ಬೆಂಗಳೂರು: ಬಾಲಿವುಡ್ ನಟ ರಣಬೀರ್ ಕಪೂರ್ ಇತ್ತೀಚೆಗೆ ಪಾಡ್‌ಕ್ಯಾಸ್ಟ್ ಸಂದರ್ಭದಲ್ಲಿ ತನಗೆ ಒಂದು ಕಾಲದಲ್ಲಿ ʻಸ್ತ್ರೀಲೋಲ, ಚೀಟರ್ʼ, ಎನ್ನುವ ಹಣೆಪಟ್ಟಿ ಇತ್ತು ಎಂದು ಹೇಳಿಕೊಂಡಿದ್ದಾರೆ. ದೀಪಿಕಾ ಪಡುಕೋಣೆಗೆ ರಣಬೀರ್ ಅವರು ಕೈಕೊಟ್ಟಾಗ ಅನೇಕರು ರಣಬೀರ್ ಅವರನ್ನು ಮೋಸಗಾರ ಎಂದರು. ಕತ್ರಿನಾ ಜೊತೆ ಸುತ್ತಾಡಿ ಬ್ರೇಕಪ್ ಆದಾಗಲೂ ಇದೇ ಮಾತು ಕೇಳಿ ಬಂತು. ಈ ಬಗ್ಗೆ ರಣಬೀರ್ ಇದೀಗ ಮಾತನಾಡಿದ್ದಾರೆ.
ರಣಬೀರ್ ಕಪೂರ್ ಕತ್ರೀನಾ ಕೈಫ್ ಮತ್ತು ದೀಪಿಕಾ ಪಡುಕೋಣೆ ಜತೆ ಡೇಟಿಂಗ್ ಮಾಡಿದ್ದು ಗೊತ್ತೇ ಇದೆ. ಬಳಿಕ ಮದುವೆಯಾಗಿದ್ದು ಆಲಿಯಾ ಭಟ್ ಜತೆ. ಬ್ರೇಕಪ್‌ಆದ ಬಳಿಕ ರಣಬೀರ್‌ಗೆ ಸಿಕ್ಕಿದ್ದು ʻಸ್ತ್ರೀಲೋಲ ಚೀಟರ್ʼ, ಎನ್ನುವ ಹಣೆಪಟ್ಟಿ.
ರಣಬೀರ್ ಮಾತನಾಡಿ , “ನಾನು ಈ ಹಿಂದೆ ಇಬ್ಬರು ಯಶಸ್ವಿ ನಟಿಯರೊಂದಿಗೆ ಡೇಟ್ ಮಾಡಿದ್ದೆ. ಅದು ನನ್ನ ಐಡೆಂಟಿಟಿ ಆಗಿ ಹೋಯಿತು. ನನಗೆ ಚೀಟರ್, ಸ್ತ್ರೀಲೋಲ ಎನ್ನುವ ಟ್ಯಾಗ್ ಸಿಕ್ಕಿತು. ನನ್ನ ಜೀವನದ ಬಹುಪಾಲು ನಾನು ಮೋಸಗಾರ ಎಂಬ ಹಣೆಪಟ್ಟಿಯೊಂದಿಗೆ ಬದುಕಿದ್ದೇನೆ. ಈಗಲೂ ಹಾಗೆಯೇ ಬದುಕುತ್ತಿದ್ದೇನೆ’ ಎಂದಿದ್ದಾರೆ ಅವರು.
ಬಾಲಿವುಡ್ ನಟರಾದ ದೀಪಿಕಾ ಪಡುಕೋಣೆ ಮತ್ತು ರಣಬೀರ್ ಕಪೂರ್ ಅವರು ಸುಮಾರು ಎರಡು ವರ್ಷಗಳ ಕಾಲ ಡೇಟಿಂಗ್ ಮಾಡಿದರು. 2009 ರಲ್ಲಿ ಬೇರ್ಪಟ್ಟರು. ಇದೀಗ ರಣಬೀರ್ ಕಪೂರ್ ಆಲಿಯಾ ಭಟ್ ಅವರನ್ನು ಮದುವೆಯಾಗಿದ್ದರೆ. ದೀಪಿಕಾಅವರು ರಣವೀರ್ ಸಿಂಗ್ ಅವರನ್ನು ಮದುವೆಯಾಗಿದ್ದಾರೆ.
