Site icon Vistara News

Sara Ali Khan: ರ‍್ಯಾಂಪ್ ವಾಕ್‌ನಲ್ಲಿ ಸೈಫ್‌ ಅಲಿ ಖಾನ್‌ ಮಗಳ ಹೊಟ್ಟೆಯ ಮೇಲಿನ ಸುಟ್ಟ ಗಾಯ ಹೈಲೈಟ್‌!

Sara Ali Khan Rocks With Confidence Burn Marks

ಬೆಂಗಳೂರು: ಸಾರಾ ಅಲಿ ಖಾನ್ (Sara Ali Khan) ಅವರು ಲ್ಯಾಕ್ಮೆ ಫ್ಯಾಶನ್ ವೀಕ್ 2024ರಲ್ಲಿ ರ‍್ಯಾಂಪ್ ವಾಕ್ ಮಾಡಿದ್ದಾರೆ. ಡಿಸೈನರ್ ವರುಣ್ ಚಕ್ಕಿಲಂ ಅವರ ಶೋಸ್ಟಾಪರ್ ಆಗಿ, ಸಾಂಪ್ರದಾಯಿಕ ಉಡುಪಿನಲ್ಲಿ ಎಲ್ಲರ ಗಮನ ಸೆಳೆದರು. ಆದರೆ ನಿಜಕ್ಕೂ ಹೈಲೈಟ್‌ ಆಗಿದ್ದು ಸಾರಾ ಅಲಿ ಖಾನ್ ಅವರ ಹೊಟ್ಟೆಯ ಮೇಲಿನ ಸುಟ್ಟ ಗಾಯದ ಗುರುತುಗಳು. ಇಷ್ಟಾದರೂ ನಟಿ ಅತ್ಯಂತ ಆತ್ಮವಿಶ್ವಾಸದಿಂದ ರ‍್ಯಾಂಪ್ ವಾಕ್ ಮಾಡಿದ್ದಾರೆ. ನಟಿಯ ಈ ನಡೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಶಿಮ್ಮರಿ ಬೂದು ಬಣ್ಣದ ಲೆಹೆಂಗಾ ಧರಿಸಿದ್ದರು ಸಾರಾ ಅಲಿ ಖಾನ್. ʻಮರ್ಡರ್ ಮುಬಾರಕ್‌’ ಮತ್ತು ʻಏ ವತನ್ ಮೇರೆ ವತನ್’ ಚಿತ್ರಗಳ ಪ್ರಚಾರದ ವೇಳೆ ಸಣ್ಣ ಅಪಘಾತದ ಪರಿಣಾಮವಾಗಿ ಸಾರಾ ಅವರ ದೇಹದ ಮೇಲಿನ ಸುಟ್ಟ ಗಾಯಗಳಾದವು. ಇಂತಹ ಗಾಯದ ಗುರುತುಗಳು ಇದ್ದರೂ ಸಾರಾ ರ‍್ಯಾಂಪ್‌ನಲ್ಲಿ ಆತ್ಮವಿಶ್ವಾಸದಿಂದ ನಡೆದರು. ತನ್ನ ಉಡುಪಿನ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿ ʻʻಸಂಪ್ರದಾಯ ಮತ್ತು ಆಧುನಿಕತೆಯ ಮಿಶ್ರಣದಿಂದ ಕೂಡಿದೆ. ತುಂಬ ಕಮ್‌ಫರ್ಟಬಲ್‌ ಫಿಲ್‌ ಇದೆʼʼಎಂದು ಹೇಳಿಕೊಂಡಿದ್ದಾರೆ.

ಫ್ಯಾಷನ್ ಈವೆಂಟ್‌ನ 4 ನೇ ದಿನದಂದು, ಶ್ರುತಿ ಹಾಸನ್ ತನ್ನ ಕೂಡ ಗಮನ ಸೆಳೆದರು. ಶ್ರುತಿ ಸಾಕ್ಷಿ ಭಾಟಿಯ ಲೆಹೆಂಗಾವನ್ನು ಪ್ರದರ್ಶಿಸಿದರು.

ಇದನ್ನೂ ಓದಿ: Sara Ali Khan: ʻನಂದಿʼಯ ಕಿವಿಯಲ್ಲಿ ಸಾರಾ ಅಲಿ ಖಾನ್ ಹೇಳಿಕೊಂಡಿದ್ದೇನು?

ಬಾಲಿವುಡ್ ನಟಿ ಸಾರಾ ಅಲಿ ಖಾನ್ (Sara Ali Khan) ಹಿಂದೂ ದೇವಾಲಯಗಳಿಗೆ ಹೋಗಿ ದರ್ಶನ ಪಡೆಯುತ್ತಲೇ ಇರುತ್ತಾರೆ. ಈ ಹಿಂದೆ ಸಾರಾ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿರುವ ಮಹಾಕಾಳೇಶ್ವರನ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಮಾಡಿದ್ದರು. ಇದು ಸಾಕಷ್ಟು ಚರ್ಚೆಯಾಗಿತ್ತು. ಸಾರಾ ಅಲಿ ಖಾನ್‌ ಅವರು ದೇವಾಲಯಕ್ಕೆ ತೆರಳಿ, ದರ್ಶನ ಪಡೆದ ಬಳಿಕ ಹಲವು ಟೀಕೆಗಳು ವ್ಯಕ್ತವಾಗಿತ್ತು.

ಸಾರಾ ಅಲಿ ಖಾನ್ ಅವರು ಅನುರಾಗ್ ಬಸು ಅವರ ʻಮೆಟ್ರೋ ಇನ್ ದಿನೊʼ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆದಿತ್ಯ ರಾಯ್ ಕಪೂರ್, ಕೊಂಕಣ ಸೆಂಶರ್ಮಾ, ಪಂಕಜ್ ತ್ರಿಪಾಠಿ, ಫಾತಿಮಾ ಸನಾ ಶೇಖ್, ಅನುಪಮ್ ಖೇರ್ ಮತ್ತು ಅಲಿ ಫಜಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

Exit mobile version