ಬೆಂಗಳೂರು: ಸಾರಾ ಅಲಿ ಖಾನ್ (Sara Ali Khan) ಅವರು ಶನಿವಾರ (ಮಾ.30) ಮುಂಬಯಿಯ ಜುಹುದಲ್ಲಿರುವ ಶನಿ ದೇವರ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಈ ನಟಿಯ ʻಮರ್ಡರ್ ಮುಬಾರಕ್ʼ ಮತ್ತು ʻಏ ವತನ್ ಮೇರೆ ವತನ್ʼ ಸಿನಿಮಾಗಳು ಬಿಡುಗಡೆ ಆಗಿವೆ. ಹೀಗಾಗಿ ನಟಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಆವರಣದ ಹೊರಗೆ ಕುಳಿತಿದ್ದ ಬಡವರಿಗೆ ಸಿಹಿ ಪ್ಯಾಕೆಟ್‌ಗಳನ್ನು (Sara Ali Khan distributes food) ಹಂಚಿದರು. ಇದು ವೈರಲ್ ಆಗಿದೆ. ಈ ಸಂದರ್ಭದಲ್ಲಿ ತಮ್ಮನ್ನು ಸುತ್ತುವರಿದ ಪಾಪರಾಜಿಗಳಿಗೆ ವಿಡಿಯೊ ಚಿತ್ರೀಕರಿಸಿದಂತೆ ನಟಿ ಮನವಿ ಮಾಡಿಕೊಂಡಿದ್ದೂ ಗಮನ ಸೆಳೆಯಿತು.
ಆರೆಂಜ್ ಟಾಪ್ ಮತ್ತು ಕಪ್ಪು ಪ್ಯಾಂಟ್‌ನಲ್ಲಿ ಸಾರಾ ಕ್ಯಾಷುವಲ್ ಲುಕ್‌ನಲ್ಲಿ ಕಂಡುಬಂದರು. ದೇವಸ್ಥಾನದ ಹೊರಗೆ ಕುಳಿತಿದ್ದ ಬಡಜನರ ಯೋಗ ಕ್ಷೇಮವನ್ನು ಸಾರಾ ಅಲಿ ಖಾನ್ ವಿಚಾರಿಸಿದರು. ಆಹಾರದ ಪೊಟ್ಟಣಗಳನ್ನು ಅಲ್ಲಿ ಕುಳಿತಿದ್ದ ಎಲ್ಲರಿಗೂ ಸಾರಾ ವಿತರಿಸಿದರು. ಆದರೆ ಕೆಲವರು ಈ ವಿಡಿಯೊ ಕಂಡು ʻಪಬ್ಲಿಸಿಟಿ ಸ್ಟಂಟ್ʼ ಎಂದು ಕಮೆಂಟ್ ಮಾಡಿದ್ದಾರೆ.
ಸಾರಾ ಅಭಿನಯದ ʻಮರ್ಡರ್ ಮುಬಾರಕ್ʼ ಮತ್ತು ʻಏ ವತನ್ ಮೇರೆ ವತನ್ʼ ಸಿನಿಮಾಗಳು ಬಿಡುಗಡೆಗೆ ಆಗಿವೆ. ಹೋಮಿ ಅದಾಜಾನಿಯಾ ನಿರ್ದೇಶಿಸಿದ ಸಿನಿಮಾ ಇದು. ʻಏ ವತನ್ ಮೇರೆ ವತನ್ʼ ಭಾರತದ ಸ್ವಾತಂತ್ರ್ಯ ಹೋರಾಟವನ್ನು ಆಧರಿಸಿದೆ. “ಮರ್ಡರ್ ಮುಬಾರಕ್ʼ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿದೆ. “ಏ ವತನ್ ಮೇರೆ ವತನ್” ಪ್ರೈಮ್ ವಿಡಿಯೊದಲ್ಲಿ ಬಿಡುಗಡೆಯಾಗಿದೆ.
ಇದನ್ನೂ ಓದಿ: Asaram Bapu: ಬಾಲಕಿ ಮೇಲೆ ಅತ್ಯಾಚಾರ; ಅಸಾರಾಂ ಬಾಪುಗೆ ಜೈಲೇ ಗತಿ
ಸಾರಾ ಅಲಿ ಖಾನ್ ಅವರು ಅನುರಾಗ್ ಬಸು ಅವರ ʻಮೆಟ್ರೋ ಇನ್ ದಿನೊʼ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆದಿತ್ಯ ರಾಯ್ ಕಪೂರ್, ಕೊಂಕಣ ಸೆಂಶರ್ಮಾ, ಪಂಕಜ್ ತ್ರಿಪಾಠಿ, ಫಾತಿಮಾ ಸನಾ ಶೇಖ್, ಅನುಪಮ್ ಖೇರ್ ಮತ್ತು ಅಲಿ ಫಜಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.