ಬೆಂಗಳೂರು: ಸೋನಾಕ್ಷಿ ಸಿನ್ಹಾ (Sonakshi Sinha) ಮತ್ತು ಜಹೀರ್ ಇಕ್ಬಾಲ್ ಇಂದು (ಜೂನ್ 23)ರಂದು ಮದುವೆಯಾಗಲಿದ್ದಾರೆ. ಮದುವೆ ದಿನಾಂಕ (Zaheer Iqbal) ಖಾತ್ರಿಯಾಗುತ್ತಿದ್ದಂತೆ ಕೆಲ ನೆಟ್ಟಿಗರು, ಹಿಂದೂ ನಟಿಯರು ಮುಸ್ಲಿಂ ನಟರನ್ನು (Muslim Actress) ಮದುಗೆ ಆಗೋದೇಕೆ? ಇದು ಲವ್ ಜಿಹಾದ್ (Love Jihad) ಎಂಬ ಮಾತುಗಳನ್ನಾಡುತ್ತಿದ್ದಾರೆ. ಇದರ ಬೆನ್ನಲ್ಲೇ ಸೋನಾಕ್ಷಿ ಸಿನ್ಹಾ ಮದುವೆಯಾದ ಬಳಿಕ ಇಸ್ಲಾಂಗೆ ಮತಾಂತರಗೊಳ್ಳುತ್ತಾರೆ ಎಂಬ ಸುದ್ದಿ ವೈರಲ್ ಆಗಿತ್ತು. ಇದೀಗ ಈ ಬಗ್ಗೆ ಜಹೀರ್ ಇಕ್ಬಾಲ್ ತಂದೆ ಇಕ್ಬಾಲ್ ರತಾನ್ಸಿ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ಇಕ್ಬಾಲ್ ರತಾನ್ಸಿ ಮಾತನಾಡಿ ʻʻಸೋನಾಕ್ಷಿ ಸಿನ್ಹಾ ಮತಾಂತರಗೊಳ್ಳುತ್ತಿಲ್ಲ. ನಾನು ಮಾನವೀಯತೆಯನ್ನು ನಂಬುತ್ತೇನೆ. ಹಿಂದೂಗಳು ದೇವರನ್ನು ಭಗವಾನ್ ಮತ್ತು ಮುಸ್ಲಿಮರು ಅಲ್ಲಾಹ್ ಎಂದು ಕರೆಯುತ್ತಾರೆ. ಆದರೆ ಕೊನೆಯಲ್ಲಿ ನಾವೆಲ್ಲರೂ ಮನುಷ್ಯರು. ನನ್ನ ಆಶೀರ್ವಾದ ಜಹೀರ್ ಮತ್ತು ಸೋನಾಕ್ಷಿ ಅವರ ಮೇಲಿದೆʼʼಎಂದಿದ್ದಾರೆ. ಸೋನಾಕ್ಷಿ ತಾನು ಪ್ರೀತಿಸುವ ಮುಸ್ಲಿಂ ವ್ಯಕ್ತಿಯನ್ನು ಮದುವೆಯಾಗುತ್ತಿದ್ದಾರೆ.
ಬಾಲಿವುಡ್ ನಟಿ (Bollywood Actress) ಸೋನಾಕ್ಷಿ ಸಿನ್ಹಾ (Sonakshi Sinha) ಅವರು ಮುಸ್ಲಿಂ ಯುವಕ ಜಹೀರ್ ಇಕ್ಬಾಲ್ (Zaheer Iqbal) ಅವರ ಜತೆ ಮದುವೆಯಾಗುತ್ತಿರುವುದರ ಬಗ್ಗೆ ಅವರ ಅಭಿಮಾನಿಗಳಲ್ಲಿ ಮಿಶ್ರ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಮುಂಬೈನಲ್ಲಿ ಸೋನಾಕ್ಷಿ ಸಿನ್ಹಾ ಅವರು ಜೂನ್ 23ರಂದು ಮದುವೆಯಾಗಲಿದ್ದು, ಶುಕ್ರವಾರ (ಜೂನ್ 21) ಮೆಹಂದಿ ಶಾಸ್ತ್ರವೂ ಅದ್ಧೂರಿಯಾಗಿ ನೆರವೇರಿತ್ತು.
