Site icon Vistara News

Shah Rukh Khan: ಖ್ಯಾತ ಹಾಲಿವುಡ್‌ ನಟನಂತೆ ಕಂಡ ಶಾರುಖ್ ಖಾನ್; ವಿಡಿಯೊ ವೈರಲ್‌!

Shah Rukh Khan looks Like Johnny Depp

ಬೆಂಗಳೂರು: ಶಾರುಖ್ ಖಾನ್ ಹಾಗೂ ಮಗ ಅಬ್ರಾಮ್ ಖಾನ್ ಇಟಲಿಯಲ್ಲಿ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚಂಟ್‌ ಅವರ ಎರಡನೇ ವಿವಾಹ ಪೂರ್ವ ಸಮಾರಂಭದಲ್ಲಿ ರಣಬೀರ್ ಕಪೂರ್ ಅವರೊಂದಿಗೆ ಮಾತನಾಡುತ್ತಿರುವ ವಿಡಿಯೊ ವೈರಲ್‌ ಆಗಿದೆ. ಇದೀಗ ಚರ್ಚೆಯಲ್ಲಿರುವುದು ಶಾರುಖ್ ಅವರ ವಿಭಿನ್ನ ಲುಕ್‌. ಶಾರುಖ್‌ ಅವರ ಈ ಲುಕ್‌ ಹಾಲಿವುಡ್ ನಟ ಜಾನಿ ಡೆಪ್‌ಗೆ (Johnny Depp) ಹೋಲಿಸುತ್ತಿದ್ದಾರೆ ಫ್ಯಾನ್ಸ್‌.

ಶಾರುಖ್ ಖಾನ್ ಬಿಳಿ ಸ್ಕಾರ್ಫ್ ಜತೆ ನೀಲಿ ಸೂಟ್ ಧರಿಸಿದ್ದರು. ಜಾನಿ ಡೆಪ್ ನೆನಪಿಸುವಂತೆ ಇತ್ತು ಶಾರುಖ್‌ ಹೇರ್‌ಸ್ಟೈಲ್‌. ʻಪೈರೇಟ್ಸ್ ಆಫ್ ದಿ ಕೆರೆಬಿಯನ್’ ಚಿತ್ರದ ಮೂಲಕ ಜಗತ್ತಿನಾದ್ಯಂತ ಮನೆಮಾತಾಗಿದ್ದಾರೆ ಜಾನಿ ಡೆಪ್. ಇಟಲಿಯ ರೋಮ್‌ನಲ್ಲಿ ಇತ್ತೀಚೆಗೆ ನಡೆದ ಅಂಬಾನಿ ಪಾರ್ಟಿಯಲ್ಲಿ ಶಾರುಖ್ ಭಾಗಿಯಾಗಿದ್ದರು. ಕುಟಂಬದ ಜತೆ ಸಖತ್‌ ಎಂಜಾಯ್‌ ಮಾಡಿದ್ದಾರೆ ಶಾರುಖ್‌. ಮಾರ್ಚ್ ಆರಂಭದಲ್ಲಿ ಗುಜರಾತ್‌ನ ಜಾಮ್‌ನಗರದಲ್ಲಿ ಮೂರು ದಿನಗಳ ಅದ್ಧೂರಿ ವಿವಾಹ ಪೂರ್ವ ಆಚರಣೆಯ ನಂತರ, ಅಂಬಾನಿ ಕುಟುಂಬವು ಯುರೋಪ್‌ನಲ್ಲಿ ಕ್ರೂಸ್‌ ಪಾರ್ಟಿ ಆಯೋಜಿಸಿತ್ತು.

