ಬೆಂಗಳೂರು: ರಣಬೀರ್ ಕಪೂರ್ (Ranbir Kapoor), ಆಲಿಯಾ ಭಟ್( Alia Bhatt) ಮತ್ತು ನೀತು ಕಪೂರ್ (Neetu Kapoor) ಇತ್ತೀಚೆಗೆ ಮುಂಬೈನ ಬಾಂದ್ರಾದಲ್ಲಿ (Mumbai’s Bandra) ನಿರ್ಮಾಣ ಹಂತದ ಬಂಗಲೆಗೆ ಭೇಟಿ ಕೊಟ್ಟಿದ್ದರು. ಇದೀಗ ವರದಿಯ ಪ್ರಕಾರ, ರಣಬೀರ್ ಮತ್ತು ಆಲಿಯಾ ಮಗಳು ರಾಹಾ ಕಪೂರ್ ಅವರ ಹೆಸರಿನಲ್ಲಿ ಈ ಬಂಗಲೆ ನೋಂದಣಿ ಆಗಲಿದೆ ಎಂದು ವರದಿಯಾಗಿದೆ. ಈ ಮನೆಗೆ ಕನಿಷ್ಠ 250 ಕೋಟಿ ರೂಪಾಯಿ ವೆಚ್ಚ ತಗುಲಿದೆ ಎನ್ನಲಾಗುತ್ತಿದೆ. ಒಂದು ವೇಳೆ ರಾಹಾ ಮನೆಯ ಒಡತಿ ಆದರೆ ʻಕಿರಿಯ ಮತ್ತು ಶ್ರೀಮಂತ ಸ್ಟಾರ್ ಕಿಡ್ʼ (youngest and richest star kid) ಆಗಲಿದ್ದಾರೆ.
ರಣಬೀರ್ ಅವರ ಹೊಸ ಬಂಗಲೆಯು 250 ಕೋಟಿ ರೂ. ವೆಚ್ಚ ತಗುಲಿದೆ ಎನ್ನಲಾಗುತ್ತಿದೆ. ಶಾರುಖ್ ಖಾನ್ ಅವರ ಮನ್ನತ್ ಮತ್ತು ಅಮಿತಾಭ್ ಬಚ್ಚನ್ ಅವರ ‘ಜಲ್ಸಾ’ ಸಮೀಪವೇ ಇದೆ. ಇದು ಮುಂಬೈನ ‘ಅತ್ಯಂತ ದುಬಾರಿ’ ಸೆಲೆಬ್ರಿಟಿ ಬಂಗಲೆಯಾಗಿದೆ ಎಂದು ವರದಿಯಾಗಿದೆ. “ರಣಬೀರ್ ಮತ್ತು ಆಲಿಯಾ ಇಬ್ಬರೂ ತಮ್ಮ ಕನಸಿನ ಮನೆಯನ್ನು ಮಾಡಲು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಸಮಾನವಾಗಿ ಹೂಡಿಕೆ ಮಾಡುತ್ತಿದ್ದಾರೆ. 250 ಕೋಟಿಗೂ ಹೆಚ್ಚು ವೆಚ್ಚ ತಗುಲಿದೆ. ಶಾರುಖ್ ಖಾನ್ ಅವರ ಮನ್ನತ್ ಮತ್ತು ಅಮಿತಾಭ್ ಬಚ್ಚನ್ ಅವರ ಜಲ್ಸಾಗೆ ಹೋಲಿಸಿದರೆ ಇದು ಮುಂಬೈನ ಅತ್ಯಂತ ದುಬಾರಿ ಬಂಗಲೆಯಾಗಲಿದೆʼʼ ಎಂದು ವರದಿಯಾಗಿದೆ.