ಇದನ್ನೂ ಓದಿ: Sonakshi Sinha Wedding: ಸೋನಾಕ್ಷಿ ಮದುವೆ ಬಗ್ಗೆ ಅಸಮಾಧಾನ ಇತ್ತು, ಆದರೆ…: ಶತ್ರುಘ್ನ ಸಿನ್ಹಾ ವಿವರಣೆ
ಮುಸ್ಲಿಂ ಯುವಕನ ಜತೆ ಮದುವೆಯಾಗುತ್ತಿರುವುದಕ್ಕೆ, ಅದರಲ್ಲೂ ಮದುವೆ ದಿನಾಂಕವನ್ನೂ ಹೇಳದಿರುವುದಕ್ಕೆ ಮೊದಲು ನಟ, ಸೋನಾಕ್ಷಿ ಸಿನ್ಹಾ ಅವರ ತಂದೆ ಶತ್ರುಘ್ನ ಸಿನ್ಹಾ ಅವರು ಇದಕ್ಕೂ ಮೊದಲು ಅಸಮಾಧಾನ ವ್ಯಕ್ತಪಡಿಸಿದ್ದರು. ಶತ್ರುಘ್ನ ಸಿನ್ಹಾ, ನಟಿಯ ತಾಯಿ ಹಾಗೂ ಸಹೋದರ ಕೂಡ ಭಾಗಿಯಾಗುವುದಿಲ್ಲ ಎಂದು ಹೇಳಲಾಗಿತ್ತು. ಆದರೆ, ವದಂತಿಗಳಿಗೆಲ್ಲ ಶತ್ರುಘ್ನ ಸಿನ್ಹಾ ಅವರು ತೆರೆ ಎಳೆದಿದ್ದಾರೆ. “ಮೊದಲು ಸಣ್ಣಪುಟ್ಟ ಗೊಂದಲಗಳು ಸೃಷ್ಟಿಯಾಗಿದ್ದವು. ಈಗ ಎಲ್ಲವೂ ಬಗೆಹರಿದಿದೆ. ಜೂನ್ 23ರಂದು ನಾವೆಲ್ಲ ಮದುವೆಗೆ ಹೋಗಲಿದ್ದೇವೆ” ಎಂದು ತಿಳಿಸಿದ್ದಾರೆ.
ಕಳೆದ ವಾರವಷ್ಟೇ ಸೋನಾಕ್ಷಿ ಅವರು ತಮ್ಮ ಬಹುಕಾಲದ ಗೆಳೆಯ ಜಹೀರ್ ಇಕ್ಬಾಲ್ ಅವರನ್ನು ವರಿಸುತ್ತಿದ್ದಾರೆ ಎಂಬ ಸುದ್ದಿ ಹೊರಬಿದ್ದಿದ್ದು, ಬಳಿಕ ಇದನ್ನು ಮದುವೆಯ ಆಮಂತ್ರಣವು ದೃಢಪಡಿಸಿತು. ಸೋನಾಕ್ಷಿ ಏಳು ವರ್ಷಗಳಿಂದ ಜಹೀರ್ ಜೊತೆ ಡೇಟಿಂಗ್ ನಡೆಸುತ್ತಿದ್ದಾರೆ. ಮದುವೆಯ ವದಂತಿಗಳಿಗೆ ಮೊದಲ ಪ್ರತಿಕ್ರಿಯೆ ನೀಡಿದ ಶತ್ರುಘ್ನ ಅವರು ಮದುವೆಯ ಬಗ್ಗೆ ತಿಳಿದಿರಲಿಲ್ಲ ಎಂದು ಒಪ್ಪಿಕೊಂಡರು. ಮಾತ್ರವಲ್ಲದೇ ಅವರು ಇದರಿಂದ ಅಸಮಾಧಾನಗೊಂಡಿರುವುದು ಅವರ ಹೇಳಿಕೆಯಿಂದ ತಿಳಿದು ಬಂದಿತ್ತು. ನಂತರ ಎಲ್ಲವೂ ಸರಿಹೋಗಿದೆ.