Site icon Vistara News

Shah Rukh Khan: ಏನಿದು ಶಾರುಖ್‌ ಖಾನ್‌ನ ಪೋನಿ ಟೇಲ್‌ ಹೇರ್‌ ಸ್ಟೈಲ್‌?

Shah Rukh Khan is back in his ponytail era

ಬೆಂಗಳೂರು: ಸೂಪರ್‌ಸ್ಟಾರ್ ಶಾರುಖ್ ಖಾನ್ (Shah Rukh Khan) ಆಗಾಗ ತಮ್ಮ ವಿಭಿನ್ನವಾದ ಸ್ಟೈಲ್‌ ಮೂಲಕ ಕಾಣಿಸಿಕೊಳ್ಳುತ್ತಲೇ ಇರುತ್ತಾರೆ. ಭಾನುವಾರ (ಮಾ.17) ಮುಂಜಾನೆ ಮುಂಬೈ ವಿಮಾನ ನಿಲ್ದಾಣದಲ್ಲಿ ಪೋನಿ ಟೇಲ್‌ನಲ್ಲಿ (ಕುದುರೆ ಬಾಲದ ತುದಿಯಂತೆ ಸಣ್ಣ ಜುಟ್ಟು ಬಿಟ್ಟುಕೊಂಡಿರುವುದು) ಕಾಣಿಸಿಕೊಂಡರು ಶಾರುಖ್‌. ಶಾರುಖ್ ತನ್ನ ಐಷಾರಾಮಿ ಕಾರಿನಿಂದ ಹೊರಬಂದು ವಿಮಾನ ನಿಲ್ದಾಣದ ಪ್ರವೇಶ ಗೇಟ್‌ಗೆ ಹೋಗುತ್ತಿರುವುದನ್ನು ಕಾಣಬಹುದು. ಕಪ್ಪು ಟೀ ಶರ್ಟ್ ಮತ್ತು ಜೀನ್ಸ್ ಧರಿಸಿದ್ದರು, ಓವರ್ ಸೈಜ್‌ ಕೋಟ್ ಧರಿಸಿ ಶಾರುಖ್ ಸಖತ್‌ ಆಗಿಯೇ ಕಂಡರು. ಪ್ರಮುಖ ಹೈಲೈಟ್‌ ಅವರ ಪೋನಿಟೇಲ್‌ ಆಗಿತ್ತು.

ಶಾರುಖ್‌ ಇತ್ತೀಚೆಗೆ ರ್‍ಯಾಪರ್ ಬಾದ್‌ಶಾ ಅವರ ಸ್ಟುಡಿಯೋ ಆಲ್ಬಂ ʻಏಕ್ ಥಾ ರಾಜಾʼ ವೀಡಿಯೊ ನಿರೂಪಣೆಗೆ ಧ್ವನಿಯನ್ನು ನೀಡಿದ್ದಾರೆ. ವೀಡಿಯೊ 16 ಹಾಡುಳನ್ನು ಒಳಗೊಂಡಿದೆ.

ಶಾರುಖ್ ಇತ್ತೀಚೆಗೆ ʻಡಂಕಿʼ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಶಾರುಖ್ ಖಾನ್ ಜತೆಗೆ ಬೊಮನ್ ಇರಾನಿ, ತಾಪ್ಸೀ ಪನ್ನು, ವಿಕ್ಕಿ ಕೌಶಲ್, ವಿಕ್ರಮ್ ಕೊಚ್ಚರ್ ಮತ್ತು ಅನಿಲ್ ಗ್ರೋವರ್ ಮುಂತಾದ ನಟರು ನಟಿಸಿದ್ದಾರೆ. ಚಿತ್ರವು ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಮಿಶ್ರಪ್ರತಿಕ್ರಿಯೆ ಪಡೆಯಿತು.

ಇದನ್ನೂ ಓದಿ: Shah Rukh Khan: ಶಾರುಖ್‌ ಸಿಗ್ನೇಚರ್ ಭಂಗಿಗೆ ಪೋಸ್‌ ಕೊಟ್ಟ ‘ಶೇಪ್ ಆಫ್ ಯು’ ಹಾಡಿನ ಖ್ಯಾತ ಗಾಯಕ!

ಹ್ಯಾಟ್ರಿಕ್‌ ಸಿನಿಮಾ ಕೊಡ್ತಾರಂತೆ ಶಾರುಖ್‌!

ಮೂಲಗಳ ಪ್ರಕಾರ ಶಾರುಖ್‌ ಫ್ಯಾನ್ಸ್‌ ನಟನ ಹೊಸ ಸಿನಿಮಾ ಅಪ್‌ಡೇಟ್‌ಗಾಗಿ ಕಾದಿದ್ದಾರೆ. ಶಾರುಖ್‌ ಕೈಯಲ್ಲಿ ಕೆಲವು ಸ್ಕ್ರಿಪ್ಟ್‌ಗಳಿವೆ. ಶಾರುಖ್‌ ಮೂರು ಸಿನಿಮಾಗಳನ್ನು ಘೋಷಣೆ ಮಾಡುವ ನಿರೀಕ್ಷೆಯಿದೆ. ಫ್ಯಾನ್ಸ್‌ಗೆ ಸರ್‌ಪ್ರೈಸ್‌ ಕೊಡೋದು ಗ್ಯಾರಂಟಿ ಎಂದು ವರದಿಯಾಗಿದೆ.

Exit mobile version