ಬೆಂಗಳೂರು: 2000ರ ದಶಕದಲ್ಲಿ, ಹಲವಾರು ಯುರೋಪಿಯನ್ ಮಾಡೆಲ್‌ಗಳು ಮತ್ತು ಡ್ಯಾನ್ಸರ್‌ಗಳು ಭಾರತಕ್ಕೆ ಬಂದರು. ಪೋಷಕ ನಟಿಯರಾಗಿ ಅಥವಾ ಐಟಂ ಗರ್ಲ್‌ಗಳಾಗಿ ಚಲನಚಿತ್ರೋದ್ಯಮದಲ್ಲಿ ಜನಪ್ರಿಯರಾದರು. ಯಾನಾ ಗುಪ್ತಾರಿಂದ ನೆಗರ್ ಖಾನ್ ವರೆಗೆ ಅನೇಕರು ಪ್ರೇಕ್ಷಕರನ್ನು ರಂಜಿಸಿದರು. ಈ ಪಟ್ಟಿಯಲ್ಲಿ ಸೋಫಿಯಾ ಹಯಾತ್ ಹೆಸರು ಕೂಡ ಇದೆ. ಮೊದಲು ಬಿಗ್ ಬಾಸ್ ಮೂಲಕ ಖ್ಯಾತಿ ಗಳಿಸಿದರು. ನಂತರ ಇಬ್ಬರು ದೊಡ್ಡ ಕ್ರಿಕೆಟ್ ತಾರೆಗಳೊಂದಿಗೆ ಡೇಟಿಂಗ್ ಮಾಡಿದರು. ಬಾಲಿವುಡ್ ನಟಿ ಸೋಫಿಯಾ ಹಯಾತ್ (Sofia Hayat) ಮದುವೆಯಾದ ವರ್ಷಕ್ಕೆ ಡಿವೋರ್ಸ್ ಪಡೆದಿದ್ದರು.. ನಿರೂಪಕಿಯಾಗಿ, ನಟಿಯಾಗಿ, ಗಾಯಕಿಯಾಗಿ ಆಕೆ ಹೆಸರು ಮಾಡಿದ್ದರು. ಬಿಕಿನಿ ತೊಟ್ಟು ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದೇ ಹೆಚ್ಚು. ಕ್ರಿಕೆಟಿಗ ರೋಹಿತ್ ಶರ್ಮಾ (Rohit Sharma) ಜೊತೆಗೂ ಈಕೆಯ ಹೆಸರು ತಳುಕು ಹಾಕಿಕೊಂಡಿತ್ತು. ಆದರೀಗ ನಟಿ ಸೋಫಿಯಾ ಹಯಾತ್ ಸನ್ಯಾಸತ್ವ ಸ್ವೀಕರಿಸಿದ್ದಾರೆ.
ಸೋಫಿಯಾ ಹಯಾತ್ ಬ್ರಿಟನ್‌ನ ಸಂಪ್ರದಾಯವಾದಿ ಮುಸ್ಲಿಂ ಕುಟುಂಬದಲ್ಲಿ ಹುಟ್ಟಿ ಬೆಳೆದವರು. ಭಾರತೀಯ ಮತ್ತು ಪಾಕಿಸ್ತಾನಿ ಪರಂಪರೆಯಲ್ಲಿ, ಸೋಫಿಯಾ ತನ್ನ ಹದಿಹರೆಯದಲ್ಲಿ ಬಲವಂತದಲ್ಲಿ ಮದುವೆಗೆ ಒಳಗಾಗಿದ್ದೆ ಎಂದು ಹೇಳಿಕೊಂಡಿದ್ದಾರೆ.
ನಟನೆಯಲ್ಲಿ ಆಸಕ್ತಿ ಹೊಂದಿದ್ದ ಆಕೆ ಬ್ರಿಟನ್ ತೊರೆದು ಭಾರತಕ್ಕೆ ಬಂದರು. 2008 ರಲ್ಲಿ, ‘ಕ್ಯಾಶ್ ಮತ್ತು ಕರಿ’ ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಿದರು. ಬಳಿಕ ‘ಸಿಕ್ಸ್ ಎಕ್’ ಹಾಗೂ ‘ಅಕ್ಸರ್- 2’ ಚಿತ್ರಗಳಲ್ಲಿ ನಟಿಸಿದರು. 2013 ರಲ್ಲಿ, FHM ಸಮೀಕ್ಷೆಯಲ್ಲಿ ವಿಶ್ವದ ಅತ್ಯಂತ ಸೆಕ್ಸಿಯೆಸ್ಟ್ ಮಹಿಳೆಯರ ಪಟ್ಟಿಯಲ್ಲಿ ಆಕೆಯ ಹೆಸರು ಇತ್ತು. 2017ರಲ್ಲಿ ರೊಮೇನಿಯನ್ ಉದ್ಯಮಿಯನ್ನು ಮದುವೆಯಾದ ಸೋಫಿಯಾ ಒಂದು ವರ್ಷಕ್ಕೆ ಡಿವೋರ್ಸ್ ಪಡೆದಿದ್ದರು.