ಈ ಬಂಗಲೆ ಜತೆಗೆ ಆಲಿಯಾ ಮತ್ತು ರಣಬೀರ್ ಇಬ್ಬರೂ ಬಾಂದ್ರಾ ಪ್ರದೇಶದಲ್ಲಿ ನಾಲ್ಕು ಫ್ಲಾಟ್‌ಗಳನ್ನು ಹೊಂದಿದ್ದಾರೆ. ಇದರ ಮೌಲ್ಯ 60 ಕೋಟಿ ರೂ.ಗಿಂತ ಹೆಚ್ಚು. ರಣಬೀರ್ ಕಪೂರ್ ಅವರ ತಾಯಿ ನೀತು ಕಪೂರ್ ಇತ್ತೀಚೆಗೆ ಬಾಂದ್ರಾದಲ್ಲಿ 15 ಕೋಟಿ ರೂಪಾಯಿ ಮನೆ ಖರೀದಿಸಿದ್ದಾರೆ. ಬಂಗಲೆ ಪೂರ್ಣವಾದ ಬಳಿಕ ಇಡೀ ಕಪೂರ್ ಕುಟುಂಬ, ನೀತು ಸೇರಿದಂತೆ ಇದೇ ಬಂಗಲೆಯಲ್ಲಿ ಇರಲಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: Ranbir Kapoor: ತಮ್ಮ ಐಷಾರಾಮಿ ಬಂಗಲೆಯಲ್ಲಿ ಪೋಸ್ ಕೊಟ್ಟ ಆಲಿಯಾ-ರಣಬೀರ್!
2020ರಲ್ಲಿ ರಿಷಿ ಕಪೂರ್ ಸಾಯುವ ಮೊದಲು, ಅವರು ಈ ಸೈಟ್‌ಗೆ ಭೇಟಿ ನೀಡಿದ್ದರು. ಆಲಿಯಾ ಮತ್ತು ರಣಬೀರ್ ಸೆಪ್ಟೆಂಬರ್ 2022ರಲ್ಲಿ ನಿರ್ಮಾಣ ಹಂತದಲ್ಲಿರುವ ಮನೆಗೆ ಭೇಟಿ ನೀಡಿದ್ದರು. ಆ ಸಮಯದಲ್ಲಿ ಆಲಿಯಾ ಗರ್ಭಿಣಿಯಾಗಿದ್ದರು.ಆಲಿಯಾ ಮತ್ತು ರಣಬೀರ್ ಅನೇಕ ವರ್ಷಗಳ ಕಾಲ ಡೇಟಿಂಗ್ ಮಾಡಿದ ನಂತರ 2022ರ ಏಪ್ರಿಲ್ 14ರಂದು ಮದುವೆಯಾದರು.
ರಾಮಾಯಣ ಆಧರಿಸಿದ ಸಿನಿಮಾದಲ್ಲಿ ರಣಬೀರ್, ಆಲಿಯಾ
ನಿತೇಶ್ ತಿವಾರಿ ರಾಮಾಯಣ ಆಧರಿಸಿ ಸಿನಿಮಾ ಮಾಡಲಿದ್ದಾರೆ. ಈ ಚಿತ್ರದಲ್ಲಿ ಈ ಚಿತ್ರದಲ್ಲಿ ರಣಬೀರ್, ಆಲಿಯಾ ಭಟ್ ಹಾಗೂ ಯಶ್ (Actor Yash) ನಟಿಸುತ್ತಿದ್ದಾರೆ ಎನ್ನುತ್ತಿವೆ ಮೂಲಗಳು. ಈಗಾಗಲೇ ಪಾತ್ರವರ್ಗ ಕೂಡ ಫಿಕ್ಸ್ ಆಗಿದ್ದು, ರಣಬೀರ್ ರಾಮನ ಪಾತ್ರವನ್ನು ನಿರ್ವಹಿಸುತ್ತಿದ್ದರೆ, ಆಲಿಯಾ ಭಟ್ ಸೀತೆ ಪಾತ್ರವನ್ನು ನಿಭಾಯಸಿಲಿದ್ದಾರೆ ಎನ್ನಲಾಗಿದೆ. ಈಗಾಗಲೇ ಪಾತ್ರವರ್ಗ ಕೂಡ ಫಿಕ್ಸ್ ಆಗಿದ್ದು, ರಣಬೀರ್ ರಾಮನ ಪಾತ್ರವನ್ನು ನಿರ್ವಹಿಸುತ್ತಿದ್ದರೆ, ಆಲಿಯಾ ಭಟ್ ಸೀತೆ ಪಾತ್ರವನ್ನು ನಿಭಾಯಸಿಲಿದ್ದಾರೆ ಎನ್ನಲಾಗಿದೆ.