Site icon Vistara News

Ramayana Movie: ರಾಮನಿಗೆ 75 ಕೋಟಿ ರೂ, ರಾವಣನಿಗೆ 50 ಕೋಟಿ ರೂ, ಸೀತೆಗೆ ಸಂಭಾವನೆ ಎಷ್ಟು?

Ramayana Movie

ಬೆಂಗಳೂರು: ರಣಬೀರ್ ಕಪೂರ್ (Ranbir Kapoor) ಮುಂಬರುವ ಸಿನಿಮಾ ‘ರಾಮಾಯಣ’ ಚಿತ್ರದ (Ramayana Movie) ರಾಮನ ಪಾತ್ರಕ್ಕಾಗಿ ಕಠಿಣ ತರಬೇತಿಯನ್ನು ಪಡೆಯುತ್ತಿದ್ದಾರೆ. ಚಿತ್ರದಲ್ಲಿ ರಾಮನಾಗಿ ರಣಬೀರ್‌ ಕಪೂರ್‌, ಸೀತೆಯ ಪಾತ್ರದಲ್ಲಿ ಸಾಯಿ ಪಲ್ಲವಿ, ರಾವಣನಾಗಿ ಯಶ್‌ ನಟಿಸಲಿದ್ದಾರೆ. ಇದೀಗ ಈ ಮೂವರು ಚಿತ್ರಕ್ಕಾಗಿ ಪಡೆಯಲಿರುವ ಸಂಭಾವನೆ ಬಗ್ಗೆ ವರದಿಯಾಗಿದೆ.

ನಿತೇಶ್‌ ತಿವಾರಿ ಅವರ ಈ ʻರಾಮಾಯಣʼ ಸಿನಿಮಾ ಮೂರು ಭಾಗಗಳಲ್ಲಿ ಬರಲಿದೆ ಎಂದು ವರದಿಯಾಗಿದೆ. ರಣಬೀರ್‌ ಅವರು ಒಂದು ಚಿತ್ರಕ್ಕೆ 75 ಕೋಟಿ ರೂ. ಅಂತೆ ಮೂರು ಚಿತ್ರಕ್ಕೆ 225ಕೋಟಿ ರೂ. ಹಾಗೇ ಯಶ್‌ ಒಂದು ಚಿತ್ರಕ್ಕೆ 50 ಕೋಟಿ ರೂ. ಅಂತೆ ಮೂರು ಚಿತ್ರಕ್ಕೆ 150 ಕೋಟಿ ರೂ. ಸಾಯಿ ಪಲ್ಲವಿ ಮೂರು ಚಿತ್ರಗಳಿಂದ 18 ಕೋಟಿ ರೂ. ಸಂಭಾವನೆ ಪಡೆಯಲಿದ್ದಾರೆ ಎಂದು ವರದಿಯಾಗಿದೆ.

ಈ ಮುಂಚೆ ನಟರ ವೇಷಭೂಷಣದಲ್ಲಿರುವ ಚಿತ್ರಗಳು ಸೋರಿಕೆಯಾದ ಬಳಿಕ ಚಿತ್ರೀಕರಣದ ಮೊದಲ ಎರಡು ದಿನಗಳು ಕಾಲ ನಿರ್ದೇಶಕರು ಒತ್ತಡವನ್ನುಂಟುಮಾಡಿಕೊಂಡಿದ್ದರು ಎಂದು ವರದಿಯಾಗಿದೆ. ಈ ಫೋಟೊಗಳಿಂದ ನಿರ್ದೇಶಕ ನಿತೇಶ್ ತಿವಾರಿ ತುಂಬ ಬೇಸರಿಸಿಗೊಂಡಿದ್ದರು ಎಂದು ವರದಿಯಾಗಿದೆ. ಈಗಾಗಲೇ ಸೆಟ್‌ನಲ್ಲಿ ಕಟ್ಟುನಿಟ್ಟಾದ ಕ್ರಮ ಕೈಗೊಂಡಿದ್ದು ಫೋನ್‌ಕೂಡ ನಿಷೇಧಿಸಲಾಗಿದೆ ಎನ್ನಲಾಗಿದೆ.

ದೃಶ್ಯಕ್ಕೆ ಅಗತ್ಯವಿರುವ ನಟರು ಮತ್ತು ತಂತ್ರಜ್ಞರನ್ನು ಮಾತ್ರ ಸೆಟ್‌ನಲ್ಲಿ ಇರುವಂತೆ ಆದೇಶ ನೀಡಿದ್ದು, ಉಳಿದವರಿಗೆ ಪ್ರವೇಶಕ್ಕೆ ಅನುಮತಿ ನಿರಾಕರಿಸಲಾಗಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: Ramayana Movie: ರಾಮಾಯಣದಲ್ಲಿ ಯಶ್‌ ಪತ್ನಿಯ ಪಾತ್ರಕ್ಕೆ ʻದಂಗಲ್‌ʼ ಸಿನಿಮಾ ನಟಿ!

ಏಪ್ರಿಲ್ 15ರ ವೇಳೆಗೆ ರಣ್‌ಬೀರ್ ಕಪೂರ್ ಕೂಡ ರಾಮಾಯಣ ಚಿತ್ರೀಕರಣದಲ್ಲಿ ಭಾಗಿ ಆಗುವ ಸಾಧ್ಯತೆಯಿದೆ. ಇನ್ನು ದಶರಥನಾಗಿ ಅರುಣ್‌ ಗೋವಿಲ್, ಹನುಮಂತನಾಗಿ ಸನ್ನಿ ಡಿಯೋಲ್ ನಟಿಸುತ್ತಾರೆ ಎನ್ನಲಾಗುತ್ತಿದೆ. ರಾವಣನ ಸಹೋದರಿ ಶೂರ್ಪನಖಿಯಾಗಿ ರಕುಲ್‌ಪ್ರೀತ್ ಸಿಂಗ್ ಹಾಗೂ ಮಡದಿ ಮಂಡೋದರಿಯಾಗಿ ಸಾಕ್ಷಿ ತನ್ವರ್ ನಟಿಸುತ್ತಾರೆ ಎಂದು ವರದಿಯಾಗಿದೆ.

ರಾಮನವಮಿ ದಿನ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗುವ ಸಾಧ್ಯತೆಯಿದೆ. ಸದ್ಯ ಯಶ್ ‘ಟಾಕ್ಸಿಕ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ‘ರಾಮಾಯಣ’ ಚಿತ್ರದಲ್ಲಿ ಸದ್ಯ ಬೇರೆ ಕಲಾವಿದರ ದೃಶ್ಯಗಳನ್ನು ಸೆರೆಹಿಡಿಯಲಿದ್ದು ನಿಧಾನವಾಗಿ ಯಶ್ ತಂಡ ಸೇರಿಕೊಳ್ಳುತ್ತಾರೆ ಎನ್ನಲಾಗುತ್ತಿದೆ. ಚಿತ್ರದಲ್ಲಿ ರಾವಣನಾಗಿ ರಾಕಿಂಗ್ ಸ್ಟಾರ್ ಯಶ್ ನಟಿಸುತ್ತಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಯಶ್ ಕೂಡ ಇನ್ನು ಮಾತನಾಡಿಲ್ಲ.

Exit mobile version