ಈ ಬಾರಿ ಪ್ರತಿಷ್ಠಿತ ವಿಶ್ವ ಸುಂದರಿ (Karan Johar) ಸ್ಪರ್ಧೆಗೆ ಭಾರತವೇ ವೇದಿಕೆಯಾಗಲಿದೆ. ಭಾರತ 28 ವರ್ಷಗಳ ಸುದೀರ್ಘ ಅಂತರದ ಬಳಿಕ ಈ ಕಾರ್ಯಕ್ರಮವನ್ನು ಆಯೋಜಿಸಲಿದೆ. ಕರಣ್ ಜೋಹರ್ ಅವರು ಮಾರ್ಚ್ 9ರಂದು ನಡೆಯಲಿರುವ 71ನೇ ವಿಶ್ವ ಸುಂದರಿ ಕಾರ್ಯಕ್ರಮದ ನಿರೂಪಕರಾಗಿದ್ದಾರೆ. ವಿಶ್ವ ಸುಂದರಿ ಸ್ಪರ್ಧೆಯು ಫೆಬ್ರವರಿ 18ರಿಂದ ಮಾರ್ಚ್ 9ರ ವರೆಗೆ ನಡೆಯಲಿದೆ. ಈ ಸ್ಪರ್ಧೆಗಳು ದೆಹಲಿಯ ಭಾರತ್ ಮಂಟಪದಲ್ಲಿ ಮತ್ತು ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆಯಲಿವೆ. ಫೈನಲ್ ಪಂದ್ಯಗಳು ಮುಂಬೈನಲ್ಲಿ ಜರುಗಲಿವೆ.
ವಿಶ್ವ ಸುಂದರಿಯ ಅಧಿಕೃತ ಇನ್‌ಸ್ಟಾಗ್ರಾಮ್ ಪ್ರೊಫೈಲ್ ಮಾಹಿತಿ ಹಂಚಿಕೊಂಡಿದ್ದು. “ಭಾರತದ ಹೆಸರಾಂತ ಚಲನಚಿತ್ರ ನಿರ್ಮಾಪಕ ಕರಣ್ ಜೋಹರ್ ಅವರು 71ನೇ ಕಾರ್ಯಕ್ರಮದ ನಿರೂಪಕರಾಗಿದ್ದಾರೆ. ಎರಡು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಸೇರಿದಂತೆ ಸಾಕಷ್ಟು ಚಲನಚಿತ್ರ ಪ್ರಶಸ್ತಿಗಳಿಗೆ ಅವರು ಭಾಜನರಾಗಿದ್ದಾರೆ. ಅವರಿಗೆ ಭಾರತ ಸರ್ಕಾರವು ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ” ಎಂದು ಬರೆದುಕೊಂಡಿದೆ.
71ನೇ ವಿಶ್ವ ಸುಂದರಿ ಮಾರ್ಚ್ 9ರಂದು ಮುಂಬೈನಲ್ಲಿ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ಸಂಜೆ 7.30 ಕ್ಕೆ (IST) ನಡೆಯಲಿದೆ. ಈವೆಂಟ್ ಅನ್ನು ಸೋನಿ ಲಿವ್‌ನಲ್ಲಿ ಲೈವ್ ಸ್ಟ್ರೀಮ್ ಮಾಡಲಾಗುತ್ತದೆ. ಮಿಸ್ ಇಂಡಿಯಾ ವರ್ಲ್ಡ್ 2022 ಸಿನಿ ಶೆಟ್ಟಿ ಜಾಗತಿಕ ವೇದಿಕೆಯಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ.
ಇದನ್ನೂ ಓದಿ: Actor Ravichandran: ಪ್ರೇಮಲೋಕ 2 : ಸಿನಿಮಾದಲ್ಲಿ ಎಲ್ಲರಿಗೂ ನಟಿಸೋ ಅವಕಾಶ ಇದೆ ಎಂದ ರವಿಚಂದ್ರನ್!
This is HUGE! #KaranJohar announced as the host for the 71st Miss World Festival, as India prepares to make its mark on the international stage like never before. pic.twitter.com/kY1elhCt8K
— Punjab Kesari (@punjabkesari) March 5, 2024
ಹಿಂದಿನ ವಿಶ್ವ ಸುಂದರಿ ವಿಜೇತೆ ಪೋಲೆಂಡ್‌ನ ಕರೋಲಿನಾ ಬಿಲಾವ್ಸ್ಕಾ ಆಗಿರುವುದು ಗೊತ್ತಿರುವ ಸಂಗತಿ. ಈ ಬಾರಿ ಭಾರತದಲ್ಲಿ ನಡೆಯುವ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ವಿಶ್ವ ಸುಂದರಿ ಪಟ್ಟವನ್ನು ನೀಡಲಾಗುತ್ತದೆ. 130ಕ್ಕೂ ಹೆಚ್ಚು ದೇಶಗಳ ಸ್ಪರ್ಧಿಗಳು ಈ ಸಮಾರಂಭದಲ್ಲಿ ಭಾಗವಹಿಸಿ ತಮ್ಮ ಸೌಂದರ್ಯ ಮತ್ತು ಪ್ರತಿಭೆಯನ್ನು ಪ್ರದರ್ಶಿಸಲು ಸಿದ್ಧರಾಗುತ್ತಿದ್ದಾರೆ.
ನಮ್ಮ ದೇಶದಲ್ಲಿ 1996ರಲ್ಲಿ ಬೆಂಗಳೂರಿನಲ್ಲಿ ಕೊನೆಯ ಬಾರಿಗೆ ವಿಶ್ವ ಸುಂದರಿ ಸ್ಪರ್ಧೆ ನಡೆದಿತ್ತು. 1966 ರಲ್ಲಿ ಭಾರತದ ರೀಟಾ ಫರಿಯಾ ಪೊವೆಲ್ ಎಂಬ ಯುವತಿ ವಿಶ್ವ ಸುಂದರಿ ಕಿರೀಟವನ್ನು ಗೆದ್ದಿದ್ದರು.