Site icon Vistara News

Sanjay Leela Bhansali: ಬನ್ಸಾಲಿಯ ‘ಲವ್ ಆ್ಯಂಡ್ ವಾರ್’ಗೆ 1964ರ ಹಿಟ್‌ ಸಿನಿಮಾದಿಂದ ಸ್ಫೂರ್ತಿ!

Sanjay leela Bhansali Love and War loosely inspired by Sangam

ಬೆಂಗಳೂರು: ʼದೇವ್‌ದಾಸ್‌ʼ ‘ರಾಮ್​ ಲೀಲಾ’, ‘ಬಾಜಿರಾವ್​ ಮಸ್ತಾನಿ’ಯಂತಹ ಹಿಟ್‌ ಸಿನಿಮಾಗಳನ್ನು ನೀಡಿದವರು ಸಂಜಯ್ ಲೀಲಾ ಬನ್ಸಾಲಿ (Sanjay Leela Bhansali). ಅವರು ‘ಲವ್ ಆ್ಯಂಡ್ ವಾರ್’ ಸಿನಿಮಾ ( ‘Love and War’) ಮಾಡುತ್ತಿರುವುದು ಗೊತ್ತೇ ಇದೆ. ಇದೀಗ ಈ ಸಿನಿಮಾ ಹಿಂದಿಯ ಹಿಟ್‌ ಸಿನಿಮಾವಾದ ʻಸಂಗಮ್ʼ ಕಥೆಯಿಂದ ಸ್ಫೂರ್ತಿ ಪಡೆದಿದೆ ಎಂದು ವರದಿಯಾಗಿದೆ. 1964ರ ಈ ʻಸಂಗಮ್‌ʼ ( film Sangam) ಚಲನಚಿತ್ರದಲ್ಲಿ ರಾಜ್ ಕಪೂರ್, ವೈಜಯಂತಿಮಾಲಾ ಮತ್ತು ರಾಜೇಂದ್ರ ಕುಮಾರ್ ನಟಿಸಿದ್ದರು. ಈಗ ಈ ‘ಲವ್ ಆ್ಯಂಡ್ ವಾರ್’ ನಲ್ಲಿ ರಣಬೀರ್ ಕಪೂರ್, ಆಲಿಯಾ ಭಟ್ ಮತ್ತು ವಿಕ್ಕಿ ಕೌಶಲ್‌ ನಟಿಸಲಿದ್ದಾರೆ.

ಈ ‘ಲವ್ ಆ್ಯಂಡ್ ವಾರ್’ ಸಿನಿಮಾ ʻಸಂಗಮ್‌ʼ ರಿಮೇಕ್‌ ಎಂದು ಬಹಳ ಹಿಂದೆಯೇ ವರದಿಯಾಗಿತ್ತು. ಆರಂಭದಲ್ಲಿ, ಧರ್ಮ ಪ್ರೊಡಕ್ಷನ್ಸ್ ಈ ಸಿನಿಮಾ ಮಾಡಲು ಯೋಜಿಸಿತ್ತು. ಆದರೆ, ಕಾರಣಾಂತರಗಳಿಂದ ಸಿನಿಮಾ ಮಾಡಲು ಆಗಲಿಲ್ಲ. ಬನ್ಸಾಲಿಯವರ ‘ಲವ್ ಆ್ಯಂಡ್ ವಾರ್’ ಸಿನಿಮಾ ಒಂದು ತ್ರಿಕೋನ ಪ್ರೇಮ ಕಥೆಯಾಗಿದೆ ಎಂದು ವರದಿಯಾಗಿದೆ. ಮಾತ್ರವಲ್ಲ 1964ರ ಚಲನಚಿತ್ರ ʻಸಂಗಮ್‌ʼ ಸಿನಿಮಾದಿಂದ ಸ್ಫೂರ್ತಿ ಪಡೆದ ‘ಲವ್ ಆ್ಯಂಡ್ ವಾರ್’ ಆಧುನಿಕ ಕಾಲದ ಚಿತ್ರಕಥೆ ಹೊಂದಿರಲಿದೆ ಎಂದು ವರದಿಯಾಗಿದೆ.

ಈ ಚಿತ್ರಕ್ಕಾಗಿ ರಣಬೀರ್ ಕಪೂರ್ ತಮ್ಮ ತಾತ ರಾಜ್ ಕಪೂರ್ ಅವರ ʻಸಂಗಮ್ʼ ಪಾತ್ರ ನಿಭಾಯಿಸಲಿದ್ದಾರಂತೆ. ಸಿನಿಮಾ ಯಾವಾಗ ಸೆಟ್ಟೇರಲಿದೆ ಎಂಬ ವಿಷಯ ಧೃಢ ಪಟ್ಟಿಲ್ಲದಿದ್ದರೂ 2024ರ ದ್ವಿತೀಯಾರ್ಧದಲ್ಲಿ ಸಿನಿಮಾ ಸೆಟ್ಟೇರಲಿದೆ ಎನ್ನಲಾಗಿದೆ.

