Site icon Vistara News

Sunidhi Chauhan: ಗಾಯಕಿ ಸುನಿಧಿ ಚೌಹಾಣ್ ಮೇಲೆ ಬಾಟಲಿ ಎಸೆತ: ವಿಡಿಯೊ ವೈರಲ್‌!

Sunidhi Chauhan audience member throws bottle at her

ಬೆಂಗಳೂರು: ನಾಲ್ಕು ವರ್ಷ ಇರುವಾಗಲೇ ಗಾಯಕಿ ಸುನಿಧಿ ಚೌಹಾಣ್ (Sunidhi Chauhan) ಹಾಡಲು ಶುರು ಮಾಡಿದ್ದರು. ದೂರದರ್ಶನದಲ್ಲಿ ʻಮೇರಿ ಆವಾಜ್‌ ಸುನೋʼ ಎಂಬ ಸಿಂಗಿಂಗ್‌ ರಿಯಾಲಿಟಿ ಶೋನಲ್ಲಿ ವಿನ್ನರ್‌ ಆದವರು. ಇದೀಗ ಕಾರ್ಯಕ್ರಮವೊಂದರಲ್ಲಿ ಸುನಿಧಿ ಚೌಹಾಣ್ ಅವರ ಮೇಲೆ ಪ್ರೇಕ್ಷಕರೊಬ್ಬರು ನೀರಿನ ಬಾಟಲಿಯನ್ನು ಎಸೆದಿದ್ದಾರೆ. ಇದೀಗ ಈ ಕ್ಲಿಪ್‌ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಮಾತ್ರವಲ್ಲ ಸುನಿಧಿ ಚೌಹಾಣ್ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಕ್ಲಿಪ್‌ನಲ್ಲಿ, ಬಾಟಲಿ ಒಂದು ಕ್ಷಣ ಸುನಿಧಿ ಚೌಹಾಣ್ ಮೇಲೆ ಬೀಳುತ್ತಿದ್ದಂತೆ ಗಾಬರಿಯಾದರು. ಪ್ರದರ್ಶನವನ್ನು ಮುಂದುವರಿಸುವ ಮೊದಲು ಅವರು ಒಂದು ಕ್ಷಣ ಸ್ತಬ್ಧವಾಗಿ ನಿಂತು ಬಿಟ್ಟರು. ತನ್ನ ಕೈಯನ್ನು ಎದೆಯ ಮೇಲೆ ಇಟ್ಟುಕೊಂಡು ಸುತ್ತಲೂ ನೋಡಿದರು. ಸ್ವಲ್ಪ ಸಮಯದ ನಂತರ, ಸುನಿಧಿ ವೇದಿಕೆಯಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. ʻʻಬಾಟಲಿಗಳನ್ನು ಎಸೆದರೆ ಏನಾಗುತ್ತದೆ? ಹಾಗೆ ಮಾಡುವುದರಿಂದ ಪ್ರದರ್ಶನವು ನಿಲ್ಲುತ್ತದೆ. ನಿಮಗೆ ಹಾಗೆ ಆಗಬೇಕೆ?ಎಂದು ಪ್ರಶ್ನೆ ಇಟ್ಟಿದ್ದಾರೆ. ನೆರೆದ ಪ್ರೇಕ್ಷಕರು “ಇಲ್ಲ” ಎಂದು ಕೂಗಿದ್ದಾರೆ. ಈ ಸಂದರ್ಭವನ್ನು ಅತ್ಯಂತ ನಾಜೂಕಾಗಿ ಹ್ಯಾಂಡಲ್‌ ಮಾಡಿದ್ದಾರೆ ಸುನಿಧಿ.

ವಿಡಿಯೊಗೆ ಪ್ರತಿಕ್ರಿಯಿಸಿದ ಅಭಿಮಾನಿಯೊಬ್ಬರು, “ನಾಚಿಕೆಯಿಲ್ಲದವರು ! ಸುನಿಧಿ ಗ್ರೇಟ್‌” ಎಂದು ಬರೆದಿದ್ದಾರೆ. ಒಬ್ಬ ವ್ಯಕ್ತಿ, “ಇದು ತುಂಬಾ ಅಸಹ್ಯಕರ ನಡವಳಿಕೆ. ಸುನಿಧಿ ಗೌರವಕ್ಕೆ ಅರ್ಹಳು.” ಎಂದು ಕಮೆಂಟ್‌ ಮಾಡಿದ್ದಾರೆ. ʻʻಕಾರ್ಯಕ್ರಮವನ್ನು ಸುಲಭವಾಗಿ ಅವರು ಬಿಟ್ಟು ಹೋಗಬಹುದಿತ್ತು. ಆದರೆ ಸುನಿಧಿ ಹಾಗೇ ಮಾಡಿಲ್ಲ. ಅವಳು ಯಾವತ್ತು ಕ್ವೀನ್‌ʼʼಎಂದು ಮತ್ತೊಬ್ಬರು ಕಮೆಂಟ್‌ ಮಾಡಿದ್ದಾರೆ. ಸುನಿಧಿ ಕೂಡ ತಮ್ಮ ಇನ್‌ಸ್ಟಾದಲ್ಲಿ ಈವೆಂಟ್‌ನ ಫೋಟೊಗಳನ್ನು ಶೇರ್‌ ಮಾಡಿಕೊಂಡಿದ್ದಾರೆ. ಆದರೆ, ಘಟನೆಯ ಬಗ್ಗೆ ಏನು ಬರೆದುಕೊಂಡಿಲ್ಲ.

ಇದನ್ನೂ ಓದಿ: Ram Charan: ರಾಮ್‌ಚರಣ್‌ ಅಭಿನಯದ ʻಗೇಮ್ ಚೇಂಜರ್ʼ ಮೊದಲ ಸಾಂಗ್‌ ಔಟ್‌!

ಸುನಿಧಿ ಅವರು `ಮೇರಿ ಆವಾಜ್‌ ಸುನೋ’ ರಿಯಾಲಿಟಿ ಶೋನಲ್ಲಿ ಗೆದ್ದಿದ್ದರು. ಗೌತಮಿ ಮುಖರ್ಜಿ ಬಳಿ ಸುನಿಧಿ ಸಂಗೀತ ಅಭ್ಯಾಸ ಮಾಡಿದ್ದರು. ಬಾಬ್ಬಿ ಖಾನ್‌ ಅವರನ್ನು ಸುನಿಧಿ ಮದುವೆಯಾಗಿದ್ದರು. 2003ರಲ್ಲಿ ಇಬ್ಬರೂ ದೂರವಾದರು. 2012ರಲ್ಲಿ ಹೀತೇಶ್‌ ಸೋನಿಕ್‌ ಎಂಬುವರನ್ನು ಸುನಿಧಿ ಮದುವೆಯಾದರು. ಸುನಿಧಿಗೆ ಓರ್ವ ಪುತ್ರನಿದ್ದಾನೆ.

Exit mobile version