Site icon Vistara News

Shah Rukh Khan: ಮಗಳ ಜತೆ ಶಾರುಖ್ ಅಭಿನಯಿಸಲಿರುವ ಸಿನಿಮಾ ದೃಶ್ಯ ಲೀಕ್‌!

Shah Rukh Khan shooting for King in Spain

ಬೆಂಗಳೂರು: ಸುಜೋಯ್‌ ಘೋಷ್‌ ಮತ್ತು ಸಿದ್ಧಾರ್ಥ್‌ ಆನಂದ್‌ ನಿರ್ದೇಶನದ ʼಕಿಂಗ್‌ʼ ಟೈಟಲ್‌ನ ಸಿನಿಮಾದಲ್ಲಿ ಶಾರುಖ್‌ (Shah Rukh Khan) ಹಾಗೂ ಮಗಳು ಸುಹಾನಾ ಖಾನ್ ಅಭಿನಯಿಸುತ್ತಿದ್ದಾರೆ. 2023ರಲ್ಲಿ ಬ್ಯಾಕ್‌ ಟು ಬ್ಯಾಕ್‌ ಹಿಟ್‌ ಸಿನಿಮಾಗಳನ್ನು ನೀಡಿದ ಬಳಿಕ ಶಾರುಖ್‌ ʻಕಿಂಗ್‌ʼ ಸಿನಿಮಾ ಮೇಲೆ ಗಮನ ಹರಿಸಿದ್ದಾರೆ. ಇದೀಗ ಶಾರುಖ್‌ ಸ್ಪೇನ್‌ನಲ್ಲಿ ಚಿತ್ರದ ಚಿತ್ರೀಕರಣದಲ್ಲಿದ್ದಾರೆ ಎಂದು ವರದಿಯಾಗಿದೆ. ಜತೆಗೆ ಶೂಟ್‌ ಮಾಡುತ್ತಿರುವ ದೃಶ್ಯವೊಂದು ಲೀಕ್‌ ಕೂಡ ಆಗಿದೆ. ಈ ಪೋಟೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ಚಿತ್ರದಲ್ಲಿ, ಶಾರುಖ್ ಗುಂಪಿನಲ್ಲಿ ಸಂಭಾಷಣೆಯಲ್ಲಿ ಮುಳುಗಿರುವುದನ್ನು ಕಾಣಬಹುದು. ಲೀಕ್‌ ಆದ ಫೋಟೊದಲ್ಲಿ ನೀಲಿ ಸೂಟ್ ಧರಿಸಿ ಕಾಣಿಸಿಕೊಂಡಿದ್ದಾರೆ. ಆದರೆ ಚಿತ್ರತಂಡ ಈ ಬಗ್ಗೆ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲ. ಕಳೆದ ವಾರ ಸುಹಾನಾ ಜತೆ ಶಾರುಖ್ ಮುಂಬೈನಿಂದ ತೆರಳಿದ್ದು ಕುತೂಹಲ ಮೂಡಿಸಿತ್ತು. ಮೇ 30 ರಂದು, ಶಾರುಖ್ ಐಪಿಎಲ್ ಟ್ರೋಫಿಯನ್ನು ಗೆದ್ದ ನಂತರ ಮಗಳ ಜತೆ ಮುಂಬೈನ ಕಲಿನಾ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದರು.

ಆರ್ಯನ್ ಮತ್ತು ಸುಹಾನಾ ವಿಮಾನ ನಿಲ್ದಾಣದಲ್ಲಿ ಒಂದೇ ಕಾರಿನಲ್ಲಿ ಬಂದಿರುವುದು ಕಂಡುಬಂದಿತ್ತು. ಅವರೊಂದಿಗೆ ಗೌರಿ ಖಾನ್, ಪೂಜಾ ಮತ್ತು ಅವರ ಇಡೀ ತಂಡವಿತ್ತು. ನಟ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚಂಟ್‌ ಅವರ ವಿವಾಹಪೂರ್ವ ಕ್ರೂಸ್ ಪಾರ್ಟಿಗೆ ಹೋಗುತ್ತಿದ್ದಾರೆ ಎನ್ನಲಾಗಿತ್ತು. ಆದರೀಗ ಸಿನಿಮಾ ಶೂಟಿಂಗ್‌ಗೆ ಹೋಗಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: Shah Rukh Khan : ಶಾರುಖ್​ ಖಾನ್ ಆರೋಗ್ಯದಲ್ಲಿ ಏರುಪೇರು; ಆಸ್ಪತ್ರೆಗೆ ದಾಖಲು

ಈ ಚಿತ್ರವನ್ನು ಶಾರುಖ್ ಅವರ ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಮತ್ತು ಅವರ ಪಠಾಣ್ ನಿರ್ದೇಶಕ ಸಿದ್ಧಾರ್ಥ್ ಆನಂದ್ ಅವರ ಮಾರ್ಫ್ಲಿಕ್ಸ್ ಪಿಕ್ಚರ್ಸ್ ಸಹ-ನಿರ್ಮಾಣ ಮಾಡಿದ್ದಾರೆ.

ಇನ್ನು ಶಾರುಖ್‌ ಮಗಳು ಕಳೆದ ವರ್ಷ ಬಿಡುಗಡೆಯಾದ ʻದಿ ಆರ್ಚೀಸ್ʼ (The Archies) ಸಿನಿಮಾ ಮೂಲಕ ಬಣ್ಣದ ಲೋಕ ಪ್ರವೇಶಿಸಿದರು. ಜೋಯಾ ಅಖ್ತರ್ ಮತ್ತು ರೀಮಾ ಕಾಗ್ತಿ ನಿರ್ದೇಶನದ ‘ದಿ ಆರ್ಚೀಸ್’ ಸಿನಿಮಾದಲ್ಲಿ ಸುಹಾನಾ ಜತೆಗೆ ಅಮಿತಾಭ್‌ ಬಚ್ಚನ್ ಮತ್ತು ಜಯಾ ಬಚ್ಚನ್ ಅವರ ಮೊಮ್ಮಗ ಅಗಸ್ತ್ಯ ನಂದಾ ಕೂಡ ನಟಿಸಿದ್ದರು. ಈ ವೇಳೆ ಅವರಿಬ್ಬರು ಡೇಟಿಂಗ್ ನಡೆಸುತ್ತಿದ್ದರು ಎನ್ನುವ ಗುಸುಗುಸು ಹಬ್ಬಿತ್ತು. ಆದರೆ ಈ ಬಗ್ಗೆ ಇನ್ನೂ ಸ್ಪಷ್ಟನೆ ಸಿಕ್ಕಿಲ್ಲ. ಸುಹಾನಾ ಖಾನ್‌ ಅಭಿನಯದ ಮೊದಲ ಚಿತ್ರ ‘ದಿ ಆರ್ಚೀಸ್’ ಒಟಿಟಿಯಲ್ಲಿ ತೆರೆಕಂಡು ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿತ್ತು.

Exit mobile version