Site icon Vistara News

Suchitra Krishnamoorthi: ಶಾರುಖ್ ಖಾನ್ ಜತೆ ನಟಿಸಿರುವ ನಟಿಯ ಮುಖ ಬಲೂನ್‌ನಂತೆ ಊದಿಕೊಂಡಿದ್ದು ಏಕೆ?

Suchitra Krishnamoorthi Reveals Her Face Swelled Like A Balloon

ಬೆಂಗಳೂರು: ʻಕಭಿ ಹಾಂ ಕಭಿ ನಾʼ (Kabhi Haan Kabhi Naa) ಚಿತ್ರದಲ್ಲಿ ಶಾರುಖ್ ಖಾನ್ ಜತೆ ನಟಿಸಿದ ನಟಿ ಸುಚಿತ್ರಾ ಕೃಷ್ಣಮೂರ್ತಿ ಅವರ ಇತ್ತೀಚಿನ ಫೋಟೊಗಳು ವೈರಲ್‌ ಆಗಿವೆ. ಸುಚಿತ್ರಾ ಕೃಷ್ಣಮೂರ್ತಿ (Suchitra Krishnamoorthi) ಅವರ ಮುಖ ಊದಿಕೊಂಡಂತೆ ಕಂಡಿದೆ. ಇದಾದ ಬಳಿಕ ನಟಿಗೆ ಹಲವರು ಈ ಬಗ್ಗೆ ಪ್ರಶ್ನೆ ಇಟ್ಟಿದ್ದಾರೆ. ಇದೀಗ ನಟಿ ಸೌಂದರ್ಯ ಚಿಕಿತ್ಸೆಗೆ ಒಳಗಾಗಿದ್ದೇನೆ ಎಂದು ಒಪ್ಪಿಕೊಂಡಿದ್ದಾರೆ.

ಈವೆಂಟ್‌ನಿಂದ ತನ್ನ ಇತ್ತೀಚಿನ ಫೋಟೊವನ್ನು ಹಂಚಿಕೊಂಡ ಸುಚಿತ್ರಾʻʻಕಲಾ ಪ್ರದರ್ಶನದಲ್ಲಿ ನಾನು ಭಾಗಿಯಾಗಿದ್ದೆ. ಆಗ ನನ್ನ ಫೋಟೊಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ಮುಖ ಕೂಡ ಊದಿಕೊಂಡಂತೆ ಕಂಡಿತ್ತು. ಇದಾದ ಬಳಿಕ ಅನೇಕರು ನನ್ನ ಆರೋಗ್ಯವನ್ನು ವಿಚಾರಿಸುತ್ತಿದ್ದರು. ಮೊಣಕಾಲು ಕೂಡ ಕೆಲವು ದಿನಗಳಿಂದ ತೀವ್ರ ನೋವು ಆಗುತ್ತಿತ್ತು. ಅಷ್ಟೇ ಅಲ್ಲ ನನ್ನ ಮುಖ ಕೂಡ ಬಲೂನ್‌ನಂತೆ ಊದಿಕೊಂಡಿದೆ. ಕಾರಣ ಸೌಂದರ್ಯ ಚಿಕಿತ್ಸೆಯನ್ನು ಮಾಡಿದ್ದೇನೆ. ಹೀಗಾಗಿ ಮುಖ ಮರೆಮಾಚಲು ಪ್ರಯತ್ನಿಸಲಿಲ್ಲ. ಮತ್ತೆ ಮುಖ ಮುಂಚಿನಂತಾಗುತ್ತದೆ. ಸಮಯಬೇಕಷ್ಟೆʼʼ ಎಂದಿದ್ದಾರೆ.

ʻʻಕಾರ್ಯಕ್ರಮವೊಂದರಲ್ಲಿ ಜಾವೇದ್ ಅಖ್ತರ್ ಜತೆ ಮುಖ್ಯ ಅತಿಥಿಯಾಗಿ ಭಾಗಿಯಾಗಿದ್ದೆ. ಕ್ಷಮಿಸಿ ಗ್ಲ್ಯಾಮರ್‌ ಆಗಿ ಕಾಣಿಸಿಕೊಂಡಿಲ್ಲ. ನಿಮ್ಮ ಮತ್ತು ಕಾಳಜಿ ಪ್ರೀತಿಗಾಗಿ ಧನ್ಯವಾದʼʼ ಎಂದು ನಟಿ ತಮ್ಮ ಫಾಲೋವರ್ಸ್‌ಗೆ ಧನ್ಯವಾದ ಅರ್ಪಿಸಿದ್ದಾರೆ.

ಇದನ್ನೂ ಓದಿ: Shah Rukh Khan: ದೇವದಾಸ್ ಚಿತ್ರದಲ್ಲಿ ಶಾರುಖ್ ಖಾನ್ ನಿಜವಾಗ್ಲೂ ಕುಡಿದಿದ್ದರೆ?

ಸುಚಿತ್ರಾ ಅವರು ಸೋಷಿಯಲ್‌ ಮೀಡಿಯಾದಲ್ಲಿ ಆಗಾಗ ಸಾಮಾಜಿಕ ಮಾಧ್ಯಮದ ಮೂಲಕ ಹಲವು ಪೋಸ್ಟ್‌ಗಳನ್ನು ಶೇರ್‌ ಮಾಡಿಕೊಳ್ಳುತ್ತಿರುತ್ತಾರೆ. ವೈಯಕ್ತಿಕ ಮತ್ತು ವೃತ್ತಿಪರ ಜೀವನದ ಬಗ್ಗೆ ಚಿತ್ರಗಳು ಮತ್ತು ವೀಡಿಯೊಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ವಿವಿಧ ವಿಷಯಗಳ ಬಗ್ಗೆಯೂ ಧ್ವನಿಯಾಗುತ್ತಾರೆ.

ಕೆಲವು ದಿನಗಳ ಹಿಂದೆ ಉತ್ತರ ಪ್ರದೇಶದ ಎಸ್ ಎಸ್ ಎಲ್ ಸಿಯಲ್ಲಿ ಟಾಪರ್ (SSLC Topper) ಆಗಿರುವ ಪ್ರಾಚಿ ನಿಗಮ್ ಮುಖದ ಬಗ್ಗೆ ಹೆಚ್ಚು ಟ್ರೋಲ್‌ ಆಗಿತ್ತು. ಪ್ರಾಚಿ ನಿಗಮ್ ಬಗ್ಗೆ ಜಾಹೀರಾತನ್ನು ಹಾಕಿದ್ದಕ್ಕಾಗಿ ಸುಚಿತ್ರಾ ಬಾಂಬೆ ಶೇವಿಂಗ್ ಕಂಪನಿ ಮತ್ತು ಅದರ ಮಾಲೀಕರ ಮೇಲೆ ನಟಿ ಆಕ್ರೋಶ ಹೊರಹಾಕಿದ್ದರು. ಸಿನಿಮಾ ವಿಚಾರಕ್ಕೆ ಬಂದರೆ, 2022ರಲ್ಲಿ ಬಿಡುಗಡೆಯಾದ ಅಮೆಜಾನ್ ಪ್ರೈಮ್ ವಿಡಿಯೊ ಶೋ ʻಗಿಲ್ಟಿ ಮೈಂಡ್ಸ್‌ʼನಲ್ಲಿ (Guilty Minds) ಸುಚಿತ್ರಾ ಕೊನೆಯದಾಗಿ ಕಾಣಿಸಿಕೊಂಡರು.

Exit mobile version