Site icon Vistara News

Salman Khan: ʻಈದ್‌ʼಗೆ ಗುಡ್‌ ನ್ಯೂಸ್‌ ಕೊಟ್ಟ ಸಲ್ಮಾನ್ ಖಾನ್!

Salman Khan

ಬೆಂಗಳೂರು: ಸಲ್ಮಾನ್ ಖಾನ್ (Salman Khan) ಈದ್ ದಿನವೇ ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌ ಕೊಟ್ಟಿದ್ದಾರೆ. ಎಆರ್ ಮುರುಗದಾಸ್ (AR Murugadoss) ಜತೆ ಸಲ್ಮಾನ್ ಖಾನ್ ಕೈ ಜೋಡಿಸಿದ್ದು, ಹೊಸ ಸಿನಿಮಾ ಅನೌನ್ಸ್‌ ಮಾಡಿದ್ದಾರೆ. ಸಿನಿಮಾಗೆ ‘ಸಿಕಂದರ್’ (Sikandar) ಎಂದು ಶಿರ್ಷಿಕೆ ನೀಡಲಾಗಿದೆ. ಈದ್ 2025ರಂದು ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ ಎಂದು ಪೋಸ್ಟರ್‌ ಜತೆ ಮಾಹಿತಿ ಹಂಚಿಕೊಂಡಿದ್ದಾರೆ.

ಸಲ್ಮಾನ್ ಖಾನ್ ಏಪ್ರಿಲ್ 11ರಂದು ಇನ್‌ಸ್ಟಾಗ್ರಾಮ್‌ನಲ್ಲಿ ಚಿತ್ರದ ಶೀರ್ಷಿಕೆಯನ್ನು ಘೋಷಿಸಿದರು. ʻಬಡೆ ಮಿಯಾ ಚೋಟೆ ಮಿಯಾʼ ಮತ್ತು ʻಮೈದಾನ್ʼ ಸಿನಿಮಾಗಳನ್ನು ಈ ಈದ್‌ನಲ್ಲಿ ವೀಕ್ಷಿಸಿ, ಮುಂದಿನ ಈದ್‌ನಲ್ಲಿ, ʻಸಿಕಂದರ್‌ʼ ಸಿನಿಮಾ ನೋಡಿ. ನಿಮ್ಮೆಲ್ಲರಿಗೂ ಈದ್ ಮುಬಾರಕ್ ಶುಭಾಶಯಗಳುʼಎಂದು ಬರೆದುಕೊಂಡಿದ್ದಾರೆ.

ಮಾರ್ಚ್ 12ರಂದು, ಸಲ್ಮಾನ್ ಖಾನ್ ತಮ್ಮ ಅಧಿಕೃತ ಎಕ್ಸ್‌ ಹ್ಯಾಂಡಲ್‌ನಲ್ಲಿ ಸಿನಿಮಾ ಬಗ್ಗೆ ಹಂಚಿಕೊಂಡಿದ್ದರು. ಪ್ರತಿಭಾವಂತರಾದ ಎಆರ್ ಮುರುಗದಾಸ್ ನನ್ನ ಸ್ನೇಹಿತ, ಅವರೊಂದಿಗೆ ಸಿನಿಮಾ ಮಾಡುತ್ತಿರುವುದು ಸಂತೋಷವಾಗಿದೆ. ಈ ಸಹಯೋಗ ವಿಶೇಷವಾಗಿದೆ. ನಿಮ್ಮ ಪ್ರೀತಿ ಮತ್ತು ಆಶೀರ್ವಾದ ನಮ್ಮ ಮೇಲೆ ಇರಲಿʼʼಎಂದು ಬರೆದುಕೊಂಡಿದ್ದರು.

ತಮಿಳು, ತೆಲುಗಿನಲ್ಲಿ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಎಆರ್ ಮುರುಗದಾಸ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರವನ್ನು ಸಾಜಿದ್ ನಾಡಿಯಾವಾಲ ನಿರ್ಮಾಣ ಮಾಡುತ್ತಿದ್ದು, ದೊಡ್ಡ ಬಜೆಟ್​ನಲ್ಲಿ ಸಿದ್ಧವಾಗುತ್ತಿದೆ. ಮುರುಗದಾಸ್ ಅವರು ಈ ಮೊದಲು ‘ಗಜಿನಿ’, ‘ಸ್ಟಾಲಿನ್’, ‘ಸೆವೆಂತ್ ಸೆನ್ಸ್’, ‘ತುಪ್ಪಾಕಿ’, ‘ಸ್ಪೈಡರ್’ ಸೇರಿ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟಿದ್ದರು. ಮುರುಗದಾಸ್ ಅವರು ಆಮಿರ್ ಖಾನ್ ನಟಿಸಿದ್ದ ‘ಗಜಿನಿ’ ಚಿತ್ರವನ್ನು ಅವರೇ ನಿರ್ದೇಶನ ಮಾಡಿದ್ದರು.

ಇದನ್ನೂ ಓದಿ: Salman Khan: ಸಲ್ಮಾನ್‌ ಖಾನ್‌ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಲಿದ್ದಾರೆ ದಕ್ಷಿಣ ಭಾರತದ ಈ ಖ್ಯಾತ ನಿರ್ದೇಶಕ

ಸೊನಾಕ್ಷಿ ಸಿನ್ಹಾ ನಟನೆಯ ‘ಅಕಿರಾ’ ಚಿತ್ರವನ್ನು ಅವರು ನಿರ್ದೇಶನ ಮಾಡಿದ್ದರು. ಮುರುಗದಾಸ್ ನಿರ್ದೇಶನದಲ್ಲಿ ಮೂಡಿ ಬಂದಿದ್ದ ‘ಸ್ಟಾಲಿನ್’ ಚಿತ್ರವನ್ನು ಹಿಂದಿಯಲ್ಲಿ ‘ಜೈ ಹೋ’ ಹೆಸರಲ್ಲಿ ರೀಮೇಕ್ ಮಾಡಲಾಗಿತ್ತು.

ʻಸಿಖಂದರ್’ ಸಿನಿಮಾ ಆಕ್ಷನ್ ಥ್ರಿಲ್ಲರ್ ಚಿತ್ರವಾಗಿರಲಿದೆ. 400 ಕೋಟಿ ರೂಪಾಯಿ ಬಜೆಟ್​ನಲ್ಲಿ ಸಿನಿಮಾ ಸಿದ್ಧವಾಗುತ್ತಿದೆ ಎಂದು ವರದಿಯಾಗಿದೆ. ಸಲ್ಮಾನ್ ಖಾನ್ ಕೊನೆಯದಾಗಿ ‘ಟೈಗರ್ 3’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.

Exit mobile version