Site icon Vistara News

Swatantrya Veer Savarkar: ಮಾರ್ಚ್ 22ರಂದು ʻಸಾವರ್ಕರ್ʼ ಸಿನಿಮಾ ತೆರೆಗೆ : ʻಬಿಗ್‌ ಬಾಸ್‌ ʼ ಖ್ಯಾತಿಯ ಈ ನಟಿ ನಾಯಕಿ!

Swatantrya Veer Savarkar to release in theatres March 22

ಬೆಂಗಳೂರು: ನಟ ರಣದೀಪ್ ಹೂಡಾ (Randeep Hooda) ʻಸ್ವಾತಂತ್ರ್ಯ ವೀರ್ ಸಾವರ್ಕರ್ʼ (Swatantrya Veer Savarkar) ಸಿನಿಮಾ ಮೂಲಕ ತೆರೆಗೆ ಬರುತ್ತಿರುವ ವಿಚಾರ ಗೊತ್ತೇ ಇದೆ. ಇದೀಗ ಹಿಂದುತ್ವ ಸಿದ್ಧಾಂತವಾದಿ ವಿ ಡಿ ಸಾವರ್ಕರ್ ಅವರ ಜೀವನಚರಿತ್ರೆಯಾದ ʻಸ್ವಾತಂತ್ರ್ಯ ವೀರ್ ಸಾವರ್ಕರ್ʼ ಹಿಂದಿ ಮತ್ತು ಮರಾಠಿಯಲ್ಲಿ ಮಾರ್ಚ್ 22 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. (ಜನವರಿ 30) ಮಹಾತ್ಮಾ ಗಾಂಧಿಯವರ ನಿಧನ ದಿನದಂದು ‘ಸ್ವಸ್ವಾತಂತ್ರ್ಯ ವೀರ್ ಸಾವರ್ಕರ್’ ಸಿನಿಮಾ ರಿಲೀಸ್‌ ಡೇಟ್‌ ಅನೌನ್ಸ್‌ ಆಗಿದೆ.

ʻಹೈವೇʼ, ʻಸರಬ್ಜಿತ್ʼ ಮತ್ತು ʻಸುಲ್ತಾನ್‌ʼನಂತಹ ಹಿಟ್‌ ಸಿನಿಮಾಗಳಿಗೆ ಹೆಸರುವಾಸಿಯಾದ ನಟ ರಣದೀಪ್ ಹೂಡಾ ಅವರು ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ವಿಶೇಷವಾಗಿ ಬಿಗ್‌ ಬಾಸ್‌ ಸೀಸನ್‌ 17ರ ಖ್ಯಾತಿಯ ಅಂಕಿತಾ ಲೋಖಂಡೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಅಮಿತ್ ಸಿಯಾಲ್ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ,

ಈ ಬಯೋಪಿಕ್‌ನ ನಿರ್ಮಾಪಕ ಆನಂದ್ ಪಂಡಿತ್ ಅವರು ರಣದೀಪ್ ಹೂಡಾ ಈ ಸಿನಿಮಾದ ಪಾತ್ರಕ್ಕೆ ಎಷ್ಟು ಪ್ರಾಮುಖ್ಯತೆ ನೀಡಿದ್ದರು ಎಂದು ಈ ಹಿಂದೆ ಬಹಿರಂಗಪಡಿಸಿದ್ದರು. ನಟ ಈ ಪಾತ್ರಕ್ಕಾಗಿ 4 ತಿಂಗಳು 1 ಲೋಟ ಹಾಲು ಒಂದು ಖರ್ಜೂರ ತಿಂದು 26 ಕೆಜಿ ತೂಕ ಇಳಿಸಿರುವ ಬಗ್ಗೆ ಹೇಳಿಕೊಂಡಿದ್ದರು. ಚಿತ್ರದ ಚಿತ್ರೀಕರಣಕ್ಕಾಗಿ ನಟ ರಣದೀಪ್ ಹೂಡಾ ಅವರ ಆಹಾರಕ್ರಮದ ಬಗ್ಗೆ ಸಂದರ್ಶನದಲ್ಲಿ, ನಿರ್ಮಾಪಕ ಆನಂದ್ ಪಂಡಿತ್ ಅವರು ಮಾತನಾಡಿ ʻʻನಟ ರಣದೀಪ್ ಹೂಡಾ ತಮ್ಮ ಪಾತ್ರದಲ್ಲಿ ತುಂಬಾ ತೊಡಗಿಸಿಕೊಂಡಿದ್ದರು. ಶೂಟಿಂಗ್ ಮುಗಿಯುವವರೆಗೆ 1 ಲೋಟ ಹಾಲು ಒಂದು ಖರ್ಜೂರ ತಿಂದು 26 ಕಜಿ ತೂಕ ಇಳಿಸಿಕೊಂಡರು. ವೀರ್ ಸಾವರ್ಕರ್‌ಗೆ ಕೂದಲು ಇಲ್ಲದ ಕಾರಣ, ತಮ್ಮ ಕೂದಲನ್ನು ಸಹ ಬೋಳಿಸಿಕೊಂಡಿದ್ದಾರೆ” ಎಂದು ಹೇಳಿದ್ದರು. ಚಿತ್ರಕಥೆ ಬರಹಗಾರ ಉತ್ಕರ್ಷ್ ನೈತಾನಿ ಜತೆ ರಣದೀಪ್ ಕೂಡ ಸಿನಿಮಾ ಕಥೆ ಬರೆದಿದ್ದಾರೆ.

ಇದನ್ನೂ ಓದಿ: Swatantrya Veer Savarkar: ಸಾವರ್ಕರ್‌ರನ್ನು ವಿರೋಧಿಸಿದ್ದರು ನೇತಾಜಿ, ತಪ್ಪು ಇತಿಹಾಸ ಬೇಡ; ನಟ ಹೂಡಾರನ್ನು ಬೆಂಡೆತ್ತಿದ ನೇತಾಜಿ ಫ್ಯಾಮಿಲಿ

ರಣದೀಪ್ ಹೂಡಾ ಇದೀಗ ಸಿನಿಮಾ ರಿಲೀಸ್‌ ಆಗುವ ಬಗ್ಗೆ ಮಾತನಾಡಿ “ಸುಮಾರು ಎರಡು ವರ್ಷಗಳ ಪ್ರಯತ್ನ. ಅಂತಿಮವಾಗಿ ಸ್ವಾತಂತ್ರ್ಯದತ್ತ ಹೆಜ್ಜೆ ಹಾಕುವ ಸಮಯ ಬಂದಿದೆ. ಈ ಸಿನಿಮಾದಲ್ಲಿಯ ಪ್ರಯಾಣ ತುಂಬ ಕಠಿಣವಾಗಿತ್ತುʼʼಎಂದರು.

ಜೀ ಸ್ಟುಡಿಯೋಸ್, ಆನಂದ್ ಪಂಡಿತ್, ರಣದೀಪ್ ಹೂಡಾ, ಸಂದೀಪ್ ಸಿಂಗ್ ಮತ್ತು ಯೋಗೇಶ್ ರಾಹರ್ ಸಿನಿಮಾ ನಿರ್ಮಿಸಿದ್ದಾರೆ. ರೂಪಾ ಪಂಡಿತ್, ಸ್ಯಾಮ್ ಖಾನ್, ಅನ್ವರ್ ಅಲಿ, ಪಾಂಚಾಲಿ ಚಕ್ರವರ್ತಿ ಸಹ ನಿರ್ಮಾಣ ಮಾಡಿದ್ದಾರೆ.

Exit mobile version