Site icon Vistara News

The Lion King: ಆಲ್‌ ಟೈಮ್‌ ಫೇವರೇಟ್‌ ಕಾರ್ಟೂನ್‌ `ದಿ ಲಯನ್ ಕಿಂಗ್’ 30ನೇ ವಾರ್ಷಿಕೋತ್ಸವ

The Lion King 30 years influence on fans and actors

ಬೆಂಗಳೂರು: ʻದಿ ಲಯನ್ ಕಿಂಗ್ʼ ತನ್ನ 30ನೇ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದೆ. ಅದರ ನಟರು ಮತ್ತು ಅಭಿಮಾನಿಗಳು ʻದಿ ಲಯನ್ ಕಿಂಗ್ʼನಲ್ಲಿ ಕೆಲಸ ಮಾಡಿರುವಂತಹ ನೆನಪುಗಳು, ಮತ್ತು ಅನುಭವಗಳ ಬಗ್ಗೆ ಮಾತನಾಡಿದರು. 30 ವರ್ಷಗಳ ಹಿಂದೆ ಜೂನ್ 15 ರಂದು ಬಿಡುಗಡೆಯಾದ `ದಿ ಲಯನ್ ಕಿಂಗ್’ (1994) ಎಲ್ಲ ವಯೋಮಾನದವರನ್ನು ರಂಜಿಸಿತ್ತು. ಇಂದಿಗೂ ಈ ಕಾರ್ಟೂನ್‌ನಲ್ಲಿರುವ ಅದ್ಭುತ ಸನ್ನಿವೇಶಗಳನ್ನು ಹಲವರು ನೆನಪಿಸಿಕೊಳ್ಳುತ್ತಾರೆ. 2019ರ ಫೋಟೊರಿಯಾಲಿಸ್ಟಿಕ್ ಆವೃತ್ತಿಯನ್ನು ಒಳಗೊಂಡಂತೆ ಹಲವಾರು ಬಾರಿ ರೀಮೇಕ್ ಮಾಡಲಾಗಿದೆ. ಲಯನ್ ಕಿಂಗ್ ಹಿಂದಿಯಲ್ಲಿ ಬಿಡುಗಡೆಯಾಯಿತು, ಇದರಲ್ಲಿ ಶಾರುಖ್ ಖಾನ್, ಆಶಿಶ್ ವಿದ್ಯಾರ್ಥಿ, ಅಸ್ರಾನಿ, ಶ್ರೇಯಸ್ ತಲ್ಪಾಡೆ ಮತ್ತು ಸಂಜಯ್ ಮಿಶ್ರಾ ಮುಂತಾದ ಹೆಸರುಗಳನ್ನು ಒಳಗೊಂಡ ಪಾತ್ರಗಳು ಇದ್ದವು. ಇದೀಗ `ದಿ ಲಯನ್ ಕಿಂಗ್‌ಗೆ 30 ವರ್ಷ ಸಂದಿದೆ.

ನಟ ಶ್ರೇಯಸ್ ತಲ್ಪಾಡೆ ಈ ಬಗ್ಗೆ ಮಾತನಾಡಿ ʻʻಹಿಂದಿ ಆವೃತ್ತಿಯಲ್ಲಿ ಶಾರುಖ್ ಖಾನ್, ಸಂಜಯ್ ಮಿಶ್ರಾ ಮತ್ತು ಆಶಿಶ್ ವಿದ್ಯಾರ್ಥಿ ಸೇರಿದಂತೆ ಪೌರಾಣಿಕ ನಟರು ಕೆಲಸ ಮಾಡಿದ್ದರು. ಲಯನ್‌ ಕಿಂಗ್ ಮಾಡಲು ಮುಖ್ಯ ಕಾರಣವೆಂದರೆ ನನ್ನ ಮಗಳು.ಅವಳ ತಂದೆ ಈ ಲಯನ್‌ ಕಿಂಗ್‌ ಆವೃತ್ತಿಗೆ ಧ್ವನಿ ನೀಡಿದ್ದಾರೆ ಎಂದರೆ ಖಷಿ ಪಡುತ್ತಿದ್ದಳುʼʼಎಂದರು.

ಇದನ್ನೂ ಓದಿ: Child Death : ಮಕ್ಕಳ ಮಾರಾಟ ಜಾಲದಲ್ಲಿ ರಕ್ಷಣೆಯಾಗಿದ್ದ ಮಗು ಮೃತ್ಯು; ಅಂತ್ಯ ಸಂಸ್ಕಾರ ನೆರವೇರಿಸಿದ ಪೊಲೀಸರು

