ಬೆಂಗಳೂರು: ಸೋನಾಕ್ಷಿ ಸಿನ್ಹಾ (Sonakshi Sinha) ಮತ್ತು ಜಹೀರ್ ಇಕ್ಬಾಲ್ ( Zaheer Iqbal) ಜೂನ್ 23 ರಂದು 7 ವರ್ಷಗಳ ಡೇಟಿಂಗ್ ನಂತರ ವಿವಾಹವಾದರು. ದಂಪತಿ ಇತ್ತೀಚೆಗೆ ಮದುವೆಯಾದ ಕೆಲವು ದಿನಗಳ ನಂತರ ಆಸ್ಪತ್ರೆಗೆ ಭೇಟಿ ನೀಡಿದ್ದರು. ಇದಾದ ಬಳಿಕ ಸೋನಾಕ್ಷಿ ಗರ್ಭಿಣಿ ಎಂಬ ವದಂತಿ ಹಬ್ಬಿತ್ತು. ಇದರ ಬಗ್ಗೆ ಸೋನಾಕ್ಷಿ ಈಗ ಮೊದಲ ಬಾರಿಗೆ ಮೌನ ಮುರಿದಿದ್ದಾರೆ. `ಮದುವೆಯಾದ ಮೇಲೆ ಒಂದೇ ಒಂದು ಬದಲಾವಣೆಯಾಗಿದೆ. ಅದೇನೆಂದರೆ, ನಾನು ಈಗ ಆಸ್ಪತ್ರೆಗೆ ಹೋಗಲು ಸಾಧ್ಯವಿಲ್ಲ, ಏಕೆಂದರೆ ನಾನು ಹೊರಬಂದ ತಕ್ಷಣ, ಜನರು ನಾನು ಗರ್ಭಿಣಿ ಎಂದು ಭಾವಿಸುತ್ತಾರೆ ಎಂದು ಸ್ವಲ್ಪ ಅಸಮಾಧಾನದಿಂದಲೇ’ ಉತ್ತರಿಸಿದ್ದಾರೆ.
ತಮ್ಮ ಮುಂಬರುವ ಚಿತ್ರ ʻಕಾಕುಡ ಪ್ರಚಾರದಲ್ಲಿ ನಟಿ ಇದ್ದಾರೆ. ಈ ವೇಳೆ ಮಾಧ್ಯಮದ ಜತೆ ಮಾತನಾಡಿ ʻʻಮದುವೆಯಾದ ಬಳಿಕ ಜೀವನ ಚೆನ್ನಗಿದೆ. ಕೆಲಸಕ್ಕೆ ಮತ್ತೆ ಮರಳಿದ್ದೇನೆ. ತುಂಬ ಸಂತೋಷವಾಗಿದೆ. ನು ಈಗ ಆಸ್ಪತ್ರೆಗೆ ಹೋಗಲು ಸಾಧ್ಯವಿಲ್ಲ, ಏಕೆಂದರೆ ನಾನು ಹೊರಬಂದ ತಕ್ಷಣ, ಜನರು ನಾನು ಗರ್ಭಿಣಿ ಎಂದು ಭಾವಿಸುತ್ತಾರೆʼʼ ಎಂದು ಸ್ವಲ್ಪ ಅಸಮಾಧಾನದಿಂದಲೇ ಉತ್ತರಿಸಿದ್ದಾರೆ.
ಶತ್ರುಘ್ನ ಸಿನ್ಹಾ ಅವರು ಜ್ವರದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಹೀಗಾಗಿ ಸೋನಾಕ್ಷಿ ಮತ್ತು ಜಹೀರ್ ಆಸ್ಪತ್ರೆಗೆ ಭೇಟಿ ನೀಡಿದ್ದರು ಎಂದು ವರದಿಯಾಗಿದೆ. ಶತ್ರುಘ್ನ ಅವರು ಮಗಳ ಮದುವೆಯಲ್ಲಿ ಚೆನ್ನಾಗಿ ಓಡಾಟ ನಡೆಸಿದ್ದರೂ ಗುಟ್ಟಾದ ಮದುವೆ ಮತ್ತು ಟೀಕೆಗಳಿಂದ ನಟ ತುಂಬಾ ನೊಂದುಕೊಂಡಿದ್ದರು. ಇದರಿಂದ ಮದುವೆಯಾಗುತ್ತಿದ್ದಂತೆಯೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಇದನ್ನೂ ಓದಿ: Dolly Dhananjay: ಐತಿಹಾಸಿಕ ‘ಹಲಗಲಿ’ ಸಿನಿಮಾದಲ್ಲಿ ‘ಡಾಲಿ’ ಧನಂಜಯ ಹೀರೊ!
ಸೋನಾಕ್ಷಿ ಸಿನ್ಹಾ ಮತ್ತು ಜಹೀರ್ ಇಕ್ಬಾಲ್ ಅವರು ಜೂನ್ 23ರಂದು ವಿವಾಹವಾದರು. ಅವರ ಮದುವೆಯ ಪೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಅನೇಕರು ಅವರ ಜೋಡಿ ನೋಡಿ ಸ್ವರ್ಗದಲ್ಲಿ ಮಾಡಿದ ಪರಿಪೂರ್ಣ ಜೋಡಿ ಎಂದು ಹೊಗಳಿದ್ದಾರೆ. ಆದರೆ ಇವರಿಬ್ಬರು ಅಂತರ್ಧಮೀಯ ವಿವಾಹವಾಗಿದ್ದರಿಂದ ಈ ಬಗ್ಗೆ ಟೀಕೆಗಳು ವ್ಯಕ್ತವಾಗಿದ್ದವು. ಇದಕ್ಕೆ ಸೋನಾಕ್ಷಿ ಅವರ ತಂದೆ ಶತ್ರುಘ್ನ ಸಿನ್ಹಾ ಕೂಡ ಅಸಮಾಧಾನಗೊಂಡಿದ್ದರು. ಅವರ ಮದುವೆಯಿಂದ ಅವರ ಕುಟುಂಬದವರು ಸಂತೋಷವಾಗಿಲ್ಲ ಎನ್ನಲಾಗಿತ್ತು. ಆದರೆ ಆ ಬಳಿಕ ಶತ್ರುಘ್ನ ಸಿನ್ಹಾ ಅವರು ಈ ಮದುವೆಗೆ ಒಪ್ಪಿಗೆ ಸೂಚಿಸಿದ್ದರು. ಈ ದಂಪತಿ ಮದುವೆಗೂ ಮುನ್ನ 7 ವರ್ಷಗಳ ಕಾಲ ಸಂಬಂಧದಲ್ಲಿದ್ದರು. ಹಾಗಾಗಿ ಇವರು ಲಿವಿಂಗ್ ಟು ಗೇದರ್ ರಿಲೆಷನ್ಶಿಪ್‌ನಲ್ಲಿದ್ದರು ಎಂದು ಅನೇಕರು ಊಹಿಸಿದ್ದರು. ಆದರೆ ನಟಿ ಈ ವದಂತಿಯನ್ನು ಅಲ್ಲಗೆಳೆದಿದ್ದು, ತಾನು ಹೆತ್ತವರೊಂದಿಗೆ ವಾಸಿಸುತ್ತಿರುವುದಾಗಿ ತಿಳಿಸುವ ಮೂಲಕ ಈ ವದಂತಿಗೆ ತೆರೆ ಎಳೆದಿದ್ದರು.