Site icon Vistara News

Shah Rukh Khan: ರಜನಿಕಾಂತ್‌ ದಂಪತಿಗೆ ಕೈ ಮುಗಿದು, ಅಮಿತಾಭ್‌- ಜಯಾ ಜೋಡಿಯ ಪಾದ ಮುಟ್ಟಿ ನಮಸ್ಕರಿಸಿದ ಶಾರುಖ್‌ ಖಾನ್‌!

Shah Rukh Khan touches Amitabh Jaya Bachchan feet, greets Rajinikanth

ಬೆಂಗಳೂರು: ಮುಂಬೈನಲ್ಲಿ ನಡೆದ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಮದುವೆಯಲ್ಲಿ ಅಮಿತಾಭ್‌ ಬಚ್ಚನ್, ಜಯಾ ಬಚ್ಚನ್, ರಜನಿಕಾಂತ್ ಮತ್ತು ಶಾರುಖ್ ಖಾನ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಭಾಗವಹಿಸಿದ್ದರು. ಜುಲೈ 12 ರಂದು ಶುಕ್ರವಾರ ಮುಂಬೈನ ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ವಿವಾಹವಾದರು. ಸೆಲೆಬ್ರಿಟಿಗಳು ಪರಸ್ಪರ ಶುಭಾಶಯ ಕೋರುವ, ನೃತ್ಯ ಮಾಡುವ ಹಾಗೂ ಪರಸ್ಪರ ಸಂಭಾಷಣೆ ನಡೆಸುವ ವಿಡಿಯೊಗಳು ವೈರಲ್‌ ಆಗಿವೆ. ಇದೀಗ ಶಾರುಖ್‌ (Shah Rukh Khan) ಅವರು ಅಂಬಾನಿ ಅವರ ಮದುವೆಯಲ್ಲಿ ಅಮಿತಾಭ್‌ ಬಚ್ಚನ್, ಜಯಾ ಬಚ್ಚನ್ ಅವರ ಪಾದಗಳಿಗೆ ನಮಸ್ಕರಿಸಿರುವ ವಿಡಿಯೊ ಭಾರಿ ವೈರಲ್‌ ಆಗುತ್ತಿದೆ.

ಕಾರ್ಡಶಿಯನ್ಸ್ ಮತ್ತು ಜಾನ್ ಸೆನಾ ಭಾರತೀಯ ಉಡುಗೆಯಿಂದ ಗಮನ ಸೆಳೆದರು, ಶಾರುಖ್ ಖಾನ್ ಅವರು ಇತರ ಅತಿಥಿಗಳೊಂದಿಗೆ ಸಂವಾದ ನಡೆಸಿರುವುದು ಸಹ ಗಮನ ಸೆಳೆದವು. ಈವೆಂಟ್‌ನ ಹಲವಾರು ವೀಡಿಯೊಗಳು ವೈರಲ್‌ ಆಗಿವೆ. ಶಾರುಖ್‌ ಈ ವೇಳೆ ಅಮಿತಾಭ್‌ ಬಚ್ಚನ್ ಮತ್ತು ರಜನಿಕಾಂತ್ ಅವರೊಂದಿಗೆ ಅತ್ಯಂತ ಗೌರವಯುತವಾಗಿ ನಡೆದುಕೊಂಡ ವಿಡಿಯೊ ವೈರಲ್‌ ಆಗಿದೆ. ಮೊದಲಿಗೆ ರಜನಿಕಾಂತ್‌ ಅವರಿಗೆ ಗೌರವ ನೀಡಿ, ಬಳಿಕ ಅಮಿತಾಭ್‌ ಮತ್ತು ಜಯಾ ಬಚ್ಚನ್ ಅವರ ಪಾದಗಳನ್ನು ಸ್ಪರ್ಶಿಸಿ ಆಶೀರ್ವಾದ ಪಡೆದರು. ರಜನಿಕಾಂತ್ ಮತ್ತು ಅವರ ಪತ್ನಿಗೆ ಕೈ ಜೋಡಿಸಿ ನಮಸ್ಕರಿಸಿದರು ಶಾರುಖ್‌. ಆದಿತ್ಯ ಠಾಕ್ರೆ ಮತ್ತು ಸಚಿನ್ ತೆಂಡೂಲ್ಕರ್ ಅವರಿಗೂ ಶೇಕ್‌ ಹ್ಯಾಂಡ್‌ ಕೊಟ್ಟಿದ್ದಾರೆ.

