Site icon Vistara News

Shah Rukh Khan: ಬಟ್ಟೆ ಬಿಚ್ಚಿ ಮಗನ ಬ್ರ್ಯಾಂಡ್ ಪ್ರಚಾರ ಮಾಡಿದ ಶಾರುಖ್‌ ಖಾನ್‌!

SRK flaunts his ripped body as he promotes son Aryan

ಬೆಂಗಳೂರು: ಆರ್ಯನ್ ಖಾನ್  ತಮ್ಮ D’YAVOL X ಉಡುಪಿನ ಬ್ರ್ಯಾಂಡ್‌ ಅನ್ನು ಶಾರುಖ್‌ ಖಾನ್‌ (Shah Rukh Khan) ಜತೆ ಕ್ರಿಯೇಟಿವ್‌ ಆಗಿ ಪರಿಚಯಿಸಿದ್ದರು. ಈ ಜಾಹೀರಾತಿನೊಂದಿಗೆ ನಿರ್ದೇಶಕರಾಗಿಯೂ ಪದಾರ್ಪಣೆ ಮಾಡಿದರು ಆರ್ಯನ್‌. ಜನರು ಕೂಡ ಈ ಬ್ರ್ಯಾಂಡ್‌ ಬಗ್ಗೆ ಕುತೂಹಲಕ್ಕೆ ಒಳಗಾಗಿದ್ದರು. ಆರ್ಯನ್ ಖಾನ್ ಅವರ ಐಷಾರಾಮಿ ಬಟ್ಟೆ ಬ್ರಾಂಡ್ D’YAVOL X ಆನ್‌ಲೈನ್‌ನಲ್ಲಿ ಬರುತ್ತಿದ್ದಂತೆ ಬಟ್ಟೆಗಳ ದುಬಾರಿ ಬೆಲೆಗಳಿಂದ ಜನರು ಆಘಾತಕ್ಕೊಳಗಾಗಿದ್ದರು. ಇದೀಗ ಶಾರುಖ್‌ ಮತ್ತೆ ತಮ್ಮ ಮಗನ ಬಟ್ಟೆ ಬ್ರ್ಯಾಂಡ್‌ಗೆ ಪ್ರಚಾರ ಮಾಡಿದ್ದಾರೆ. ಅದೂ ಕೂಡ ಶರ್ಟ್‌ಲೆಸ್ ಆಗಿ!

ಶಾರುಖ್‌ ಅವರ ಮ್ಯಾನೇಜರ್ ಪೂಜಾ ದಾದ್ಲಾನಿ ಅವರು ಶಾರುಖ್‌ ಅವರ ಹೊಸ ಜಾಹೀರಾತನ್ನು ಹಂಚಿಕೊಂಡಿದ್ದಾರೆ. ಫೆಬ್ರವರಿ 25ರಂದು, ಪೂಜಾ ದದ್ಲಾನಿ ಶಾರುಖ್ ಖಾನ್ ಅವರ ‘ಹಾಟ್’ ಚಿತ್ರವನ್ನು ಹಂಚಿಕೊಂಡು “ಫಿಟ್‌ನೆಸ್‌ಗೆ ಪ್ರೇರಣೆ ಮತ್ತು ವಯಸ್ಸಿಗೆ ವಿರುದ್ಧವಾಗಿ. ಶಾರುಖ್‌ ಅವರಿಗೆ ವಯಸ್ಸಾಗುತ್ತಿಲ್ಲ, ಅವರು ಕ್ಲಾಸಿಕ್ ಆಗುತ್ತಿದ್ದಾರೆʼʼ ಎಂದು ಬರೆದುಕೊಂಡಿದ್ದಾರೆ. ಅಭಿಮಾನಿಗಳು ಕೂಡ ಶಾರುಖ್‌ ಅವರ ಬಾಡಿ ಕಂಡು ‘ಹಾಟ್’ ಮತ್ತು ‘ಸೆಕ್ಸಿ’ ಎಂದು ಕರೆಯುತ್ತಿದ್ದಾರೆ. ಇನ್ನು ಈ ಪೋಸ್ಟ್‌ಗೆ ಶಾರುಖ್‌ ಕೂಡ ತಮಾಷೆಯಾಗಿಯೇ ಉತ್ತರ ನೀಡಿದ್ದಾರೆ. “ಅದೆಲ್ಲ ಚೆನ್ನಾಗಿದೆ ಆದರೆ ನನಗೆ ಸ್ವಲ್ಪ ಹೊಸ ಬಟ್ಟೆ ಸಿಗಬಹುದೇ!!! D’YAVOL X ಮುಂದಿನ ಡ್ರಾಪ್ ಯಾವಾಗ?” ಎಂದು ಬರೆದಿದ್ದಾರೆ. ಈ ಫೋಟೋ 20 ಲಕ್ಷಕ್ಕೂ ಅಧಿಕ ಲೈಕ್ಸ್ ಸಿಕ್ಕಿದೆ. ತಂದೆಯ ಬೆಂಬಲ ನೋಡಿ ಆರ್ಯನ್ ಖುಷಿಪಟ್ಟಿದ್ದಾರೆ.

