ಬೆಂಗಳೂರು: ನಟ ರಿತೇಶ್ ದೇಶಮುಖ್ (Riteish Deshmukh) ಏಪ್ರಿಲ್ 20ರಂದು ಪತ್ನಿ ಜೆನಿಲಿಯಾ ದೇಶಮುಖ್ (Genelia Deshmukh) ಮತ್ತು ಮಕ್ಕಳೊಂದಿಗೆ ಅಯೋಧ್ಯೆಯ ರಾಮಮಂದಿರಕ್ಕೆ ಭೇಟಿ ನೀಡಿದರು. ದಂಪತಿ ರಾಮಮಂದಿರಕ್ಕೆ ಭೇಟಿ ಕೊಟ್ಟ ಫೋಟೊಗಳನ್ನು ಇನ್‌ಸ್ಟಾದಲ್ಲಿ ಹಂಚಿಕೊಂಡಿದ್ದಾರೆ. ರಿತೇಶ್ ಮತ್ತು ಜೆನಿಲಿಯಾ (Ayodhya Ram Mandir) ಫೋಟೊ ಶೇರ್ ಮಾಡಿಕೊಂಡು ʻʻರಾಮಲಲ್ಲಾ ದರ್ಶನ ಪಡೆದದ್ದಾಯ್ತುʼʼಎಂದು ಬರೆದುಕೊಂಡಿದ್ದಾರೆ.
ಫೋಟೊದಲ್ಲಿ ದಂಪತಿ ರಾಮನನ್ನು ಪ್ರಾರ್ಥಿಸುತ್ತಿರುವುದು ಕಂಡು ಬಂದಿದೆ. ಇದಕ್ಕೂ ಮುಂಚೆ ಪ್ರಿಯಾಂಕಾ ಚೋಪ್ರಾ (Priyanka Chopra), ಅವರ ಪತಿ-ಗಾಯಕ ನಿಕ್ ಜೋನಾಸ್ ಮತ್ತು ಅವರ ಪುತ್ರಿ ಮಾಲತಿ ಮೇರಿ ಚೋಪ್ರಾ ಜೋನಾಸ್ ಜತೆ ಬುಧವಾರ (ಮಾ.20) ಅಯೋಧ್ಯೆಯ ರಾಮಮಂದಿರಕ್ಕೆ ಹೋಗಿ ಪ್ರಾರ್ಥನೆ ಸಲ್ಲಿಸಿದ್ದರು.
ಜನವರಿ 2024ರಲ್ಲಿ, ರಾಮಲಲ್ಲಾ ಪ್ರಾಣ ಪ್ರತಿಷ್ಠೆ ಸಮಾರಂಭಕ್ಕಾಗಿ ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಅಯೋಧ್ಯೆಯಲ್ಲಿದ್ದರು. ಕತ್ರಿನಾ ಕೈಫ್, ವಿಕ್ಕಿ ಕೌಶಲ್, ರಣಬೀರ್ ಕಪೂರ್, ಆಲಿಯಾ ಭಟ್ ಆಕಾಶ್ ಅಂಬಾನಿ, ಪತ್ನಿ ಶ್ಲೋಕಾ ಅಂಬಾನಿ ಕಾಣಿಸಿಕೊಂಡಿದ್ದರು. ಕಂಗನಾ ರಣಾವತ್ ಮತ್ತು ಅಮಿತಾಭ್ ಬಚ್ಚನ್ ಕೂಡ ಹಾಜರಿದ್ದರು. ಪ್ರಾಣ ಪ್ರತಿಷ್ಠಾ ಸಮಾರಂಭಕ್ಕಾಗಿ ರಜನಿಕಾಂತ್, ಚಿರಂಜೀವಿ, ರಾಮ್ ಚರಣ್ ಕೂಡ ಅಯೋಧ್ಯೆ ರಾಮಮಂದಿರದಲ್ಲಿ ಕಾಣಿಸಿಕೊಂಡರು.
ಇದನ್ನೂ ಓದಿ: Priyanka Chopra : ರಾಮಮಂದಿರದಲ್ಲಿ ಪ್ರಿಯಾಂಕಾ ಮಗಳು ಕ್ಯೂಟ್ ಆಗಿ ‘ಅಯೋಧ್ಯಾ’ ಎಂದು ಹೇಳಿದ್ದು ಹೀಗೆ!
ರಿತೇಶ್ ದೇಶಮುಖ್ ಪೋಸ್ಟ್
ಸಿನಿಮಾ ವಿಚಾರಕ್ಕೆ ಬಂದರೆ, ರಿತೇಶ್ ಅವರು ‘ಮಸ್ತಿ 4’ ಗಾಗಿ ಏಳು ವರ್ಷಗಳ ನಂತರ ವಿವೇಕ್ ಒಬೆರಾಯ್ ಮತ್ತು ಅಫ್ತಾಬ್ ಶಿವದಾಸನಿ ಅವರೊಂದಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಚಿತ್ರಕ್ಕೆ ಇಂದ್ರ ಕುಮಾರ್, ಎ. ಜುಂಜುನ್ವಾಲಾ, ಅಶೋಕ್ ಠಾಕೇರಿಯಾ ಮತ್ತು ಎಸ್.ಕೆ. ಅಹ್ಲುವಾಲಿಯಾ ಬಂಡವಾಳ ಹೂಡಿದ್ದಾರೆ.