ಶಾರುಖ್, ರಣಬೀರ್ ಮತ್ತು ಅವರ ಕುಟುಂಬದವರಲ್ಲದೆ, ಸಲ್ಮಾನ್ ಖಾನ್, ಸಾರಾ ಅಲಿ ಖಾನ್, ಕರೀನಾ ಕಪೂರ್, ಇಬ್ರಾಹಿಂ ಅಲಿ ಖಾನ್, ಜಾಹ್ನವಿ ಕಪೂರ್, ಅನನ್ಯಾ ಪಾಂಡೆ, ಕರಣ್ ಜೋಹರ್, ದಿಶಾ ಪಟಾನಿ ಮತ್ತು ಕರಿಷ್ಮಾ ಕಪೂರ್ ಐಷಾರಾಮಿ ಕ್ರೂಸ್‌ ಪಾರ್ಟಿಯಲ್ಲಿ ಭಾಗಿಯಾಗಿದ್ದಾರೆ. 800 ಅತಿಥಿಗಳಿಗಾಗಿ ಐಷಾರಾಮಿ ಕ್ರೂಸ್‌ನಲ್ಲಿ (ಬೃಹತ್‌ ಹಡಗು) ಪಾರ್ಟಿ ಆಯೋಜಿಸಲಿದೆ ಎಂದು ವರದಿಯಾಗಿದೆ. ಇದು ಮೂರು ದಿನಗಳಲ್ಲಿ ಇಟಲಿಯಿಂದ ದಕ್ಷಿಣ ಫ್ರಾನ್ಸ್‌ತನಕ ಸುಮಾರು 4380 ಕಿ. ಮೀ ಚಲಿಸಲಿದೆ ಎನ್ನಲಾಗಿತ್ತು.

ಇದನ್ನೂ ಓದಿ: Shah Rukh Khan: ಮಗಳ ಜತೆ ಶಾರುಖ್ ಅಭಿನಯಿಸಲಿರುವ ಸಿನಿಮಾ ದೃಶ್ಯ ಲೀಕ್‌!

ವರದಿಯ ಪ್ರಕಾರ, ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಜುಲೈ 12 ರಂದು ಹಿಂದೂ ವೈದಿಕ ಸಮಾರಂಭದ ಪ್ರಕಾರ ಮದುವೆಯಾಗಲಿದ್ದಾರೆ. ವಿವಾಹ ಆಮಂತ್ರಣ ಪತ್ರಿಕೆಯ ಚಿತ್ರ ಬಹಿರಂಗಗೊಂಡಿದ್ದು ಅದರ ಪ್ರಕಾರ ಮೂರು ಸಮಾರಂಭಗಳನ್ನು ಆಯೋಜಿಸಲು ಸಿದ್ಧತೆ ನಡೆದಿದೆ.

ಜುಲೈ 12 ರಿಂದ ಮೂರು ದಿನಗಳ ಕಾಲ ವಿವಾಹ ಉತ್ಸವಗಳು ನಡೆಯಲಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. 12ರಂದು ರಂದು ವಿವಾಹದೊಂದಿಗೆ ಆಚರಣೆಗೆ ಚಾಲನೆ ಸಿಗಲಿದೆ. ಅಂದು ಅತಿಥಿಗಳು ಭಾರತೀಯ ಸಾಂಪ್ರದಾಯಿಕ ಉಡುಪನ್ನು ಧರಿಸುವ ನಿರೀಕ್ಷೆಯಿದೆ. ಮದುವೆಯ ನಂತರ, ಮುಂದಿನ ಕಾರ್ಯಕ್ರಮವು ಜುಲೈ 13 ರಂದು ಶುಭ ಆಶಿರ್ವಾದ್ ಅಥವಾ ದೈವಿಕ ಆಶೀರ್ವಾದ ಕಾರ್ಯಕ್ರಮ. ಅಂದು ಡ್ರೆಸ್ ಕೋಡ್ ಭಾರತೀಯ ಕ್ಯಾಶುವಲ್ ಡ್ರೆಸ್​ ಆಗಿದೆ. ಜುಲೈ 14 ರಂದು ಆಯೋಜಿಸಲಾಗುವ ವಿವಾಹ ಆರತಕ್ಷತೆ ಅಥವಾ ಮಂಗಲ್ ಉತ್ಸವ್ ನಡೆಯಲಿದೆ. ಅಂದು ಅತಿಥಿಗಳು ಭಾರತೀಯ ಚಿಕ್ ಉಡುಪನ್ನು ಧರಿಸುವ ನಿರೀಕ್ಷೆಯಿದೆ.

Exit mobile version