ಇದನ್ನೂ ಓದಿ: Shah rukh Khan : ಕನ್ನಡದಲ್ಲಿ ಮಾತನಾಡಿ ಅಭಿಮಾನಿಗಳ ಮನಗೆದ್ದ ಶಾರುಖ್​ ಖಾನ್​

ಈಗ ವೈರಲ್ ಆಗಿರುವ ಫೋಟೊದಲ್ಲಿ, ಶಾರುಖ್‌ ಕೈಯಲ್ಲಿ ಗ್ಲಾಸ್‌ ಲೋಟ, ಹಾಗೇ ಸನ್‌ಗ್ಲಾಸ್‌ ಜತೆ ಬಾಡಿ ಮೇಲೆ X ಮಾರ್ಕ್‌ ಕೂಡ ಹಾಕಿಕೊಂಡಿದ್ದಾರೆ. ಡಿ’ಯಾವೋಲ್ ಎಕ್ಸ್ ಆರ್ಯನ್ ಖಾನ್ ಅವರ ಐಷಾರಾಮಿ ಬಟ್ಟೆ ಬ್ರಾಂಡ್ ಆಗಿದೆ.

ಆರ್ಯನ್ ಖಾನ್ ಅವರ ಐಷಾರಾಮಿ ಬಟ್ಟೆ ಬ್ರಾಂಡ್ D’YAVOL X ವೆಬ್‌ಸೈಟ್‌ 2023ರ ಏಪ್ರಿಲ್‌ 30ರಂದು ಲೈವ್‌ಗೆ ಬಂದಿತು. ವೆಬ್‌ಸೈಟ್ ಲೈವ್ ಆದ ತಕ್ಷಣ, ಅನೇಕ ಜನರಿಗೆ ನೋಡಲು ಸಾಧ್ಯವಾಗಲಿಲ್ಲ. ʻʻಒಮ್ಮೆಲೆ ಜನರು ಪ್ರವೇಶಿಸಿದ ಕಾರಣ ಟ್ರಾಫಿಕ್ ಅನುಭವಿಸುತ್ತಿದ್ದೇವೆʼʼ ಎಂದು ಬ್ರ್ಯಾಂಡ್‌ ತನ್ನ ಟ್ವೀಟರ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿತ್ತು. ಬಳಿಕ ಸೈಟ್ ಮತ್ತೆ ಲೈವ್ ಆಗಿತ್ತು. ಬಳಕೆದಾರರು ನೋಡುತ್ತಿದ್ದಂತೆ ಬಟ್ಟೆಗಳ ದುಬಾರಿ ಬೆಲೆಗಳಿಂದ ಆಘಾತಕ್ಕೊಳಗಾಗಿದ್ದರು. ಕಮೆಂಟ್‌ಗಳಲ್ಲಿ ಜನರು ಅಸಮಾಧಾನ ಹೊರಹಾಕಿದ್ದರು. ಒಬ್ಬರು ʻʻಖಾನ್ ಸಾಬ್, ಇದನ್ನು ಕೊಂಡುಕೊಳ್ಳಲು ನನ್ನ ಒಂದು ಕಿಡ್ನಿಯನ್ನು ಮಾರಿದರೂ ಸಾಕಾಗುವುದಿಲ್ಲ, ನನ್ನ ಎರಡೂ ಕಿಡ್ನಿಗಳನ್ನು ಮಾರಬೇಕಾಗುತ್ತದೆ” ಎಂದು ಬರೆದರೆ ಇನ್ನೊಬ್ಬರು “ಈಗಷ್ಟೇ ಬೆಲೆಗಳನ್ನು ನೋಡಿದೆ. ಮಧ್ಯಮ ವರ್ಗದ ವ್ಯಕ್ತಿ ಎಂದಿಗೂ ಖರೀದಿಸಲು ಸಾಧ್ಯವಿಲ್ಲʼʼ ಎಂದು ಬರೆದುಕೊಂಡಿದ್ದರು.

Exit mobile version