ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ವಿವಾಹ ಪೂರ್ವ ಸಂಭ್ರಮಾಚರಣೆ ಅದ್ಧೂರಿಯಾಗಿ ನೆರವೇರಿದೆ. ಈ ವೇಳೆ ಕ್ರಿಕೆಟಿಗ ಡ್ವೇನ್ ಬ್ರಾವೋ ಅವರು ಶಾರುಖ್, ಹಾಗೂ ರಣವೀರ್ ಜತೆ ಪೋಸ್ ಕೊಟ್ಟಿದ್ದಾರೆ. “ವಿವಾಹದ ವೈಬ್ಸ್! ಚಿಲ್ಲಿಂಗ್ ವಿಥ್ ಬಿಗ್ ಬಾಯ್ಸ್!ʼʼಎಂದು (Dwayne Bravo) ಕ್ಯಾಪ್ಷನ್ ಕೊಟ್ಟಿದ್ದಾರೆ. ಶಾರುಖ್ ಹೊರತುಪಡಿಸಿ, ಸಲ್ಮಾನ್ ಖಾನ್, ಸಿದ್ಧಾರ್ಥ್ ಮಲ್ಹೋತ್ರಾ, ಕಿಯಾರಾ ಅಡ್ವಾಣಿ, ಸೈಫ್ ಅಲಿ ಖಾನ್, ಕರೀನಾ ಕಪೂರ್ ಖಾನ್, ಮಾಧುರಿ ದೀಕ್ಷಿತ್, ವರುಣ್ ಧವನ್, ಅನಿಲ್ ಕಪೂರ್, ಸಾರಾ ಅಲಿ ಖಾನ್, ಇಬ್ರಾಹಿಂ ಅಲಿ ಖಾನ್, ಅನನ್ಯ ಪಾಂಡೆ ಮತ್ತು ಆದಿತ್ಯ ರಾಯ್ ಕಪೂರ್ ಸೇರಿದಂತೆ ಹಲವಾರು ಬಾಲಿವುಡ್ ಸೆಲೆಬ್ರಿಟಿಗಳು ಹಾಜರಿದ್ದರು.
ಜಾನ್ವಿ ಕಪೂರ್, ರಾಣಿ ಮುಖರ್ಜಿ, ದೀಪಿಕಾ ಪಡುಕೋಣೆ, ರಣವೀರ್ ಸಿಂಗ್, ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಕೂಡ ಮೆಗಾ ಬ್ಯಾಷ್‌ನಲ್ಲಿ ಕಂಡರು.
ಅಂಬಾನಿ ಫ್ಯಾಮಿಲಿಯ ಪ್ರಿ-ವೆಡ್ಡಿಂಗ್ ಕಾರ್ನಿವಲ್‌ನ ರಾಯಲ್ ಡ್ರೆಸ್‌ಕೋಡ್ಸ್!
ಮಾರ್ಚ್ 1: ಇವನಿಂಗ್ ಎವರ್‌ಲ್ಯಾಂಡ್ ಕಾಕ್‌ಟೈಲ್ ಡ್ರೆಸ್ ಕೋಡ್
ಇವನಿಂಗ್ ಎವರ್‌ಲ್ಯಾಂಡ್ ಹೆಸರಿನಲ್ಲಿ ನಡೆಯುವ ಮೊದಲ ದಿನದ ಸಂಜೆ ಕಾರ್ಯಕ್ರಮಕ್ಕೆ ಎಲ್ಲರಿಗೂ ಕಾಕ್‌ಟೈಲ್ ಡ್ರೆಸ್‌ಗಳನ್ನು ಧರಿಸುವಂತೆ ಸೂಚಿಸಲಾಗಿದೆ. ಅಂದು ನಡೆಯುವ ಮ್ಯಾಜಿಕಲ್ ಮ್ಯೂಸಿಕ್, ಡ್ಯಾನ್ಸ್‌ಗೆ ಹೊಂದುವಂತೆ ರಸಮಯ ಸಂಜೆಗೆ ಹೊಂದುವಂತಹ ವೆಸ್ಟರ್ನ್ ಗೌನ್ಸ್, ಪ್ಯಾಂಟ್ ಸೂಟ್, ಶಿಮ್ಮರ್ ಫ್ಲೂಯಿಂಗ್‌ಗೌನ್ಸ್, ಮಿನುಗುವ ಆಕ್ಸೆಸರೀಸ್ ಸೇರಿದಂತೆ ನಾನಾ ಕಾಕ್‌ಟೈಲ್ ಉಡುಪುಗಳು ಈ ಲಿಸ್ಟ್‌ನಲ್ಲಿ ಸೇರಿವೆ.