ಇದನ್ನೂ ಓದಿ: Rashmika Mandanna | ಎಲ್ಲವೂ ಪ್ರಾರಂಭವಾದ ದಿನ ಎಂದು ʻಕಿರಿಕ್‌ ಪಾರ್ಟಿʼ ಸಿನಿಮಾ ಪೋಸ್ಟರ್‌ ಹಂಚಿಕೊಂಡ ರಶ್ಮಿಕಾ ಮಂದಣ್ಣ!

ಸದ್ಯ ರಣಬೀಕ್‌ ಕಪೂರ್‌ ನಟನೆ, ನಿತೇಶ್ ತಿವಾರಿ (Nitesh Tiwari) ನಿರ್ದೇಶನದ ‘ರಾಮಾಯಣ’ ಸಿನಿಮಾ (Ramayana Set Pic leaked) ಸೆಟ್ಟೇರಿದೆ. ಮುಂಬೈ ಸ್ಟುಡಿಯೊವೊಂದರಲ್ಲಿ ಗುರುಕುಲದ ಸೆಟ್ ನಿರ್ಮಿಸಿ ʻರಾಮಾಯಣʼ ಸಿನಿಮಾ ಚಿತ್ರೀಕರಣ ಆರಂಭಿಸಿದ್ದಾರೆ. ರಣಬೀರ್ ಕಪೂರ್ ರಾಮನ ಪಾತ್ರ ನಿರ್ವಹಿಸಿದ್ದಾರೆ ಎಂದು ವರದಿಯಾಗಿದೆ. ಏಪ್ರಿಲ್ 3ರಂದು, ಚಿತ್ರೀಕರಣ ಪ್ರಾರಂಭವಾಗುತ್ತಿದ್ದಂತೆ, ಸೆಟ್‌ನಿಂದ ಮೊದಲ ದೃಶ್ಯ ಲೀಕ್‌ ಆಗಿದೆ.  ಏಪ್ರಿಲ್ 15ರ ವೇಳೆಗೆ ರಣ್‌ಬೀರ್ ಕಪೂರ್ ಕೂಡ ರಾಮಾಯಣ ಚಿತ್ರೀಕರಣದಲ್ಲಿ ಭಾಗಿ ಆಗುವ ಸಾಧ್ಯತೆಯಿದೆ. ಇನ್ನು ದಶರಥನಾಗಿ ಅರುಣ್‌ ಗೋವಿಲ್, ಹನುಮಂತನಾಗಿ ಸನ್ನಿ ಡಿಯೋಲ್ ನಟಿಸುತ್ತಾರೆ ಎನ್ನಲಾಗುತ್ತಿದೆ. ರಾವಣನ ಸಹೋದರಿ ಶೂರ್ಪನಖಿಯಾಗಿ ರಕುಲ್‌ಪ್ರೀತ್ ಸಿಂಗ್ ಹಾಗೂ ಮಡದಿ ಮಂಡೋದರಿಯಾಗಿ ಸಾಕ್ಷಿ ತನ್ವರ್ ನಟಿಸುತ್ತಾರೆ ಎಂದು ವರದಿಯಾಗಿದೆ.

ಸಂಜಯ್ ಲೀಲಾ ಬನ್ಸಾಲಿ ಅವರು ಶೀಘ್ರದಲ್ಲೇ ‘ಹೀರಾಮಂಡಿ’ ಮೂಲಕ ತಮ್ಮ ಒಟಿಟಿ ಸಿರೀಸ್‌ಗೆ ಪದಾರ್ಪಣೆ ಮಾಡಲಿದ್ದಾರೆ. ಸೋನಾಕ್ಷಿ ಸಿನ್ಹಾ, ಮನಿಶಾ ಕೊಯಿರಾಲಾ, ರಿಚಾ ಚಡ್ಡಾ, ಅದಿತಿ ರಾಯ್ ಹೈದರಿ ಮತ್ತು ಸಂಜೀದಾ ಶೇಖ್ ಸೇರಿದಂತೆ ಅನೇಕ ಪಾತ್ರಗಳನ್ನು ಒಳಗೊಂಡಿದೆ.

Exit mobile version