ಬೆಂಗಳೂರು: ಸಂದೀಪ್ ರೆಡ್ಡಿ ವಾಂಗ ನಿರ್ದೇಶನ, ರಣಬೀರ್ ಕಪೂರ್ ಅಭಿನಯದ ʻಅನಿಮಲ್ʼ ಸಿನಿಮಾ ಸೂಪರ್ ಹಿಟ್ ಆಗಿದೆ. ರಶ್ಮಿಕಾ ಮಂದಣ್ಣ, ತೃಪ್ತಿ ಡಿಮ್ರಿ ಮತ್ತು ಬಾಬಿ ಡಿಯೋಲ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಂದಹಾಗೆ, ‘ಅನಿಮಲ್’ ಚಿತ್ರತಂಡ ಈಗಾಗಲೇ ಅದರ ಮುಂದುವರಿದ ಭಾಗವಾದ ‘ಅನಿಮಲ್ ಪಾರ್ಕ್’ ಅನ್ನು ಘೋಷಿಸಿದ್ದು, ಅಭಿಮಾನಿಗಳು ಈ ಬಗ್ಗೆ ಕುತೂಹಲದಲ್ಲಿದ್ದಾರೆ. 2025ರ ವೇಳೆಗೆ ಸಿನಿಮಾ ಆರಂಭವಾಗುವ ನಿರೀಕ್ಷೆ ಇದೆ ಎನ್ನಲಾಗುತ್ತಿದೆ.
ಇತ್ತೀಚಿನ ವರದಿಗಳ ಪ್ರಕಾರ, ನಿರ್ದೇಶಕ ಸಂದೀಪ್ ರೆಡ್ಡಿ ವಾಂಗ ಅವರು ‘ಸ್ಪಿರಿಟ್’ ಸಿನಿಮಾಗಾಗಿ ಪ್ರಭಾಸ್ ಅವರೊಂದಿಗೆ ಚಿತ್ರೀಕರಣಕ್ಕೆ ಸಜ್ಜಾಗುತ್ತಿದ್ದಾರೆ. ಇದರ ಜತೆಗೆ ‘ಅನಿಮಲ್ ಪಾರ್ಕ್’ ಕಡೆಗೂ ನಿರ್ದೇಶಕರು ಗಮನ ಹರಿಸುತ್ತಿದ್ದಾರೆ. ಈ ಸಿನಿಮಾ ಆದ ಬಳಿಕ ನಿರ್ದೇಶಕರು ಈ ‘ಅನಿಮಲ್ ಪಾರ್ಕ್’ ಕೆಲಸವನ್ನು ಶುರು ಮಾಡಲಿದ್ದಾರೆ ಎನ್ನಲಾಗಿದೆ.
ಇನ್ನು ರಣಬೀರ್ ಕಪೂರ್ ಕೂಡ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ‘ಲವ್ ಆ್ಯಂಡ್ ವಾರ್’ ಸಿನಿಮಾ ಶೂಟಿಂಗ್ನಲ್ಲಿ ರಣಬೀರ್ ತೊಡಗಿಕೊಳ್ಳಲಿದ್ದಾರೆ. ಈ ಚಿತ್ರದ ಶೂಟಿಂಗ್ ಪೂರ್ಣಗೊಳ್ಳುವುದು ಮುಂದಿನ ವರ್ಷ. ನಿತೇಶ್ ತಿವಾರಿ ಅವರ ‘ರಾಮಾಯಣ’ ಸಿನಿಮಾ ಕೆಲಸಗಳಲ್ಲೂ ರಣಬೀರ್ ಕಪೂರ್ ತೊಡಗಿಸಿಕೊಂಡಿದ್ದಾರೆ. ಹೀಗಾಗಿ ಇವೆರಡೂ ಸಿನಿಮಾ ಆದ ಬಳಿಕ ‘ಅನಿಮಲ್ 2’ ಚಿತ್ರದ ಕೆಲಸಗಳಲ್ಲಿ ರಣಬೀರ್ ತೊಡಗಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ: Ranbir Kapoor: ರಣಬೀರ್ ಕಪೂರ್ ವಿರುದ್ಧ ಬಿತ್ತು ಕೇಸ್; ಅನಿಮಲ್ ಸಕ್ಸೆಸ್ ಬೆನ್ನಲ್ಲೇ ಸಂಕಷ್ಟ
Crazy how aziz didn't just capture the face of ranvijay but adapted his signature as well, this indicates #AnimalPark not just going to be more violent but a psychological thriller also
— CH Waseem Akhtar🇵🇰 (@ChWasee26936150) January 31, 2024
Most hyped squeal for a reason !#AnimalPark pic.twitter.com/ic4wcIUSYz
ಇನ್ನು ಎರಡನೇ ಭಾಗದಲ್ಲಿಯೂ ರಶ್ಮಿಕಾ ಮಂದಣ್ಣ ಇರಲಿದ್ದಾರಂತೆ. ರಣವಿಜಯ್ ಪಾತ್ರದ ಮೇಲೆಯೇ ಅನಿಮಲ್ ಪಾರ್ಕ್ ಸಾಗಲಿದೆ ಎನ್ನಲಾಗಿದೆ.
ʻಅನಿಮಲ್ʼ ಸಿನಿಮಾ ಜನವರಿ 26ರಂದು ಗಣರಾಜ್ಯೋತ್ಸವದಂದು ನೆಟ್‌ಫ್ಲಿಕ್ಸ್‌ನಲ್ಲಿ ಸಿನಿಮಾ ಬಿಡುಗಡೆ ಆಗಿದೆ. ಅನಿಮಲ್ʼ 3 ಗಂಟೆ 21 ನಿಮಿಷಗಳ ಅವಧಿಯ ಚಲನಚಿತ್ರವಾಗಿದೆ. ಹಿಂದಿ, ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಸಿನಿಮಾ ಮೂಡಿ ಬಂದಿದೆ.ʼಅನಿಮಲ್’ ಚಿತ್ರ 3 ಗಂಟೆ 21 ನಿಮಿಷಗಳಷ್ಟು ದೀರ್ಘವಾಗಿದೆ. ಅಲ್ಲದೆ ಹಿಂಸಾತ್ಮಕ, ಬೋಲ್ಡ್ ದೃಶ್ಯಗಳಿಂದಾಗಿ ಎ ಸರ್ಟಿಫಿಕೇಟ್ ಪಡೆದುಕೊಂಡಿತ್ತು. ಇವುಗಳ ಹೊರತಾಗಿಯೂ ಚಿತ್ರವು ಭರ್ಜರಿ ಯಶಸ್ಸು ದಾಖಲಿಸಿದ್ದು, ರಣಬೀರ್ ಕಪೂರ್ ವೃತ್ತಿ ಜೀವನದಲ್ಲಿ ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾವಾಗಿ ಹೊರ ಹೊಮ್ಮಿತ್ತು.