Shiva Rajkumar: ಶಿವರಾಜ್‌ಕುಮಾರ್‌ ಅಭಿನಯದ ʻ45ʼ ಸಿನಿಮಾದ ಕ್ಯಾರೆಕ್ಟರ್ ಟೀಸರ್ ಬಿಡುಗಡೆ ಮಾಡಿದ ರಿಷಬ್ ಶೆಟ್ಟಿ!ಇದನ್ನೂ ಓದಿ:

ಕಾರ್ಯಕ್ರಮಕ್ಕಾಗಿ, ಶಾರುಖ್ ಹಸಿರು ಪಠಾನಿ ಶೆರ್ವಾನಿ ಶೈಲಿಯ ಸೆಟ್ ಅನ್ನು ಧರಿಸಿದ್ದರು. ಮಣಿಗಳಿಂದ ಕೂಡಿದ ನೆಕ್‌ಪೀಸ್ ಧರಿಸಿದ್ದರು. ಅಮಿತಾಭ್‌ ಸಾಂಪ್ರದಾಯಿಕ ಉಡುಪಿನಲ್ಲಿ ಕಾಣಿಸಿಕೊಂಡರು. ಜಯಾ ಬಣ್ಣಬಣ್ಣದ ಸೀರೆಯನ್ನು ಧರಿಸಿದ್ದರು. ರಜನಿಕಾಂತ್ ಸಾಂಪ್ರದಾಯಿಕ ಬಿಳಿ ಉಡುಪಿನಲ್ಲಿ ಕಾಣಿಸಿಕೊಂಡರೆ, ಲತಾ ಕೇಸರಿ ಮತ್ತು ಹಸಿರು ಸೀರೆಯನ್ನು ಧರಿಸಿದ್ದರು.

ಜುಲೈ 13 ರಂದು ‘ಶುಭ್ ಆಶೀರ್ವಾದ’ ಮತ್ತು ಜುಲೈ 14 ರಂದು ‘ಮಂಗಲ್ ಉತ್ಸವ’ ಅಥವಾ ಆರತಕ್ಷತೆ ನಡೆಯಲಿದೆ. ಜುಲೈ 15 ರಂದು ಮುಂಬೈನಲ್ಲಿ ಮತ್ತೊಂದು ಆರತಕ್ಷತೆ ಪಾರ್ಟಿ ನಡೆಯಲಿದೆ.

ಗಣ್ಯರ ದಂಡೇ ಉಪಸ್ಥಿತಿ

ಅನಂತ್‌ ಅಂಬಾನಿ ಮದುವೆಯಲ್ಲಿ ನಟ-ನಟಿಯರು, ಕ್ರಿಕೆಟಿಗರು, ಬೇರೆ ದೇಶಗಳ ನಾಯಕರಿಂದ ಹಿಡಿದು ಸಾವಿರಾರು ಗಣ್ಯರು, ಸೆಲೆಬ್ರಿಟಿಗಳು ಪಾಲ್ಗೊಂಡಿದ್ದರು. ಮಹೇಂದ್ರ ಸಿಂಗ್‌ ಧೋನಿ, ಅಮಿತಾಭ್‌ ಬಚ್ಚನ್‌, ಆಲಿಯಾ ಭಟ್‌, ರಣವೀರ್‌ ಸಿಂಗ್‌, ರಣಬೀರ್‌ ಕಪೂರ್‌, ಅನನ್ಯಾ ಪಾಂಡೆ, ರಜನಿಕಾಂತ್‌, ಮಹೇಶ್‌ ಬಾಬು, ಹಾರ್ದಿಕ್‌ ಪಾಂಡ್ಯ, ಐಶ್ವರ್ಯಾ ರೈ, ದಿಶಾ ಪಟಾಣಿ, ಬ್ರಿಟನ್‌ ಮಾಜಿ ಪ್ರಧಾನಿಗಳಾದ ಬೋರಿಸ್‌ ಜಾನ್ಸನ್‌, ಟೋನಿ ಬ್ಲೇರ್‌ ಸೇರಿ ಹಲವು ಗಣ್ಯರು ಪಾಲ್ಗೊಂಡಿದ್ದರು.