ಇದನ್ನೂ ಓದಿ: Shah Rukh Khan: ಅಲ್ಲು ಅರ್ಜುನ್ ಮಗನನ್ನು ಹಾಡಿ ಹೊಗಳಿದ ಶಾರುಖ್! ಅದ್ಯಾಕೆ?
ಮಾರ್ಚ್ 2: ವಾಕ್ ಆನ್ ದಿ ವೈಲ್ಡ್ ಸೈಡ್ – ಜಂಗಲ್ ಥೀಮ್ ಡ್ರೆಸ್‌ಕೋಡ್
ಮಾರ್ಚ್ 2ರಂದು ಅಂಬಾನಿ ರೆಸ್ಕ್ಯೂ ಸೆಂಟರ್‌ನಲ್ಲಿ ನಡೆಯಲಿರುವ ವಾಕ್ ಆನ್ ದಿ ವೈಲ್ಡ್ ಸೈಡ್ ಹೆಸರಿನ ಔಟ್‌ಡೋರ್ ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆಲ್ಲರಿಗೂ ಅನಿಮಲ್ ಪ್ರಿಂಟ್ಸ್, ಸಫಾರಿ ಜಂಗಲ್ ಥೀಮ್ ಡ್ರೆಸ್‌ಕೋಡ್ ಫಿಕ್ಸ್ ಮಾಡಲಾಗಿದೆ. ಸುತ್ತಾಡುವ ಕಾರ್ಯಕ್ರಮ ಇದಾಗಿರುವುದರಿಂದ ಕಂಫರ್ಟಬಲ್ ಫುಟ್‌ವೇರ್ ಧರಿಸಲು ಸೂಚಿಸಲಾಗಿದೆ.
ಮಾರ್ಚ್ 3 : ಟಸ್ಕರ್ ಟ್ರಯಲ್ಸ್ – ಹೇರಿಟೇಜ್ ಇಂಡಿಯಾ
ಬೆಳಗ್ಗೆ ಶುರುವಾಗುವ ಟಸ್ಕರ್ ಟ್ರಯಲ್ ಹೆಸರಿನ ಔಟ್‌ಡೋರ್ ಆಕ್ಟಿವಿಟಿಯಲ್ಲಿ, ಅತಿಥಿಗಳು ಕ್ಯಾಶುವಲ್ ಔಟ್‌ಫಿಟ್‌ಗಳಲ್ಲಿ ಕಾಣಿಸಿಕೊಳ್ಳಬೇಕಿದೆ. ಇನ್ನು, ಅದೇ ದಿನ ಸಂಜೆ ವೇಳೆ ನಡೆಯುವ ಹಸ್ತಾಕ್ಷರ್ ಕಾರ್ಯಕ್ರಮದಲ್ಲಿ ಹೆರಿಟೇಜ್ ಇಂಡಿಯನ್ ಡ್ರೆಸ್‌ಕೋಡ್ ನೀಡಿದ್ದು, ಇಲ್ಲಿ ನಡೆಯುವ ರಾಯಲ್ ಪಾರ್ಟಿಯಲ್ಲಿ ಅತಿಥಿಗಳು, ಭಾರತೀಯ ಸಂಸ್ಕೃತಿ ಬಿಂಬಿಸುವಂತಹ ರಾಯಲ್ ಲುಕ್ ನೀಡುವ ರೇಷ್ಮೆ ಸೀರೆ, ಲೆಹೆಂಗಾ, ಅನಾರ್ಕಲಿ, ಶೆರ್ವಾನಿ, ಟರ್ಬನ್, ಕುರ್ತಾದಂತಹ ದೇಸಿ ಅಟೈರ್‌ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುತ್ತವೆ ಮೂಲಗಳು.
ಒಟ್ಟಾರೆ, ಅಂಬಾನಿ ಫ್ಯಾಮಿಲಿಯ ಈ ಪ್ರಿ-ವೆಡ್ಡಿಂಗ್ ಕಾರ್ಯಕ್ರಮಗಳು ಹೈ ಸೊಸೈಟಿ ಫ್ಯಾಷನ್‌ನ ಅನಾವರಣಕ್ಕೆ ಸಾಕ್ಷಿಯಾಗಲಿದೆ ಎನ್ನುತ್ತಾರೆ ಫ್ಯಾಷನಿಸ್ಟ್‌ಗಳು.