Site icon Vistara News

Ranveer Singh: ಕಾಂಗ್ರೆಸ್‌ ಪರ ರಣವೀರ್‌ ಸಿಂಗ್‌ ಪ್ರಚಾರ? ಕೇಸ್‌ ದಾಖಲು

Ranveer Singh Files Police Case Deepfake Video Goes

ಬೆಂಗಳೂರು: : ಬಾಲಿವುಡ್ ಸೂಪರ್‌ಸ್ಟಾರ್ ಆಮೀರ್ ಖಾನ್ (Aamir Khan) ಅವರು ರಾಜಕೀಯ ಪಕ್ಷವನ್ನು ಬೆಂಬಲಿಸುವ ರೀತಿಯಲ್ಲಿ ವಿಡಿಯೊವೊಂದು ಕೆಲವು (Aamir Khan promoting a political party viral) ದಿನಗಳಿಂದ ವೈರಲ್‌ ಆಗಿತ್ತು. ಈಗ ರಣವೀರ್​ ಸಿಂಗ್ (Ranveer Singh)​ ಅವರು ವಿಡಿಯೊವನ್ನು ತಿರುಚಲಾಗಿದೆ. ಅದರಲ್ಲಿ ಅವರು ನರೇಂದ್ರ ಮೋದಿ ಸರ್ಕಾರವನ್ನು ಟೀಕಿಸುವ ರೀತಿಯಲ್ಲಿ ಬಿಂಬಿಸಲಾಗಿದೆ. ಹೀಗಾಗಿ ರಣವೀರ್‌ ಸಿಂಗ್‌ ಅವರು ಡೀಪ್‌ಫೇಕ್ ವಿಡಿಯೊ ಮಾಡಿದವರ ವಿರುದ್ಧ ದೂರು ದಾಖಲಿಸಿದ್ದಾರೆ.

ಡೀಪ್‌ಫೇಕ್‌ ವಿಡಿಯೊದಲ್ಲಿ, ರಣವೀರ್ ಸಿಂಗ್ ನಿರುದ್ಯೋಗ ಮತ್ತು ಹಣದುಬ್ಬರದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಿರುವಂತಿದೆ. ಮಾತ್ರವಲ್ಲ ಕಾಂಗ್ರೆಸ್‌ಗೆ ಮತ ಹಾಕುವಂತೆ ಜನರನ್ನು ಒತ್ತಾಯಿಸುವ ಸಂದೇಶದೊಂದಿಗೆ ವಿಡಿಯೊ ಮುಕ್ತಾಯಗೊಳ್ಳುತ್ತದೆ. ಕೆಲವೇ ದಿನಗಳ ಹಿಂದೆ ರಣವೀರ್​ ಸಿಂಗ್​ ಅವರು ಕಾಶಿಗೆ ತೆರಳಿದ್ದರು. ಆಗ ಅವರು ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಒಂದಷ್ಟು ಅಂಶಗಳನ್ನು ಹಂಚಿಕೊಂಡಿದ್ದರು. ಆ ವಿಡಿಯೊಗೆ ಎಐ ವಾಯ್ಸ್​ ಮೂಲಕ ಬೇರೆಯದೇ ಧ್ವನಿಯನ್ನು ನೀಡಲಾಗಿದೆ.

ಇದು ರಣವೀರ್​ ಸಿಂಗ್​ ಅವರ ಗಮನಕ್ಕೆ ಬಂದಿದೆ. ಕೂಡಲೇ ಅವರು ಸೋಶಿಯಲ್​ ಮೀಡಿಯಾದಲ್ಲಿ ಸ್ಪಷ್ಟನೆ ನೀಡಿದ್ದಾರೆ. ‘ಡೀಪ್​ಫೇಕ್​ ವಿಡಿಯೋ ಬಗ್ಗೆ ಎಚ್ಚರದಿಂದಿರಿ ಗೆಳೆಯರೇ..’ ಎಂದು ಅವರು ಪೋಸ್ಟ್​ ಮಾಡಿದ್ದಾರೆ. ಇದೀಗ ಈ ಬಗ್ಗೆ ಎಫ್‌ಐಆರ್ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ರಣವೀರ್ ಸಿಂಗ್ ತಂಡ ಹೇಳಿದೆ. “ನಾವು ಪೊಲೀಸರಿಗೆ ದೂರು ನೀಡಿದ್ದೇವೆ. ರಣವೀರ್ ಸಿಂಗ್ ಅವರ ಎಐ-ರಚಿಸಿದ ಡೀಪ್‌ಫೇಕ್ ವೀಡಿಯೊವನ್ನು ಪ್ರಚಾರ ಮಾಡುತ್ತಿದ್ದ ಹ್ಯಾಂಡಲ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ” ಎಂದು ವಕ್ತಾರರು ತಿಳಿಸಿದ್ದಾರೆ.

ಇದನ್ನೂ ಓದಿ: Ranveer Singh: ಅಂಬಾನಿ ಭಾವಿ ಸೊಸೆಯ ಮಾತಿಗೆ ನಾಚಿ ನೀರಾದ ದೀಪಿಕಾ ಪತಿ!

ಬಾಲಿವುಡ್ ಸೂಪರ್‌ಸ್ಟಾರ್ ಆಮೀರ್ ಖಾನ್ (Aamir Khan) ಅವರು ರಾಜಕೀಯ ಪಕ್ಷವನ್ನು ಬೆಂಬಲಿಸುವ ರೀತಿಯಲ್ಲಿ ವಿಡಿಯೊವೊಂದು ಕೆಲವು (Aamir Khan promoting a political party viral) ದಿನಗಳಿಂದ ವೈರಲ್‌ ಆಗಿತ್ತು. ಇತ್ತೀಚೆಗೆ ನಟನ ವಕ್ತಾರರು ಈ ವಿಡಿಯೊ ವಿರುದ್ಧ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಮುಂಬೈ ಪೊಲೀಸರು ಎಫ್‌ಐಆರ್ ದಾಖಲಿಸುವ ಮೂಲಕ ಕ್ರಮ ಕೈಗೊಂಡಿದ್ದರು. ಭಾರತೀಯ ದಂಡ ಸಂಹಿತೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆಯ ಅಡಿಯಲ್ಲಿ ಎಫ್‌ಐಆರ್ ದಾಖಲಾಗಿತ್ತು.

Exit mobile version