ಇದನ್ನೂ ಓದಿ: Actor Yash: ಯಶ್ ನಟನೆಯ ʻಟಾಕ್ಸಿಕ್ʼ ಸಿನಿಮಾ ವಿರುದ್ಧ ದೂರು ದಾಖಲು
ʼದೇವ್‌ದಾಸ್ʼ ‘ರಾಮ್ ಲೀಲಾ’, ‘ಬಾಜಿರಾವ್ ಮಸ್ತಾನಿ’ಯಂತಹ ಹಿಟ್ ಸಿನಿಮಾಗಳನ್ನು ನೀಡಿದವರು ಸಂಜಯ್ ಲೀಲಾ ಬನ್ಸಾಲಿ (Sanjay Leela Bhansali). ಅವರು ‘ಲವ್ ಆ್ಯಂಡ್ ವಾರ್’ ಸಿನಿಮಾ ( ‘Love and War’) ಮಾಡುತ್ತಿರುವುದು ಗೊತ್ತೇ ಇದೆ. 1964ರ ಈ ʻಸಂಗಮ್ʼ ( film Sangam) ಚಲನಚಿತ್ರದಲ್ಲಿ ರಾಜ್ ಕಪೂರ್, ವೈಜಯಂತಿಮಾಲಾ ಮತ್ತು ರಾಜೇಂದ್ರ ಕುಮಾರ್ ನಟಿಸಿದ್ದರು. ಈಗ ಈ ‘ಲವ್ ಆ್ಯಂಡ್ ವಾರ್’ ನಲ್ಲಿ ರಣಬೀರ್ ಕಪೂರ್, ಆಲಿಯಾ ಭಟ್ ಮತ್ತು ವಿಕ್ಕಿ ಕೌಶಲ್ ನಟಿಸಲಿದ್ದಾರೆ.
ಈ ಚಿತ್ರಕ್ಕಾಗಿ ರಣಬೀರ್ ಕಪೂರ್ ತಮ್ಮ ತಾತ ರಾಜ್ ಕಪೂರ್ ಅವರ ʻಸಂಗಮ್ʼ ಪಾತ್ರ ನಿಭಾಯಿಸಲಿದ್ದಾರಂತೆ. ಸಿನಿಮಾ ಯಾವಾಗ ಸೆಟ್ಟೇರಲಿದೆ ಎಂಬ ವಿಷಯ ಧೃಢ ಪಟ್ಟಿಲ್ಲದಿದ್ದರೂ 2024ರ ದ್ವಿತೀಯಾರ್ಧದಲ್ಲಿ ಸಿನಿಮಾ ಸೆಟ್ಟೇರಲಿದೆ ಎನ್ನಲಾಗಿದೆ.
ಸದ್ಯ ರಣಬೀಕ್ ಕಪೂರ್ ನಟನೆ, ನಿತೇಶ್ ತಿವಾರಿ (Nitesh Tiwari) ನಿರ್ದೇಶನದ ‘ರಾಮಾಯಣ’ ಸಿನಿಮಾ (Ramayana Set Pic leaked) ಸೆಟ್ಟೇರಿದೆ. ಮುಂಬೈ ಸ್ಟುಡಿಯೊವೊಂದರಲ್ಲಿ ಗುರುಕುಲದ ಸೆಟ್ ನಿರ್ಮಿಸಿ ʻರಾಮಾಯಣʼ ಸಿನಿಮಾ ಚಿತ್ರೀಕರಣ ಆರಂಭಿಸಿದ್ದಾರೆ. ರಣಬೀರ್ ಕಪೂರ್ ರಾಮನ ಪಾತ್ರ ನಿರ್ವಹಿಸಿದ್ದಾರೆ ಎಂದು ವರದಿಯಾಗಿದೆ. ʻಅನಿಮಲ್ ಪಾರ್ಕ್’ ಸಿನಿಮಾ ಕೂಡ ಹೊಂದಿದ್ದಾರೆ.