5 ಸಾವಿರ ಕೋಟಿ ರೂ. ಖರ್ಚು

ಅದ್ಧೂರಿ ವಿವಾಹ ಸಮಾರಂಭಕ್ಕೆ ಅಂದಾಜು ವೆಚ್ಚ 4,000ರಿಂದ 5000 ಕೋಟಿ ರೂ. ಎನ್ನಲಾಗಿದೆ. ಇದು ಅವರ ನಿವ್ವಳ ಆದಾಯದ ಶೇ. 0.5ರಷ್ಟು ಮಾತ್ರ! ವರದಿಗಳ ಪ್ರಕಾರ ಮುಖೇಶ್ ಅಂಬಾನಿ ಅವರ ನಿವ್ವಳ ಆದಾಯ ಮೌಲ್ಯವು 7.65 ಲಕ್ಷ ಕೋಟಿ ರೂ. ಆಗಿದೆ. ಮಾರ್ಚ್‌ನಲ್ಲಿ ಮದುವೆಯ ಪೂರ್ವಭಾವಿ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆದಿತ್ತು. ಅಂಬಾನಿ ಕುಟುಂಬದ ವಿವಾಹ ಕಾರ್ಯಕ್ರಮದಲ್ಲಿ ಜಾಗತಿಕ ಗಾಯನ ಐಕಾನ್‌ಗಳಾದ ಜಸ್ಟಿನ್ ಬೀಬರ್, ರಿಹಾನ್ನಾ, ದಿಲ್ಜಿತ್ ದೋಸಾಂಜ್ ಸೇರಿದಂತೆ ಹಾಲಿವುಡ್‌-ಬಾಲಿವುಡ್‌ನ ಅನೇಕ ಸೆಲೆಬ್ರಿಟಿಗಳು ಪಾಲ್ಗೊಂಡಿದ್ದರು.

ವಿವಾಹ ಪೂರ್ವ ಕಾರ್ಯಕ್ರಮಗಳೂ ಅದ್ಧೂರಿಯಾಗಿ ನಡೆದವು. ಭಾರತದ ಜಾಮ್‌ನಗರದಲ್ಲಿರುವ ಅಂಬಾನಿ ಎಸ್ಟೇಟ್‌ನಲ್ಲಿ ಮಾರ್ಚ್ 1 ರಿಂದ 3 ರವರೆಗೆ ಮೊದಲ ವಿವಾಹ ಪೂರ್ವ ಆಚರಣೆಯು 1,200 ಅತಿಥಿಗಳೊಂದಿಗೆ ನಡೆಯಿತು, ಇದರಲ್ಲಿ ಬಿಲ್ ಗೇಟ್ಸ್, ಹಿಲರಿ ಕ್ಲಿಂಟನ್, ಜೇರೆಡ್ ಕುಶ್ನರ್, ಇವಾಂಕಾ ಟ್ರಂಪ್, ಕಾರ್ಲಿ ಕ್ಲೋಸ್ ಮತ್ತು ಮಾರ್ಕ್ ಜುಕರ್‌ಬರ್ಗ್ ಸೇರಿದಂತೆ 1,200 ಅತಿಥಿಗಳು ಪಾಲ್ಗೊಂಡಿದ್ದರು. ಈ ಸಮಾರಂಭದಲ್ಲಿ ರಿಹಾನ್ನಾ ಅವರ ಪ್ರದರ್ಶನಕ್ಕೆ 6 ರಿಂದ 9 ಮಿಲಿಯನ್ ಡಾಲರ್ ವೆಚ್ಚವಾಗಿದೆ ಎನ್ನಲಾಗಿದೆ.



Exit mobile version