ಬೆಂಗಳೂರು: ಬಾಲಿವುಡ್ ನಟ ಶಾರುಖ್ ಖಾನ್ (Shah Rukh Khan) ಅವರು ನಯನತಾರಾ ಜತೆ ತೆರೆ ಹಂಚಿಕೊಂಡ ನಂತರ ಅವ ದಕ್ಷಿಣ ಭಾರತದ ಪ್ರಸಿದ್ಧ ನಟಿಯೊಂದಿಗೆ ನಟಿಸಲಿದ್ದಾರೆ ಎಂದು ವರದಿಯಾಗಿದೆ. ಸಮಂತಾ ರುತ್ ಪ್ರಭು ಜತೆ ಶಾರುಖ್ ರೊಮ್ಯಾನ್ಸ್ ಮಾಡಲಿದ್ದಾರಂತೆ. ʻಪಿಕೆʼ ಖ್ಯಾತಿಯ ರಾಜ್‌ಕುಮಾರ್ ಹಿರಾನಿ ಸಿನಿಮಾಗೆ ಶಾರುಖ್ ಸಹಿ ಮಾಡಿದ್ದು, ಈ ಸಿನಿಮಾಗೆ ಸಮಂತಾ ನಾಯಕಿ ಎನ್ನಲಾಗುತ್ತಿದೆ. ʻಡಂಕಿʼ ಹಿಟ್ ಸಿನಿಮಾ ಕೊಟ್ಟ ಬಳಿಕ ಶಾರುಖ್ ಅವರು ರಾಜ್‌ಕುಮಾರ್ ಹಿರಾನಿ ಜತೆ ಮತ್ತೊಮ್ಮೆ ಕೈ ಜೋಡಿಸಲು ರೆಡಿಯಾಗಿದ್ದಾರೆ.
ಶಾರುಖ್ ಇತ್ತೀಚೆಗೆ ರಾಜ್‌ಕುಮಾರ್ ಹಿರಾನಿಯವರ ʻಡಂಕಿʼಯಲ್ಲಿ ಕಾಣಿಸಿಕೊಂಡರು, 500 ಕೋಟಿ ರೂ. ಕಲೆಕ್ಷನ್ ಮಾಡಿತ್ತು ಸಿನಿಮಾ 2023ರಲ್ಲಿ ಶಾರುಖ್ ಅವರ ಮೂರನೇ ಸಿನಿಮಾ ಡಂಕಿಯಾಗಿತ್ತು. ಆದಾಗ್ಯೂ, ಶಾರುಖ್ ಅವರ ಯಾವುದೇ ಚಿತ್ರಗಳು ಈ ವರ್ಷ ಬಿಡುಗಡೆಯಾಗಿಲ್ಲ. ನಟನ ಮುಂಬರುವ ಚಿತ್ರಗಳು ಇನ್ನೂ ಬಹಿರಂಗಗೊಂಡಿಲ್ಲ.
ಕೆಜಿಎಫ್ ನಟ ಯಶ್ ಅವರ ಮುಂಬರುವ ಚಿತ್ರ ʻಟಾಕ್ಸಿಕ್ʼನಲ್ಲಿಯೂ ಶಾರುಖ್ ಕಾಣಿಸಿಕೊಳ್ಳುತ್ತಾರೆ ಎಂಬ ವದಂತಿಗಳಿವೆ. ʻಪಠಾಣ್ʼ ನಿರ್ದೇಶಕ ಸಿದ್ಧಾರ್ಥ್ ಆನಂದ್ ಅವರ ʻಕಿಂಗ್ʼ ಎಂಬ ಸಿನಿಮಾದಲ್ಲಿ ಶಾರುಖ್ ಈಗ ಬ್ಯುಸಿಯಾಗಿದ್ದಾರೆ. ಸುಹಾನಾ ಖಾನ್ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಮತ್ತೊಂದೆಡೆ, ಸಮಂತಾ ರುತ್ ಪ್ರಭು ಕೊನೆಯದಾಗಿ ʻಖುಷಿʼಸಿನಿಮಾದಲ್ಲಿ ಕಾಣಿಸಿಕೊಂಡರು.
ಇದನ್ನೂ ಓದಿ: Kannada New Movie: ಭಾರಿ ಮೊತ್ತಕ್ಕೆ ಸೇಲ್ ಆಯ್ತು ʻವಿಕಾಸ ಪರ್ವʼ ಸಿನಿಮಾ ಆಡಿಯೊ ರೈಟ್ಸ್
ನಯನತಾರಾ ಜೊತೆ ‘ಜವಾನ್’ ಸಿನಿಮಾ ಕ್ಲಿಕ್ ಆದಂತೆ ಹೊಸ ಸಿನಿಮಾ ಕೂಡ ಗೆಲ್ಲಲಿ ಎಂದು ಸಮಂತಾರನ್ನು ರಾಜ್‌ಕುಮಾರ್ ಹಿರಾನಿ ಟೀಮ್ ಸಂಪರ್ಕಿಸಿದೆ.ಬಾಲಿವುಡ್ ಸ್ಟಾರ್‌ಗೆ ಸಮಂತಾ ನಾಯಕಿಯಾಗ್ತಾರೆ ಎಂಬ ಸುದ್ದಿ ಕೇಳಿಯೇ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ‘ಖುಷಿ’ (Kushi) ಸಿನಿಮಾದ ಬಳಿಕ ಯಾವುದೇ ಘೋಷಣೆ ಕೂಡ ಆಗಿಲ್ಲ. ಹಾಗಾಗಿ ನಟಿಯ ಕಡೆಯಿಂದ ಗುಡ್ ನ್ಯೂಸ್ ಸಿಗಲಿ ಎಂದು ಫ್ಯಾನ್ಸ್ ಕಾಯ್ತಿದ್ದಾರೆ.
ನಟಿ ಈಗಾಗಲೇ ʻಸಿಟಾಡೆಲ್ ಇಂಡಿಯಾ: ಹನಿ ಬನ್ನಿʼ ವೆಬ್ ಸರಣಿಯಲ್ಲಿ ನಟಿಸಿದ್ದು ಅದರ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಇದರಲ್ಲಿ ಸಮಂತಾ ಜತೆ ವರುಣ್ ಧವನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಜತೆಗೆ ಸಿಕಂದರ್ ಖೇರ್, ಸಾಕಿಬ್ ಸಲೀಮ್ ಮತ್ತು ಕೇ ಕೇ ಮೆನನ್ ಪೋಷಕ ಪಾತ್ರಗಳನ್ನು ನಿರ್ವಹಿಸಿದ್ದಾರೆ.