ಬೆಂಗಳೂರು: ನಟ ರಿತೇಶ್ ದೇಶ್‌ಮುಖ್ (Riteish Deshmukh) ಮತ್ತು ನಟಿ ಜೆನಿಲಿಯಾ ದೇಶಮುಖ್ (Genelia Deshmukh) ದಂಪತಿ ತಮ್ಮ ಅಂಗಾಂಗಗಳನ್ನು ದಾನ ಮಾಡುವ ಘೋಷಣೆ ಮಾಡಿದ್ದಾರೆ. ಇದೀಗ ರಾಷ್ಟ್ರೀಯ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆ ಈ ಉದಾತ್ತ ಕಾರ್ಯಕ್ಕೆ ಕೃತಜ್ಞತೆ ಸಲ್ಲಿಸಿದೆ.
ಇದಕ್ಕೂ ಮೊದಲು ರಿತೇಶ್ ಅವರು ತಮ್ಮ ಇನ್‌ಸ್ಟಾಗ್ರಾಮ್ ಮೂಲಕ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. ಜೋಡಿ ತಮ್ಮ ಅಂಗಾಂಗವನ್ನು ದಾನ ಮಾಡುವ ಬಗ್ಗೆ ಘೋಷಣೆ ಮಾಡಿದ್ದರು. ʻʻನಾವು ನಮ್ಮ ಅಂಗಾಗಳನ್ನು ದಾನ ಮಾಡಲು ಪ್ರತಿಜ್ಞೆ ಮಾಡಿದ್ದೇವೆ. ಈ ಉಡುಗೊರೆಗಿಂತ ಉತ್ತಮವಾದ ಉಡುಗೊರೆ ಇನ್ನೊಂದಿಲ್ಲ” ಎಂದು ಜೆನಿಲಿಯಾ ಹೇಳಿದರು.
ರಾಷ್ಟ್ರೀಯ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆ (NOTTO) ದಂಪತಿಗೆ ಕೃತಜ್ಞತೆ ಸಲ್ಲಿಸಿದೆ. “ಜುಲೈನಲ್ಲಿ ನಡೆಯುತ್ತಿರುವ ಅಂಗಾಂಗ ದಾನದ ತಿಂಗಳಲ್ಲಿ ತಮ್ಮ ಅಂಗಗಳನ್ನು ದಾನ ಮಾಡುವ ಬಗ್ಗೆ ಘೋಷಣೆ ಮಾಡಿದ ಬಾಲಿವುಡ್ ದಂಪತಿ ರಿತೇಶ್ ದೇಶ್‌ಮುಖ್ ಮತ್ತು ಜೆನಿಲಿಯಾ ಅವರಿಗೆ ಧನ್ಯವಾದಗಳು. ಇತರರನ್ನು ಸಹ ಇದು ಪ್ರೇರೇಪಿಸುತ್ತದೆ” ಎಂದು ಟ್ವೀಟ್‌ನಲ್ಲಿ ಬರೆದುಕೊಂಡಿದೆ. ರಿತೇಶ್ ದೇಶ್‌ಮುಖ್ ಮುಂದೆ ‘ಕಾಕುಡ’ ಚಿತ್ರದಲ್ಲಿ ಸೋನಾಕ್ಷಿ ಸಿನ್ಹಾ ಮತ್ತು ಸಾಕಿಬ್ ಸಲೀಮ್ ಅವರೊಂದಿಗೆ ಕಾಣಿಸಿಕೊಳ್ಳಲು ಸಿದ್ಧರಾಗಿದ್ದಾರೆ. ಈಗಾಗಲೇ ಚಿತ್ರದ ಟ್ರೈಲರ್ ಔಟ್ ಆಗಿದೆ.
ಜೆನಿಲಿಯಾ ಕಳೆದ ಕೆಲವು ವರ್ಷಗಳಲ್ಲಿ ಬೆರಳೆಣಿಕೆಯ ಚಿತ್ರಗಳಲ್ಲಿ ಅತಿಥಿ ಪಾತ್ರದಲ್ಲಿ ಮಾತ್ರ ಕಾಣಿಸಿಕೊಂಡಿದ್ದಾರೆ. ಅವರು ಕೊನೆಯದಾಗಿ 2012ರಲ್ಲಿ ತೆರೆ ಕಂಡ ʻʻತೇರೆ ನಾಲ್ ಲವ್ ಹೋ ಗಯಾʼʼ ಮತ್ತು ʻʻನಾ ಇಷ್ಟಂʼʼ ಎರಡೂ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದರು.
ಇದನ್ನೂ ಓದಿ: Kalki 2898 AD: ನಾಲ್ಕೇ ದಿನಕ್ಕೆ 500 ಕೋಟಿ ರೂ. ಗಳಿಕೆ ಮಾಡಿದ ʻಕಲ್ಕಿ 2898 ಎಡಿʼಸಿನಿಮಾ!
ಹೋಮ್‌ಮೇಕರ್ ಆಗಿದ್ದರು ಜೆನಿಲಿಯಾ!
ಕೆಲಸದಿಂದ ಬ್ರೇಕ್ ತೆಗೆದುಕೊಂಡಾಗ ನಟಿ ಹೆಚ್ಚಾಗಿ ತಮ್ಮ ಮಕ್ಕಳೊಂದಿಗೆ ರಿಯಾನ್ ಮತ್ತು ರಾಹಿಲ್‌ನೊಂದಿಗೆ ಕಳೆದಿದ್ದರು. ಕುಟುಂಬದ ಬಗ್ಗೆ ಮಾತನಾಡಿ ʻʻಔಟ್ ಡೋರ್ ಶೂಟಿಂಗ್ ಇದ್ದಾಗ ಕುಟುಂಬವನ್ನು ಬಿಟ್ಟು ಇರುವುದು ಅಷ್ಟು ಸುಲಭದ ಮಾತಲ್ಲ. ಆದರೆ ರಿತೇಶ್ ಅವರು ತಂದೆಯಾಗಿ ಆ ಕೆಲಸ ನಿಭಾಯಿಸಿದ್ದಾರೆ ಎಂದು ಹೇಳಿದ್ದಾರೆ. ಅಷ್ಟೆ ಅಲ್ಲದೇ ರಿತೇಶ್ ತುಂಬಾ ಸಪೋರ್ಟಿವ್. ನಮ್ಮ ಸಮಯಕ್ಕೆ ಅನುಗುಣವಾಗಿ ನಾವು ದಿನಚರಿಯನ್ನು ನಿಗದಿಪಡಿಸಿಕೊಳ್ಳುತ್ತೇವೆ. ನಾನು ಶೂಟಿಂಗ್‌ನಲ್ಲಿ ಇದ್ದಾಗ ರಿತೇಶ್ ಅವರು ಹೋಮ್‌ಮೇಕರ್ ಆಗುತ್ತಾರೆ. ಮನೆಯ ಜವಾಬ್ದಾರಿಯನ್ನು ನಿಭಾಯಿಸುತ್ತಾರೆ. ಒಮ್ಮೆ ನಾನು ದೆಹಲಿಯಲ್ಲಿದ್ದಾಗ ನನ್ನೊಂದಿಗೆ ನನ್ನ ಮನೆ ಇಲ್ಲ ಎಂದು ನನಗೆ ಅನಿಸದಂತೆ ಮಕ್ಕಳನ್ನು ನೋಡಿಕೊಂಡಿದ್ದರುʼʼಎಂದಿದ್ದರು