Site icon Vistara News

Shah Rukh Khan: ಶಾರುಖ್​ ಖಾನ್​ ಕಾಲು ಮುಟ್ಟಿ ನಮಸ್ಕರಿಸಿದ ಖ್ಯಾತ ನಿರ್ದೇಶಕ!

Shah Rukh Khan reacts as Atlee touches

ಬೆಂಗಳೂರು: ಭಾನುವಾರ ರಾತ್ರಿ (ಮಾ.10) ಮುಂಬೈನಲ್ಲಿ (Shah Rukh Khan) ಜೀ ಸಿನಿ ಅವಾರ್ಡ್ಸ್ ನೆರವೇರಿದೆ. ನಿರ್ದೇಶಕ ಅಟ್ಲಿ ಅವರಿಗೆ ಜವಾನ್‌ ಸಿನಿಮಾಗಾಗಿ ‘ಅತ್ಯುತ್ತಮ ನಿರ್ದೇಶಕ’ ಪ್ರಶಸ್ತಿ ದೊರಕಿದೆ. ಅವಾರ್ಡ್​ ಸ್ವೀಕರಿಸುವುದಕ್ಕೂ ಮುನ್ನ ಅಟ್ಲಿ ಅವರು ಶಾರುಖ್​ ಖಾನ್​ ಕಾಲು ಮುಟ್ಟಿ ನಮಸ್ಕಾರ ಮಾಡಿದ್ದಾರೆ. ಆ ಸಂದರ್ಭದ ವಿಡಿಯೊ ವೈರಲ್​ ಆಗಿದೆ. ವಿಜೇತರ ಹೆಸರನ್ನು ಘೋಷಿಸುತ್ತಿದ್ದಂತೆ, ಎಲ್ಲರೂ ಚಪ್ಪಾಳೆ ತಟ್ಟಿದರು. ಶಾರುಖ್ ಖಾನ್ ಪಕ್ಕದಲ್ಲಿ ಕುಳಿತಿದ್ದ ಕಾರಣ ನಟನ ಪಾದ ಮುಟ್ಟಿ ನಮಸ್ಕಾರ ಮಾಡಿದ್ದಾರೆ.

ಕಾಲು ಮುಟ್ಟಿ ನಮಸ್ಕಾರ ಮಾಡುವಾಗ ಶಾರುಖ್‌ ಮುಗುಳ್ನಕ್ಕು ಅಟ್ಲಿ ಅವರನ್ನು ತಡೆಯಲು ಯತ್ನಿಸಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. ನಂತರ ಅಟ್ಲಿ ಅವರಿಗೆ ಶಾರುಖ್‌ ಅಪ್ಪುಗೆ ನೀಡಿದ್ದಾರೆ. ಆ ಬಳಿಕ ಅಟ್ಲಿ ವೇದಿಕೆಯಲ್ಲಿ ಪ್ರಶಸ್ತಿಯನ್ನು ಪಡೆದರು. ಇವೆಂಟ್‌ಗಾಗಿ ಶಾರುಖ್ ಕಪ್ಪು ಬ್ಲೇಜರ್, ಮ್ಯಾಚಿಂಗ್ ಪ್ಯಾಂಟ್ ಮತ್ತು ಬೂಟುಗಳನ್ನು ಧರಿಸಿದ್ದರು.

ಅಲ್ಲು ಅರ್ಜುನ್‌ ಸಿನಿಮಾಗೆ ಅಟ್ಲೀ ಆ್ಯಕ್ಷನ್‌ ಕಟ್‌?

ಶಾರುಖ್ ಖಾನ್ ಅಭಿನಯದ ‘ಜವಾನ್’ ಚಿತ್ರದ ನಿರ್ದೇಶಕ ಅಟ್ಲೀ ಭಾರತೀಯ ಚಿತ್ರರಂಗದ ಅತ್ಯಂತ ಒಳ್ಳೆಯ ನಿರ್ದೇಶಕ ಎಂದೆನಿಸಿಕೊಂಡಿದ್ದಾರೆ. ಜವಾನ್‌ ಸಕ್ಸೆಸ್‌ ಬಳಿಕ ಹಲವಾರು ಸೂಪರ್‌ಸ್ಟಾರ್‌ಗಳು ಅಟ್ಲೀ ಜತೆ ಸಿನಿಮಾ ಮಾಡಲು ತುದಿಗಾಲಲ್ಲಿ ನಿಂತಿದ್ದಾರೆ. ಮೂಲಗಳ ಪ್ರಕಾರ, ಅಟ್ಲಿ ಅವರು ತಮ್ಮ ಮುಂದಿನ ನಿರ್ದೇಶನಕ್ಕಾಗಿ ಅಲ್ಲು ಅರ್ಜುನ್ ಅವರೊಂದಿಗೆ ಸಿನಿಮಾ ಮಾಡುತ್ತಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: Shah Rukh Khan: ಪತ್ನಿ ಜತೆ ಸ್ಟೆಪ್‌ ಹಾಕಿದ ಶಾರುಖ್ ಖಾನ್‌: ವಿಡಿಯೊ ವೈರಲ್‌!

ಚಿತ್ರ 2024ರಲ್ಲಿ ಸೆಟ್ಟೇರುವ ಸಾಧ್ಯತೆ ಇದೆ ಎನ್ನಲಾಗಿದೆ. ಹಿಂದೆಂದೂ ನೋಡಿರದ ಅವತಾರದಲ್ಲಿ ಅಲ್ಲು ಅರ್ಜುನ್ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ. ‘ಜವಾನ್’ ಚಿತ್ರಕ್ಕೆ ಸಂಗೀತ ಸಂಯೋಜಿಸಿದ ಅನಿರುದ್ಧ್ ರವಿಚಂದರ್ ಈ ಚಿತ್ರಕ್ಕೂ ಸಂಗೀತ ಸಂಯೋಜನೆ ಮಾಡಲಿದ್ದಾರೆ ಎನ್ನಲಾಗಿದೆ.

ಹ್ಯಾಟ್ರಿಕ್‌ ಸಿನಿಮಾ ಕೊಡ್ತಾರಂತೆ ಶಾರುಖ್‌!

ಮೂಲಗಳ ಪ್ರಕಾರ ಶಾರುಖ್‌ ಫ್ಯಾನ್ಸ್‌ ನಟನ ಹೊಸ ಸಿನಿಮಾ ಅಪ್‌ಡೇಟ್‌ಗಾಗಿ ಕಾದಿದ್ದಾರೆ. ಶಾರುಖ್‌ ಕೈಯಲ್ಲಿ ಕೆಲವು ಸ್ಕ್ರಿಪ್ಟ್‌ಗಳಿವೆ. ಶಾರುಖ್‌ ಮೂರು ಸಿನಿಮಾಗಳನ್ನು ಘೋಷಣೆ ಮಾಡುವ ನಿರೀಕ್ಷೆಯಿದೆ. ಫ್ಯಾನ್ಸ್‌ಗೆ ಸರ್‌ಪ್ರೈಸ್‌ ಕೊಡೋದು ಗ್ಯಾರಂಟಿ ಎಂದು ವರದಿಯಾಗಿದೆ.

Exit mobile version