ಬೆಂಗಳೂರು: ಆರ್‌ಆರ್‌ಆರ್, ಬಾಹುಬಲಿ ಮತ್ತು ಮಗಧೀರಗಳಂತಹ ಹಿಟ್ ಚಿತ್ರಗಳ ನಿರ್ದೇಶಕ SS ರಾಜಮೌಳಿ ಅವರ ಹೊಸ ಸಾಕ್ಷ್ಯಚಿತ್ರದ ಟ್ರೈಲರ್ ನೆಟ್‌ಫ್ಲಿಕ್ಸ್ ಬಿಡುಗಡೆಗೊಳಿಸಿದೆ. ʻಮಾಡರ್ನ್ ಮಾಸ್ಟರ್ಸ್ʼ ಎಂಬ ಶೀರ್ಷಿಕೆಯ ಅಡಿ ಟ್ರೈಲರ್ ಅನಾವರಣಗೊಂಡಿದೆ. ರಾಜಮೌಳಿ ನಿರ್ದೇಶನದ ಚಿತ್ರಗಳ ತೆರೆಮರೆಯ ದೃಶ್ಯಗಳು ಇದರಲ್ಲಿವೆ. ಮಾತ್ರವಲ್ಲ ಜ್ಯೂನಿಯರ್ ಎನ್‌ಟಿಆರ್, ರಾಮ್‌ಚರಣ್, ಜೇಮ್ಸ್ ಕ್ಯಾಮರೂನ್ ಸೇರಿದಂತೆ SS ರಾಜಮೌಳಿ ಅವರ ಕುರಿತು ಮಾತನಾಡಿದ್ದಾರೆ.
ಟ್ರೈಲರ್‌ನಲ್ಲಿ ಏನಿದೆ?
ಮೊದಲಿಗೆ ರಾಜಮೌಳಿ ಅಂದರೆ ಹೇಗೆ? ಎಂಬ ಪರಿಚಯ ಹಿನ್ನೆಲೆ ಧ್ವನಿಯಲ್ಲಿ ಮೂಡಿ ಬಂದಿದೆ. ಟ್ರೈಲರ್‌ನಲ್ಲಿ ʻʻನಾನು ನಂಬಲಾಗದ ಕಥೆಯನ್ನು ಹೇಳಲು ಬಯಸುತ್ತೇನೆ. ಜನರು ಸಿನಿಮಾದಲ್ಲಿ ಹೂಡಿಕೆ ಮಾಡಬೇಕೆಂದು ನಾನು ಬಯಸುತ್ತೇನೆ. ನಿರ್ದೇಶಕರ ಮೇಕಿಂಗ್ ಮತ್ತು ಅವರ ಚಲನಚಿತ್ರಗಳು ಪ್ರೇಕ್ಷಕರ ನಾಡಿಮಿಡಿತವನ್ನು ಹೇಗೆ ಮನ ಮುಟ್ಟಿದೆ ಎಂಬುದರ ಕುರಿತು ಒಂದು ನೋಟ ಇದರಲ್ಲಿ ಇದೆ. ಇದು ನಟರು, ತಂತ್ರಜ್ಞರು ಮತ್ತು ಕುಟುಂಬದ ಸದಸ್ಯರನ್ನು ಒಳಗೊಂಡ ಸಾಕ್ಷ್ಯಚಿತ್ರʼʼಎಂದಿದೆ.
ಟ್ರೈಲರ್ ಮಧ್ಯೆ ಅನೇಕ ನಟರು, ನಿರ್ದೇಶರು ರಾಜಮೌಳಿ ಅವರನ್ನು ಹೊಗಳಿದ್ದು ಹೀಗೆ. ಜ್ಯೂನಿಯರ್ ಎನ್‌ಟಿಆರ್ ಕೂಡ ರಾಜಮೌಳಿ ಅವರನ್ನು ಹೊಗಳಿದ್ದಾರೆ. ʻʻರಾಜಮೌಳಿ ಹುಟ್ಟಿದ್ದೆ ಸಿನಿಮಾ ಮಾಡಲು ಹಾಗೂ ಹೇಳದ ಕಥೆಗಳನ್ನು ಹೇಳಲು .ಸಿನಿಮಾದಲ್ಲಿನ ಅವರ ಸಮರ್ಪಣೆಗಾಗಿ ಅವರನ್ನುʻಮ್ಯಾಡ್ ಮ್ಯಾನ್ʼʼ ಎನ್ನಬಹುದು. ʻʻರಾಜಮೌಳಿ ಜೊತೆ ವಾದ ಮಾಡುವುದರಲ್ಲಿ ಅರ್ಥವಿಲ್ಲ. ಅವರು ಬಯಸಿದ್ದನ್ನು ಮಾತ್ರ ತಲುಪಿಸಿ.” ಎಂದು ಹೇಳಿಕೊಂಡಿದ್ದಾರೆ. ಬಾಹುಬಲಿಯಲ್ಲಿ ನಟಿಸಿರುವ ಪ್ರಭಾಸ್ ಹೀಗೆ ಹೇಳುತ್ತಾರೆ: “ನಾನು ಅಂತಹ ವ್ಯಕ್ತಿಯನ್ನು ಭೇಟಿ ಮಾಡಿಲ್ಲ. ಅವರೊಬ್ಬರು ʻʻಮ್ಯಾಡ್ ಪರ್ಸನ್ ಅಷ್ಟೇ.”ಎಂದಿದ್ದಾರೆ.
