼʼಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು “ಸರ್, ನೀವು ಮಾತ್ರ ಇಂತಹ ಹುಚ್ಚು ಮಟ್ಟದ ಪ್ರಚಾರವನ್ನು ಪ್ರಶಂಸಿಸಿದ್ದು!ʼʼಎಂದು ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: Oscars 2023 : ಆಸ್ಕರ್ ವಿಜೇತ ʼನಾಟು ನಾಟುʼ ಹಾಡಿನ ರೂವಾರಿ ಇವರು
Hey @iPoonampandey the extreme method u employed to draw attention to this issue might attract some criticism , but no one can question ur INTENT nor what u ACHIEVED with this HOAX .. Discussion on cervical cancer is TRENDING all across now 🙏🙏🙏 Your SOUL is as BEAUTIFUL as YOU…
— Ram Gopal Varma (@RGVzoomin) February 3, 2024
ಘಟನೆ ಏನು?
ಬಾಲಿವುಡ್ ನಟಿ, ರೂಪದರ್ಶಿ ಪೂನಂ ಪಾಂಡೆ (Poonam Pandey) (32) ಫೆ.2ರಂದು ಮೃತಪಟ್ಟಿದ್ದಾರೆ ಎಂದು ಅವರ ಮ್ಯಾನೇಜರ್ ಪೋಸ್ಟ್ ಹಂಚಿಕೊಂಡಿದ್ದರು. ಗರ್ಭಕಂಠ ಕ್ಯಾನ್ಸರ್‌ನಿಂದ (Cervical Cancer) ಬಳಲುತ್ತಿದ್ದ ಅವರು ಉತ್ತರ ಪ್ರದೇಶದ ಕಾನ್ಪುರದಲ್ಲಿರುವ ತಮ್ಮ ನಿವಾಸದಲ್ಲಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿತ್ತು. “ಇಂದಿನ ಬೆಳಗ್ಗೆಯು ನಮಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಪೂನಂ ಪಾಂಡೆ ಅವರು ಗರ್ಭಕಂಠ ಕ್ಯಾನ್ಸರ್‌ನಿಂದ ಅಗಲಿದರು ಎಂದು ಹೇಳಲು ಭಾರಿ ದುಃಖವಾಗುತ್ತಿದೆ. ಜೀವನದಲ್ಲಿ ಅವರು ಯಾರನ್ನೇ ಭೇಟಿಯಾದರೂ, ಪ್ರೀತಿ ಹಾಗೂ ವಿನಯದಿಂದ ವರ್ತಿಸಿದ್ದರು. ಅವರ ಖಾಸಗಿ ಹಾಗೂ ವ್ಯಯಕ್ತಿಕ ಬದುಕಿನ ಬಗ್ಗೆ ಯಾರೂ ಮಾತನಾಡಬಾರದು ಎಂಬುದಾಗಿ ಮನವಿ ಮಾಡುತ್ತೇವೆ” ಎಂದು ಅವರ ಮ್ಯಾನೇಜರ್ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದರು.
ನಾನು ಸತ್ತಿಲ್ಲ. ನಾನು ಜೀವಂತವಾಗಿದ್ದೇನೆ
ಇದಾದ ಒಂದು ದಿನದ ಬಳಿಕ ʻನಾನು ಸತ್ತಿಲ್ಲ. ನಾನು ಜೀವಂತವಾಗಿದ್ದೇನೆʼಎಂದು ಪೂನಂ ವಿಡಿಯೊ ಹಂಚಿಕೊಂಡರು. ಪೂನಂ ವಿಡಿಯೊದಲ್ಲಿ ʻʻನಿಮ್ಮೆಲ್ಲರೊಂದಿಗೆ ಮಹತ್ವದ ಸಂಗತಿಯೊಂದನ್ನು ಹೇಳಲೇಬೇಕಾಗಿದೆ. ನಾನು ಇನ್ನೂ ಇದ್ದೇನೆ. ಜೀವಂತವಾಗಿದ್ದೇನೆ. ಗರ್ಭಕಂಠದ ಕ್ಯಾನ್ಸರ್ ನನ್ನನ್ನು ಬಲಿ ತೆಗೆದುಕೊಂಡಿಲ್ಲ, ದುರಂತವೆಂದರೆ, ಈ ರೋಗವನ್ನು ಹೇಗೆ ನಿಭಾಯಿಸುವುದು ಎಂಬುದರ ಬಗ್ಗೆ ಜ್ಞಾನದ ಕೊರತೆಯಿಂದಾಗಿ ಸಾವಿರಾರು ಮಹಿಳೆಯರು ಜೀವ ಕಳೆದುಕೊಂಡಿದ್ದಾರೆ. ಇತರ ಕೆಲವು ಕ್ಯಾನ್ಸರ್ ಗಳಿಗಿಂತ ಭಿನ್ನವಾಗಿ ಗರ್ಭಕಂಠದ ಕ್ಯಾನ್ಸರ್ ಅನ್ನು ಸಂಪೂರ್ಣವಾಗಿ ತಡೆಗಟ್ಟಬಹುದು. ಎಚ್ಪಿವಿ ಲಸಿಕೆ ಮತ್ತು ಆರಂಭಿಕ ಪರೀಕ್ಷೆಗಳು ಇಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಈ ರೋಗದಿಂದ ಯಾರೂ ಪ್ರಾಣ ಕಳೆದುಕೊಳ್ಳುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ನಮಗೆ ಹಲವಾರು ಮಾರ್ಗಗಳಿವೆ. ವಿಮರ್ಶಾತ್ಮಕ ಜಾಗೃತಿಯೊಂದಿಗೆ ಪರಸ್ಪರರನ್ನು ಸಬಲೀಕರಣಗೊಳಿಸೋಣ ಮತ್ತು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಪ್ರತಿಯೊಬ್ಬ ಮಹಿಳೆಗೆ ಮಾಹಿತಿ ನೀಡಬೇಕಾಗಿದೆ. ಈ ರೋಗದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳುವುದಕ್ಕೆ ನನ್ನ ಬಯೊದಲ್ಲಿರುವ ಲಿಂಕ್ ಗೆ ಭೇಟಿ ನೀಡಿ. ಈ ರೋಗದ ವಿನಾಶಕಾರಿ ಪರಿಣಾಮವನ್ನು ಕೊನೆಗೊಳಿಸಲು ಒಟ್ಟಾಗಿ ಪ್ರಯತ್ನಿಸೋಣʼʼ ಎಂದು ಪೂನಂ ಪಾಂಡೆ ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ಬರೆದುಕೊಂಡಿದ್ದರು.
ಇದಾದ ಬಳಿಕ ನಟಿಯ ವಿರುದ್ಧ ಅನೇಕರು ಭಾರಿ ಆಕ್ರೋಶ ಹೊರ ಹಾಕಿದರು. ಅರೆಸ್ಟ್ ಮಾಡಬೇಕು ಎಂದು ಉತ್ತಾಯಿಸಿದರು. ಕೆಲವು ಕಡೆಗಳಲ್ಲಿ ಕೇಸ್ ಕೂಡ ದಾಖಲಾಗಿದೆ.