ಬೆಂಗಳೂರು: ಪುರುಷರ ಆರೋಗ್ಯ ಬ್ರ್ಯಾಂಡ್‌ನ ಹೊಸ ಜಾಹೀರಾತಿನಲ್ಲಿ ರಣವೀರ್ ಸಿಂಗ್ ಕಾಣಿಸಿಕೊಂಡಿದ್ದಾರೆ. ನೀಲಿ ಚಿತ್ರ ತಾರೆ ಜಾನಿ ಸಿನ್ಸ್ (Johnny Sins) ಹಾಗೂ ಬಾಲಿವುಡ್ ನಟ ರಣವೀರ್ ಸಿಂಗ್ (Ranveer Singh) ಇಬ್ಬರೂ ಒಟ್ಟಾಗಿ ಈ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಲೈಂಗಿಕ ಆರೋಗ್ಯದ ಕುರಿತು ಈ ಜಾಹೀರಾತು ಇದೆ. ಆದರೀಗ ಈ ಜಾಹೀರಾತಿನ ಬಗ್ಗೆ ಕಿರುತೆರೆ ಕಲಾವಿದರು ಆಕ್ರೋಶ ಹೊರ ಹಾಕಿದ್ದಾರೆ. ಇದು ಕಿರುತೆರೆಗೆ ಮಾಡಿದ ಅವಮಾನ ಎಂದು ಅನೇಕರು ಹೇಳಿದ್ದಾರೆ.
ಜಾಹೀರಾತಿನಲ್ಲಿ ಏನಿದೆ?
ರಣವೀರ್ ಮತ್ತು ಜಾನಿ ಸಿನ್ಸ್ ಸೇರಿದಂತೆ ಇಡೀ ತಂಡ ಸಾಂಪ್ರದಾಯಿಕ ಉಡುಗೆಯಲ್ಲಿದೆ. ಜಾನಿ ನೀಲಿ ಕುರ್ತಾ ಮತ್ತು ಗೋಲ್ಡನ್ ಜಾಕೆಟ್ ಮತ್ತು ಬಾಲಿವುಡ್ ನಟ ಮರೂನ್ ಕುರ್ತಾ ಧರಿಸಿದ್ದಾರೆ. ರಣವೀರ್ ತನ್ನ ಸಹೋದರ ಜಾನಿ ಅವರ ಹೆಂಡತಿಗೆ ಮನೆ ಬಿಟ್ಟು ಏಕೆ ಹೋಗುತ್ತಿದ್ದೀರಿ ಎಂದು ಕೇಳುವುದರೊಂದಿಗೆ ಜಾಹೀರಾತು ಪ್ರಾರಂಭವಾಗುತ್ತದೆ. ಲೈಂಗಿಕವಾಗಿ ಪತಿ ಆ್ಯಕ್ಟೀವ್ ಆಗಿಲ್ಲ ಎಂದು ಪತ್ನಿ ಮನೆ ಬಿಟ್ಟು ಹೋಗುವ ನಿರ್ಧಾರಕ್ಕೆ ಬರುತ್ತಾಳೆ. ನಂತರ ಕುಟುಂಬ ಸದಸ್ಯರ ನಡುವೆ ಸಾಕಷ್ಟು ನಾಟಕಗಳು ನಡೆಯುತ್ತವೆ. ನಂತರ ಪುರುಷರ ಲೈಂಗಿಕ ಸಾಮರ್ಥ್ಯ ಹೆಚ್ಚಿಸುವ ಮಾತ್ರೆಯೊಂದನ್ನು ತೆಗೆದುಕೊಂಡ ಬಳಿಕ ಪತಿ ಬದಲಾಗುತ್ತಾನೆ. ಇದನ್ನು ಧಾರಾವಾಹಿಯ ಕಥೆ ರೀತಿಯಲ್ಲಿ ತೋರಿಸಲಾಗಿದೆ. ಮೇಕಿಂಗ್ ಕೂಡ ಹಾಗೆಯೇ ಇದೆ.
ಇದನ್ನೂ ಓದಿ: Ranveer Singh: ರಣವೀರ್ ಜತೆ ಡೇಟಿಂಗ್ ಮಾಡಿದ್ರಾ ಅನುಷ್ಕಾ? ದೀಪಿಕಾ ಪತಿ ಕಿಡಿಯಾಗಿದ್ಯಾಕೆ?
ಇದೀಗ ಈ ಬಗ್ಗೆ ಕಿರುತೆರೆ ಕಲಾವಿದರು ಆಕ್ರೋಶ ಹೊರ ಹಾಕಿದ್ದಾರೆ. “ನಾನು ಪ್ರಾದೇಶಿಕ ಸಿನಿಮಾಗಳಿಂದ ನನ್ನ ವೃತ್ತಿ ಆರಂಭಿಸಿದ್ದೇನೆ. ನಂತರ ಧಾರಾವಾಹಿಗಳಲ್ಲಿ ಕೆಲಸ ಮಾಡಲು ಪ್ರಾರಂಭಿಸಿದೆ. ಇದೇ ಟಿವಿಯಲ್ಲಿ ಅವರು ಜಗತ್ತಿನ ಸುದ್ದಿ, ಕ್ರಿಕೆಟ್, ಸಿನಿಮಾ ಸೇರಿ ಬಹುತೇಕ ಎಲ್ಲವನ್ನೂ ಇಲ್ಲಿಯೇ ವೀಕ್ಷಿಸುತ್ತಾರೆ. ಈ ಜಾಹೀರಾತು ನೋಡಿದ ನಂತರ ಇದು ಅತ್ಯಂತ ಅನಿರೀಕ್ಷಿತ ಎನಿಸಿತು. ಇದು ಎಲ್ಲಾ ಕಿರುತೆರೆಯಲ್ಲಿ ಕೆಲಸ ಮಾಡುವರಿಗೆ ಮಾಡಿದ ಅವಮಾನ’ ಎಂದು ನಟಿ ರಶ್ಮಿ ದೇಸಾಯಿ ಹೇಳಿದ್ದಾರೆ.
ಪುರುಷರ ಲೈಂಗಿಕ ಆರೋಗ್ಯವನ್ನು ಉತ್ತೇಜಿಸಿದ್ದಕ್ಕಾಗಿ ಹಲವರು ರಣವೀರ್ ಅವರನ್ನು ಶ್ಲಾಘಿಸಿದ್ದಾರೆ. ಒಬ್ಬರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿ “ಇದು ಸೆಲೆಬ್ರಿಟಿಯನ್ನು ಜಾಹೀರಾತಿನಲ್ಲಿ ಬಳಸಿಕೊಳ್ಳುವ ಅದ್ಭುತ ಮಾರ್ಗವಾಗಿದೆ” ಎಂದು ಹೇಳಿದ್ದಾರೆ. ಇನ್ನು ಕೆಲವರು ಈ ಜಾಹೀರಾತನ್ನು ಬ್ಯಾನ್ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.