ಇದನ್ನೂ ಓದಿ: Shiva Rajkumar: ಶಿವರಾಜ್ ಕುಮಾರ್ ಜನುಮದಿನಕ್ಕೆ 131ನೇ ಸಿನಿಮಾದ ಮೊದಲ ಝಲಕ್ ರಿಲೀಸ್!
ಸೋಫಿಯಾ ಬ್ರಿಟನ್ ಮತ್ತು ಭಾರತದಲ್ಲಿನ ಹಲವಾರು ಟಿವಿ ಶೋಗಳಲ್ಲಿ ಕಾಣಿಸಿಕೊಂಡರು, ವಿಶೇಷವಾಗಿ ಬಿಗ್ ಬಾಸ್ (2013) ನ ಏಳನೇ ಸೀಸನ್‌ನಲ್ಲಿ ಕಾಣಿಸಿಕೊಂಡರು. ಸೋಫಿಯಾ ಬಿಗ್ ಬಾಸ್ ಮನೆಯಲ್ಲಿದ್ದ ನಂತರ ಭಾರತೀಯ ಕ್ರಿಕೆಟಿಗ ರೋಹಿತ್ ಶರ್ಮಾ ಅವರೊಂದಿಗೆ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ವದಂತಿಗಳೂ ಆದವು. ಮತ್ತು ಆ ಸಮಯದಲ್ಲಿ ವಿರಾಟ್ ಕೊಹ್ಲಿಯೊಂದಿಗೆ ಸಹ ಸಂಬಂಧ ಹೊಂದಿದ್ದರು ಎಂದು ವರದಿಯಾಗಿತ್ತು. 2017ರಲ್ಲಿ ರೊಮೇನಿಯನ್ ಉದ್ಯಮಿಯನ್ನು ಮದುವೆಯಾದ ಸೋಫಿಯಾ ಒಂದು ವರ್ಷಕ್ಕೆ ಡಿವೋರ್ಸ್ ಪಡೆದಿದ್ದರು.
2016 ರಲ್ಲಿ, ತನ್ನ ಬಿಗ್ ಬಾಸ್ ಅವಧಿಯ ಮೂರು ವರ್ಷಗಳ ನಂತರ, ಸೋಫಿಯಾ ಗ್ಲಾಮರ್ ಜಗತ್ತನ್ನು ತ್ಯಜಿಸಿ ತಾನು ಸನ್ಯಾಸಿನಿಯಾಗಿದ್ದೇನೆ ಎಂದು ಘೋಷಿಸುವ ಮೂಲಕ ಎಲ್ಲರನ್ನೂ ಬೆರಗುಗೊಳಿಸಿದರು. ತನ್ನನ್ನು ತಾಯಿ ಸೋಫಿಯಾ ಎಂದು ಕರೆದುಕೊಳ್ಳುವ ಮಾಜಿ ನಟಿ ಆಧ್ಯಾತ್ಮಿಕತೆಯ ಮಾರ್ಗವನ್ನು ಆರಿಸಿಕೊಳ್ಳುತ್ತಿದ್ದೇನೆ ಎಂದು ಹೇಳಿದರು.
ಜೂನ್ 2016 ರಲ್ಲಿ, ಹಯಾತ್ ಇದ್ದಕ್ಕಿದ್ದಂತೆ ತಾನು ಆಧ್ಯಾತ್ಮಿಕತೆಯನ್ನು ಸ್ವೀಕರಿಸಿದ್ದೇನೆ ಮತ್ತು ಸನ್ಯಾಸಿನಿಯಾಗಿದ್ದೇನೆ ಎಂದು ಘೋಷಿಸಿದ್ದರು. ಗಯಾ ಸೋಫಿಯಾ ಮದರ್ ಎಂದು ತಮ್ಮ ಹೆಸರು ಬದಲಿಸಿಕೊಂಡಿದ್ದರು.