ಲಯನ್ ಕಿಂಗ್ ಹಲವಾರು ಕಾರಣಗಳಿಗಾಗಿ ನೋಡುಗರನ್ನು ಮೆಚ್ಚಿಸಿದೆ. ತಾಂತ್ರಿಕ ಕಾರಂಣಗಳಿಂದಲೂ ಪ್ರೇಕ್ಷರನ್ನು ಮೆಚ್ಚಿಸಿತ್ತು. ಬಿಡುಗಡೆ ಕಂಡಾಗ ಈ ಸಿನಿಮಾ ವರ್ಷದ ಅತಿ ಹೆಚ್ಚು ಗಳಿಕೆಯ ಚಲನಚಿತ್ರವಾಗಿ ಹೊರಹೊಮ್ಮಿತ್ತು. ಅತ್ಯುತ್ತಮ ಮೂಲ ಸ್ಕೋರ್ ಮತ್ತು ಅತ್ಯುತ್ತಮ ಮೂಲ ಗೀತೆಗಾಗಿ ಎರಡು ಅಕಾಡೆಮಿ ಪ್ರಶಸ್ತಿಗಳನ್ನು ಗೆದ್ದಿತ್ತು.
ಲಯನ್ ಕಿಂಗ್ ಬಗ್ಗೆ ಜನರು ಹೆಚ್ಚು ನೆನಪಿಸಿಕೊಳ್ಳುವ ವಿಷಯವೆಂದರೆ ಅದರ ಸೊಗಸಾದ ಸಂಗೀತ. ಸಂಯೋಜಕ ಹ್ಯಾನ್ಸ್ ಝಿಮ್ಮರ್ ಈ ಹಿಂದೆ ಡಿಸ್ನಿ ಸಂಗೀತ ತಂಡದೊಂದಿಗೆ ಮಾತನಾಡುತ್ತಾ, ʻದಿ ಲಯನ್ ಕಿಂಗ್ ಹೃದಯದಲ್ಲಿ ವಿಶೇಷ ಸ್ಥಾನವನ್ನು ಪಡೆದಿದೆ. ಕೇವ ಸಂಗೀತವನ್ನು ಸಂಯೋಜಿಸಿದ ಮಾತ್ರಕ್ಕಲ್ಲʼʼ ಎಂದು ಹೇಳಿದರು.

ಅನೇಕ ಅಭಿಮಾನಿಗಳಿಗೆ, ಲಯನ್ ಕಿಂಗ್ ಅನ್ನು ವೀಕ್ಷಿಸುವುದು ಅವರ ಬಾಲ್ಯದ ಪ್ರಮುಖ ಭಾಗವಾಗಿತ್ತು.
ಚಿತ್ರದ ಹಿಂದಿ ಆವೃತ್ತಿಯಲ್ಲಿ ʻಸ್ಕಾರ್‌ʼ ಪಾತ್ರಕ್ಕೆ ಧ್ವನಿ ನೀಡಿದ ನಟ ಆಶಿಶ್ ವಿದ್ಯಾರ್ಥಿ, ಡಬ್ಬಿಂಗ್ ಸವಾಲುಗಳ ಬಗ್ಗೆ ಅದೆಷ್ಟೋ ಬಾರಿ ಹೇಳಿಕೊಂಡಿದ್ದರು.

“ಸ್ಕಾರ್ ಒಂದು ಒಳ್ಳೆಯ ಪಾತ್ರವಾಗಿದೆ, ಅದಕ್ಕೆ ನನ್ನ ಧ್ವನಿಯನ್ನು ನೀಡುವ ಅನುಭವವು ಅಸಾಧಾರಣವಾಗಿದೆ. ತುಂಬ ಸವಾಲಾಗಿತ್ತು. ಮೂಲ ಇಂಗ್ಲಿಷ್ ಆವೃತ್ತಿ ಆದರೂ ಹಿಂದಿಯಲ್ಲಿ ಪಾತ್ರದ ಡೈಲಾಗ್‌ ಕೂಡ ಚೆನ್ನಾಗಿ ಬರೆಯಲಾಗಿದೆ ಹಿಂದಿ ಆವೃತ್ತಿ ಕೂಡ ಚೆಂದವಾಗಿ ಮೂಡಿತ್ತು. ‘ಹೂನ್ ತಯಾರ್’ ಹಾಡನ್ನು ಹಾಡಲು ನನ್ನನ್ನು ಕರೆದರು. ಹಾಡುವಾಗ, ಸ್ಕಾರ್‌ಗಾಗಿ ಸಂಪೂರ್ಣ ಧ್ವನಿಯನ್ನು ಏಕೆ ಮಾಡಬಾರದು ಎಂದು ಸಲಹೆ ನೀಡಿದರು. ಅದರಂತೆ ಬಳಿಕ ಧ್ವನಿ ನೀಡಿದೆʼʼಎಂದು ಹೇಳಿದರು. ಬಿಡುಗಡೆಯಾಗಿ ಮೂವತ್ತು ವರ್ಷಗಳೇ ಕಳೆದರೂ ಚಿತ್ರ ಇನ್ನೂ ಔಟ್‌ ಡೇಟ್ ಆಗಿಲ್ಲ.

Exit mobile version