ಇದನ್ನೂ ಓದಿ: Niveditha Shivarajkumar: ʻಫೈರ್ ಫ್ಲೈ’ ಸಿನಿಮಾಗೆ ‘ಹೆಂಗೆ ನಾವು’ ಹುಡುಗಿ ನಾಯಕಿ! ಯಾವಾಗ ತೆರೆಗೆ?
ʻʻರಾಜಮೌಳಿ ಈಗಾಗಲೇ ‘ಲೆಜೆಂಡ್’ ಆಗಿದ್ದಾರೆ ಮತ್ತು ಇನ್ನು ಮುಂದೆ ಅವರ ವೃತ್ತಿಜೀವನದಲ್ಲಿ ಇನ್ನೂ ದೊಡ್ಡ ದಂತಕಥೆಯಾಗುತ್ತಾರೆʼʼ ಎಂದು ಚಲನಚಿತ್ರ ನಿರ್ಮಾಪಕ ಕರಣ್ ಜೋಹರ್ ಹೇಳುತ್ತಾರೆ. ಟೈಟಾನಿಕ್ ಮತ್ತು ಅವತಾರ್ ಅನ್ನು ನಿರ್ಮಿಸಿದ ಅಕಾಡೆಮಿ ಪ್ರಶಸ್ತಿ ವಿಜೇತ ಚಲನಚಿತ್ರ ನಿರ್ಮಾಪಕ ಜೇಮ್ಸ್ ಕ್ಯಾಮರೂನ್ ಸಹ ರಾಜಮೌಳಿ ಕುರಿತು ಹೇಳಿದ್ದು ಹೀಗೆ “ಯಾವುದೇ ಕೆಲಸವನ್ನು ಮಾಡಲು ಮತ್ತು ಯಾರೊಂದಿಗಾದರೂ ಕೆಲಸ ಮಾಡಲು ಅವರಿಗೆ ಅಷ್ಟೇ ಗೌರವವಿದೆ.”ಎಂದಿದ್ದಾರೆ.
SS ರಾಜಮೌಳಿಯವರ ಕೊನೆಯ ಚಿತ್ರ RRR. ಈ ಸಿನಿಮಾ ಜಾಗತಿಕ ಮನ್ನಣೆಯನ್ನು ಗಳಿಸಿತು ಮತ್ತು ಬ್ಲಾಕ್ಬಸ್ಟರ್ ಆಗಿ ಹೊರಹೊಮ್ಮಿತು. ಎಂಎಂ ಕೀರವಾಣಿ ಅವರು ನಾಟು ನಾಟು ಗಾಗಿ ಅತ್ಯುತ್ತಮ ಮೂಲ ಗೀತೆಗಾಗಿ ಆಸ್ಕರ್ ಪ್ರಶಸ್ತಿಯನ್ನು ಗೆದ್ದುಕೊಂಡರ., ಹಾಗೆಯೇ ಏಷ್ಯನ್ ಚಲನಚಿತ್ರದ ವಿಭಾಗದಲ್ಲಿ ಗೆದ್ದ ಮೊದಲ ಹಾಡು. ರಾಘವ್ ಖನ್ನಾ ನಿರ್ದೇಶಿಸಿದ ಮತ್ತು ಅನುಪಮಾ ಚೋಪ್ರಾ ನಿರ್ಮಿಸಿದ ಸಾಕ್ಷ್ಯಚಿತ್ರದ ʻಮಾಡರ್ನ್ ಮಾಸ್ಟರ್ಸ್ʼ ಆಗಸ್ಟ್ 2 ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ.