Site icon Vistara News

Ranbir Kapoor: ಐಷಾರಾಮಿ ಕಾರು ಖರೀದಿಸಿದ ರಣಬೀರ್ ಕಪೂರ್; ಇವರ ಬಳಿ ಎಂಥೆಂಥ ಕಾರುಗಳಿವೆ ಗೊತ್ತೆ?

Ranbir Kapoor

ಬೆಂಗಳೂರು: ರಣಬೀರ್ ಕಪೂರ್ ( Ranbir Kapoor ) ಅನಿಮಲ್‌ ಸಕ್ಸೆಸ್‌ ಬಳಿಕ 8 ಕೋಟಿ ರೂ. ಮೌಲ್ಯದ ಹೊಸ ಕಾರನ್ನು ಖರೀದಿಸಿದ್ದಾರೆ. ಜೆಟ್ ಬ್ಲ್ಯಾಕ್‌ ಬೆಂಟ್ಲಿ ಕಾಂಟಿನೆಂಟಲ್‌ನಲ್ಲಿ (jet-black Bentley Continental) ಕುಳಿತು ರಣಬೀರ್‌ ಹೋಗುತ್ತಿರುವುದನ್ನು ಕ್ಯಾಮೆರಾಮನ್‌ಗಳು ಸೆರೆ ಹಿಡಿದಿದ್ದಾರೆ. ಕಾರಿನಲ್ಲಿ ಕುಟುಂಬದವರಾಗಲಿ, ಚಿತ್ರದ ಸಿಬ್ಬಂದಿಯಾಗಿರಲಿ ಯಾರೂ ಇರಲಿಲ್ಲ.

ಬೆಂಟ್ಲಿ ಕಾಂಟಿನೆಂಟಲ್ (Bentley Continental) ಅವರ ಐಷಾರಾಮಿ ಕಾರುಗಳ ಸಂಗ್ರಹಕ್ಕೆ ಹೊಸದಾಗಿ ಸೇರ್ಪಡೆಯಾಗಿದೆ. ರಣಬೀರ್‌ ಬಳಿ ಹಲವಾರು ಐಷಾರಾಮಿ ಕಾರುಗಳು ಇವೆ. ಅವುಗಳಲ್ಲಿ ಲ್ಯಾಂಡ್ ರೋವರ್ ರೇಂಜ್ ರೋವರ್ ಆಟೋಬಯೋಗ್ರಫಿ ( 3.27 ಕೋಟಿ ರೂ.), ಆಡಿ A8 L ( 1.71 ಕೋಟಿ ರೂ.), Mercedes-AMG G 63 (2.28 ಕೋಟಿ ರೂ.), ಆಡಿ ಆರ್8 ( 2.72 ಕೋಟಿ ರೂ). ಇವೆ. ರಣಬೀರ್ ಕಳೆದ ವರ್ಷ ತಮ್ಮ ಹೊಸ ರೇಂಜ್ ರೋವರ್‌ನಲ್ಲಿ ಆಲಿಯಾ ಭಟ್ ಅವರೊಂದಿಗೆ ರಾಷ್ಟ್ರೀಯ ಪ್ರಶಸ್ತಿ ಸಮಾರಂಭಕ್ಕಾಗಿ ನವದೆಹಲಿಗೆ ಹೊರಟಿದ್ದರು.

ಆಲಿಯಾ ಕೂಡ ಲ್ಯಾಂಡ್ ರೋವರ್-ರೇಂಜ್ ರೋವರ್ ವೋಗ್ ( 2.8 ಕೋಟಿ ರೂ.), ಆಡಿ A6 ( 70 ಲಕ್ಷ ರೂ.), BMW 7-ಸಿರೀಸ್‌ ( 1.8 ಕೋಟಿ ರೂ.), ಆಡಿ Q5 ( 79 ಲಕ್ಷ ರೂ.), ಮತ್ತು Audi Q7 (94 ಲಕ್ಷ ರೂ). ಕಾರುಗಳನ್ನು ಹೊಂದಿದ್ದಾರೆ.

ಇದನ್ನೂ ಓದಿ: Ranbir Kapoor: ಅತ್ಯಂತ ಕಿರಿಯ ಮತ್ತು ಶ್ರೀಮಂತ ಸ್ಟಾರ್‌ ಕಿಡ್‌ ಆಗಲಿದ್ದಾರಂತೆ ರಣಬೀರ್- ಆಲಿಯಾ ಮಗಳು!

ತಯಾರಾಗುತ್ತಿದೆ 250 ಕೋಟಿ ರೂಪಾಯಿ ವೆಚ್ಚದ ಬಂಗಲೆ

ರಣಬೀರ್ ಕಪೂರ್ (Ranbir Kapoor), ಆಲಿಯಾ ಭಟ್( Alia Bhatt) ಮತ್ತು ನೀತು ಕಪೂರ್ (Neetu Kapoor) ಇತ್ತೀಚೆಗೆ ಮುಂಬೈನ ಬಾಂದ್ರಾದಲ್ಲಿ (Mumbai’s Bandra) ನಿರ್ಮಾಣ ಹಂತದ ಬಂಗಲೆಗೆ ಭೇಟಿ ಕೊಟ್ಟಿದ್ದರು.

ಈ ಮನೆಗೆ ಕನಿಷ್ಠ 250 ಕೋಟಿ ರೂಪಾಯಿ ವೆಚ್ಚ ತಗುಲಿದೆ ಎನ್ನಲಾಗುತ್ತಿದೆ. ಒಂದು ವೇಳೆ ರಾಹಾ ಮನೆಯ ಒಡತಿ ಆದರೆ ʻಕಿರಿಯ ಮತ್ತು ಶ್ರೀಮಂತ ಸ್ಟಾರ್‌ ಕಿಡ್‌ʼ (youngest and richest star kid) ಆಗಲಿದ್ದಾರೆ.ರಣಬೀರ್ ಅವರ ಹೊಸ ಬಂಗಲೆಯು 250 ಕೋಟಿ ರೂ. ವೆಚ್ಚ ತಗುಲಿದೆ ಎನ್ನಲಾಗುತ್ತಿದೆ. ಶಾರುಖ್ ಖಾನ್ ಅವರ ಮನ್ನತ್ ಮತ್ತು ಅಮಿತಾಭ್‌ ಬಚ್ಚನ್ ಅವರ ‘ಜಲ್ಸಾ’ ಸಮೀಪವೇ ಇದೆ. ಇದು ಮುಂಬೈನ ‘ಅತ್ಯಂತ ದುಬಾರಿ’ ಸೆಲೆಬ್ರಿಟಿ ಬಂಗಲೆಯಾಗಿದೆ ಎಂದು ವರದಿಯಾಗಿದೆ.

ಈ ಬಂಗಲೆ ಜತೆಗೆ ಆಲಿಯಾ ಮತ್ತು ರಣಬೀರ್ ಇಬ್ಬರೂ ಬಾಂದ್ರಾ ಪ್ರದೇಶದಲ್ಲಿ ನಾಲ್ಕು ಫ್ಲಾಟ್‌ಗಳನ್ನು ಹೊಂದಿದ್ದಾರೆ. ಇದರ ಮೌಲ್ಯ 60 ಕೋಟಿ ರೂ.ಗಿಂತ ಹೆಚ್ಚು. ರಣಬೀರ್ ಕಪೂರ್ ಅವರ ತಾಯಿ ನೀತು ಕಪೂರ್ ಇತ್ತೀಚೆಗೆ ಬಾಂದ್ರಾದಲ್ಲಿ 15 ಕೋಟಿ ರೂಪಾಯಿ ಮನೆ ಖರೀದಿಸಿದ್ದಾರೆ. ಬಂಗಲೆ ಪೂರ್ಣವಾದ ಬಳಿಕ ಇಡೀ ಕಪೂರ್ ಕುಟುಂಬ, ನೀತು ಸೇರಿದಂತೆ ಇದೇ ಬಂಗಲೆಯಲ್ಲಿ ಇರಲಿದ್ದಾರೆ ಎನ್ನಲಾಗಿದೆ.

Exit mobile version